Wednesday 31 December 2014

ನೆನಪಿನ ನೋವಲ್ಲಿ..!!

ನೆನಪಿನ ನೋವಲ್ಲಿ..!!

ದಿನವೂ ನಿನ್ನ ನೆನಪು ಅಂತ ಅಲ್ಲ ಗೆಳತಿ
ನಿನ್ನ ಬಿಟ್ಟು ಬೇರೆ ಯಾವ ಲೋಕವು ನನಗೆ ತಿಳಿದಿಲ್ಲ

ಬಹುಶಹ ಇದು 31/12/2013 ಆಗಿದ್ದರೆ ನೀನು ನನ್ನೊಂದಿಗೆ  ಮಾತಾಡುತ್ತಿದ್ದೆ ಅಲ್ವಾ ಕೋತಿ. ಇಂದು ಅದೇ 31/12 ಆದರೆ 2013 ಅಲ್ಲ ಕಾಣೆ 2014 . ನೀನು ಬರಿಯ ನೆನಪಾಗಿ ಉಳಿದಿರುವೆ ಕಣೊ .ಯಾಕೆ ಇಷ್ಟೊಂದು ನೆನಪಾಗುತ್ತಿದ್ದೀಯ ,ಮಗುವಿಗೆ ಅಮ್ಮನ ನೆನಪಾದಂತೆ . ತುಂತುರು ಹನಿಗಳಿಗೆ ಕಾಮನಬಿಲ್ಲಿನ ರಂಗಿನಂತೆ. ಕೃಷ್ಣನ ಕೊಳಲಿನ ನಾದದಂತೆ.
ನೀನು ಬರಿಯ ನೆನಪೆಂದು ಅದೆಲ್ಲೋ ದೂರದಲ್ಲಿನ ನಕ್ಷತ್ರಗಳನ್ನ ಎಣಿಸೋಣ ಎಂದರೇ ಆ ಮಿನುಗುವ ಚುಕ್ಕಿಗಳಲ್ಲೂ ನಿನ್ನ ನಗುವೇ ಕಾಣುತ್ತಿದೆ ಕಣೋ,ಹಾಲಿನ ಬಿಲ್ಲೆಯಂತೆ ಕಾಣ್ತಿದ್ದ ಆ ಕಳ್ಳ ಚಂದ್ರನನ್ನ ನೋಡೋಣ ಅಂತ ಕಣ್ಣ ರೆಪ್ಪೆಯ ಸರಿಸಿದರೆ ಅಲ್ಲೂ ನಿನ್ನ ಮೊಗವೇ ಕಾಣ್ತಿದೆ ,ಇಷ್ಟು ನೆನಪಾಗುತ್ತಿರುವ ನಿನ್ನ ನೆನಪಲ್ಲೇ ನಾ ಹುಚ್ಚನಾಗುವೆನೆಂಬ ಭಯ ಆಗುತ್ತಿದೆ  ಕೋತಿ.
ನಿನ್ನ ಹೆಸರನ್ನ ಒಮ್ಮೆ ಆ ಆಕಾಶಕ್ಕೆ ಹೇಳೋ ಆಸೆ ಆಗ್ತಿದೆ ಹೇಳ್ಳಾ?

ನೆನಪುಗಳಲ್ಲೆ ನೆನೆದು ನೆನೆದು
ಹೃದಯ ಹಸಿರಾಗಿದೆ
ನಿನ್ನ ನೆನಪುಗಳ ಮಂಜು ಮುಸುಕಿ
ನನ್ನ ಹೃದಯದ ಕಾಡು ಮಂಕಾಯಿತು

31/12/2013 ರನ್ನ ನೆನೆದರೆ ನಾನು ಒಂದು ವರ್ಷ ಚಿಕ್ಕವನಗಿಬಿಡ್ತೀನಿ ಕಣೊ , ದಿನಗಳು ಕಳೆದು ಕಳೆದು ,ನಿತ್ಯ ಕನಸ್ಸುಗಳ ಬುತ್ತಿ ಹೊತ್ತು 2013ರಕ್ಕೆ ವಿದಾಯ ಹೇಳುವ ತುಡಿತದಲ್ಲಿ ಇದ್ದ ಆ ಕ್ಷಣ . ಎಷ್ಟೋ ಭಾರೀ ಮಾತಾಡಿದ್ದರು , ಆಗಿನ್ನೂ ಪರಿಚಯವಾದಂತೆ ಇತ್ತು. ಪರಿಚಯವಾದ ಅಪರಿಚಿತರಂತೆ ಮೌನವನ್ನೇ ಮಾತನ್ನಾಗಿಸಿ ಸಮಯ ಕಳೆಯುತ್ತಿದ್ದೆವು .ಅಂದು ಅದೆಷ್ಟು ಬೇಗ 11 ಗಂಟೆಯಾಯಿತು ಗೊತ್ತಿಲ್ಲ . ಹೊಸ ವರ್ಷಕ್ಕೆ ಕೇವಲ 1 ಗಂಟೆ . ಅಂದ್ರೆ 60 ನಿಮಿಷ only 3600 ಸೆಕೆಂಡ್ಗಳು ,ಅದೆಷ್ಟು ಭಾರೀ ಗಡಿಯಾರದ ಕಡೆ ತಿರುಗಿದೇನೋ ಗೊತ್ತಿಲ್ಲ ಎಣಿಸಿದ್ದರೆ ಸೆಕೆಂಡ್ ಮುಳ್ಳು ಚಲಿಸಿದಕ್ಕಿಂತ ಹೆಚ್ಚು ಗಡಿಯಾರದ ಕಡೆ ನೋಡಿತಿದ್ದೆ ಅನಿಸ್ತಿದೇ ನಿಮಿಷಗಳು ಕಳೆದಂತೆ ಜೋರಾಗುತ್ತಿರುವ ಹೃದಯದ ಮಿಡಿತ.
ಸಮಯ ಅದಾಗಲೇ 11:55 ನಿನ್ನೊಡನೆ ಮಾತನಾಡಲು ಕಾಲ್ ಮಾಡಿದ್ದು ಅಷ್ಟೇ ಗೊತ್ತಿರೋದು ಆ ನಾಲ್ಕು ನಿಮಿಷ ಎಂ ಮಾತಾಡಿದೇವೋ ಗೊತ್ತಿಲ್ಲ time ಅದಾಗಲೇ 11:59 ಆಗಿತ್ತು. 2013ರರ ಕೊನೆಯ ನಿಮಿಷವನ್ನ ನೀನೊಂದಿಗೆ ಕಳೆಯುತ್ತಿದ್ದೆ . ಅದಾಗಲೇ ಕೌಂಟ್ ಡೌನ್ ಶುರು 59........10......3 2 1 HAPPY NEW YEAR ಎಂದು ನಿನ್ನ ಹೆಸರನ್ನ ಆ ನಡು ರಾತ್ರಿಯಲ್ಲಿ ಹುಚ್ಚನಂತೆ ಕಿರುಚಿದ ಆ ಕ್ಷಣ ಇಂದಿಗೂ ಕಾಡುತ್ತಿದೆ.

ನೆನಪಿನಲ್ಲಿ ನೆನಪಾಗಿ ಕಳೆದ ,ಕಳೆದ ವರ್ಷ
ಪ್ರೀತಿಯಲ್ಲಿ ಪ್ರೀತಿಯಿಂದ ಬರುತ್ತಿರುವ ಮುಂದಿನ ವರ್ಷ
ಜೀವನದ ಜೊತೆಯಲ್ಲಿ ಜೊತೆಯಾಗುವ ಈ ವರ್ಷ

ಅಂದು ನಿನ್ನೊಡನೆ ಮಾತನಾಡಲು , ಸಮಯವ ಕಳೆಯಲು ಕಾರಣವಿರಲಿಲ್ಲ ,ಕಳೆದ ಕ್ಷಣವಿರಲಿಲ್ಲ .ಆದರೆ ಇಂದು ನೀನೊಂದಿಗೆ ಹೆಜ್ಜೆ ಹಾಕಿದ ಪ್ರತಿ ಕ್ಷಣ ಉಂಟು ಅದನ್ನ ನಿನ್ನೊಡನೆ ಅಂಚಿಕೊಳ್ಳಲು ನೀನು ನನ್ನೊಂದಿಗಿಲ್ಲ ,ನನ್ನವಳಾಗಿ ಉಳಿದಿಲ್ಲ. ಪ್ರತಿ ಕ್ಷಣ , ಪ್ರತಿ ದಿನ ನೀ ನಾನೊಂದಿಗೆ ಇರುವೆ ಆದರೆ ಅದು ಬರಿಯ ನೆನಪಿನ ನೆಪವಾಗಿ ಅಷ್ಟೇ ಕಣೊ ಕೋತಿ .
ಅಪರಿಚಿತರಂತೆ ಬಂದು
ಪರಿಚಿತವಾದ ಹಾದಿಯಲ್ಲಿ 
ನೆಡೆದು ಹೋಗುವ ನಡುವೆ
ಉಳಿದದ್ದು ಕರಿನೆರಳಿನ ನೆನಪುಗಳು
                                               -manu


Wednesday 24 December 2014

ಕವನ-28


ಎಲ್ಲವೂ ನೀನೇ..!!

ನಿನ್ನ ನೆನಪು ಕೆಂಡ ಸಂಪಿಗೆಯಂತೆ
ನೆನೆಯಲಾಗುತ್ತಿದೆ ಒರೆತು 
ಸವಿಯಲಾಗುತ್ತಿಲ್ಲ.

ನಿನ್ನ ನಗುವು ಗುಲಾಬಿ ಹೂವಿನಂತೆ
ನೋಡಲಾಗುತ್ತಿದೆ  ಒರೆತು 
ಭಾಗಿಯಾಗಲಾಗುತ್ತಿಲ್ಲ.

ನಿನ್ನ ಕಣ್ಣ ನೋಟ ಮೊನಚಾದ ಖಡ್ಗದಂತೆ
ಗ್ರಹಿಸಬಹುದಷ್ಟೆ ಒರೆತು 
ಉತ್ತರಿಸಲಾಗುತ್ತಿಲ್ಲ.

ನಿನ್ನ ಮೊಗವು ಮುಂಗುರುಳ ಚಂದ್ರನಂತೆ
ಕೈ ತೋರಿ ಹೇಳಬಹುದೇ ಒರೆತು 
ತಲುಪಲಾಗುತ್ತಿಲ್ಲ .

ನನ್ನ ಪ್ರೀತಿ ಸಪ್ತ ಸಾಗರದಂತೆ
ವ್ಯರ್ಥವಾಗುತ್ತಿದೆ ಒರೆತು 
ನಿನ್ನಗೇ ತಿಳಿಸಲಾಗುತ್ತಿಲ್ಲ .


ಬದುಕು ಎಂಬ ಈ ಪಯಣ
ಯಶಸ್ಸಿನ ಕಡೆಗೆ ಒರೆತು
ಮಸಣದ ಕಡೆಗಲ್ಲ.
                      -ಮನು


Monday 22 December 2014

ಮೊದಲ ಕ್ಷಣ..!!

ಮೊದಲ ಕ್ಷಣ ..!!

ಆರಂಭದ ಆ ದಿನಗಳು
ಆಕರ್ಷಣೆಯ ಆ ಕಂಗಳು 
ಅಕ್ಕರೆಯ ಆ ನುಡಿಗಳು
ಆನಂದದ ಆ ನಲಿಯುವಾಗು
ಅಭಿಲಾಷೆಯ ಮನಗಳು
ಆಲಂಗಿಸುವ ಆ ನೋವುಗಳು

ಯಾಕೋ ಗೊತಿಲ್ಲ ಗೆಳತಿ ಮರೆಯಲಾಗುತ್ತಿಲ್ಲ ಆ ಎಲ್ಲ ಕ್ಷಣಗಳನ್ನ , ಅದ್ಯಾವುದೋ ನೆಪದಲ್ಲಿ ಪರಿಚಯವಾದ ನೀನು ಇಂದು ನನ್ನ ಮನಸ್ಸಿಗೆ ಇಷ್ಟು ಹತ್ತಿರವಾಗುತ್ತಿಯ ಎಂದು ನಾನು ಕನಸ್ಸಲ್ಲೂ ಉಹಿಸಿರಲಿಲ್ಲ .
ನಿನ್ನ ಒಂದು ಗಳಿಗೆಯೂ ಮರೆತು ಬದುಕಲಾರೆ ಗೆಳತಿ .
 ನೀ ನನಗೇ ನೆನಪಾಗುವ ಪ್ರತಿಯೊಂದು ಕ್ಷಣ ಅದೆಲ್ಲಿಂದಲೋ ಗೊತಿಲ್ಲ ಸಿ,ಸ್ ಅಶ್ವಥ್ ಸರ್ ರವರ ಕಾಣದ ಕಡಲಿಗೆ ಹಂಬಲಿಸಿದೆ ಮನ ಎಂಬ ಹಾಡು ನನ್ನ ಎದೆಯಲ್ಲಿ ಮನೆ ಮಾಡುವಂತೆ ಮಾಡುತ್ತದೆ , ಅದರ ಗುಂಗಿನಲ್ಲಿರುವ ರವಿ ಅಣ್ಣಾ ಬರೆದ ಲವ್ ಲವಿಕೆಯ ಕಥೆಗಳು ಸಾಲು ಸಾಲಾಗಿ ಬರುತ್ತವೆ . click

ನಿನ್ನ ಮೊದಲ ಭಾರೀ ಕಂಡದ್ದು ಕಾಲೇಜ್ ನಾ ಮೊದಲ ದಿನ ,ಆದರೆ ನಿನ್ನ ಪರಿಚಯವಾದದ್ದು ಅಂದು 19 ಜೂನ್ ,ಅದಾಗಲೇ ಕಾಲೇಜ್ ಬಿಟ್ಟು ಕೆಲ ಸಮಯ ಕಳೆದಿತ್ತು ,ಇತ್ತ ಸೂರ್ಯನು ತನ್ನ ಇರುವಿಕೆಯನ್ನ ನೆನಪಿಸಲು ಕಿರಣಗಳತೀಕ್ಷ್ಣತೆಯನ್ನು ಎಚ್ಚಿಸುತ್ತ ನಗೆ ಬೀರುತ್ತಿದ್ದನು.
ಪರಿಚಿತನಿಗೆ ಅಪರಿಚಿತನಂತೆ ಕಾಣುತ್ತಿದ್ದ ಸೆಂಟ್ರಲ್ ಬುಸ್ ಸ್ಟಾಪ್ ಅಲ್ಲಿ 258 ಬಸ್ಸಿಗಾಗಿ ಕಲ್ಲಿನ ಕುರ್ಚಿಯ ಮೇಲೆ ಅಮಾಯಕನಂತೆ ಕುಳಿತ್ತಿದ್ದೆ . ಅದ್ಯಾವುದೋ ನೆಪವಿಟ್ಟುಕೊಂಡು ಆ ಜನರ ಗುಂಪಿನ ಮಧ್ಯದಿಂದ ನನ್ನೆಡೆಗೆ ಮೆಲ್ಲ ನಗುವ ಬೀರುತ್ತಾ ಬಂದವಳು ನೀನು . ಆ ನಗು ನನ್ನೆದೆಗೆ ಮುದವ ನೀಡಿದಂತಿತ್ತು .ಅಂದು ನನ್ನ ಕಣ್ಣಿಗೆ ನೀನು ಯಾವುದೋ ಲೋಕದಿಂದ ಬಂದಂತೆ ಕಾಣುತ್ತಿದ್ದೆ ,ಅಂದು ನಾವು  ಎಷ್ಟು ಮಾತನಾಡಿದೆವು ನನಗೇ ಗೊತ್ತಿಲ್ಲ. ಮೊದಲ ಬಾರಿ ಹುಡುಗಿಯೋಡನ ಅಷ್ಟು ಮಾತಾಡಿದ್ದು . ನಿನ್ನ ಫ್ರೆಂಡ್ ನನ್ನ  ಎಷ್ಟು ಬೈಕೊಂಡ್ಲೋ ಗೊತ್ತಿಲ್ಲ . ಅಂದು ನಿನ್ನೊಡನೆ ಕಳೆದ ಆ ಕ್ಷಣ ಇಂದಿಗೂ ಮರೆತ್ತಿಲ್ಲ . ಅಂದು ನನ್ನ ಬದುಕಿಗೆ ಹೊಸ ನಾಂದಿಯನ್ನ ಹಾಡಿದಂತಿತ್ತು .
ನನ್ನ ಪ್ರತಿನಿತ್ಯ ಕಾಡುವ ನೆನಪೇ
ಮರೆತು ಮಂಕಾಗುವುದೇ  ನಿನ್ನಯ ಹೊಳಪೇ
ನೆನಪುಗಳ ನೆಪದಲ್ಲಿ ಕಾಡುತ್ತಿರುವೆಯಲ್ಲೇ
ನೆನಪುಗಳು ಮಾಸುವ ಮುನ್ನವೇ ಬರುವೆಯೇ?
 ಆದರೆ ಇಂದು ಅದೇ ಸೆಂಟ್ರಲ್  ಬಸ್ ಸ್ಟಾಪ್ ಅಲ್ಲಿ ,ಅದೇ ಕಲ್ಲಿನ ಕುರ್ಚಿಯ ಮೇಲೆ, ಅದೇ 258 ಬಸ್ಸಿಗಾಗಿ ಕಾದು ಕುಳಿತಿರುವೆ,ಅದೇ ಜನರ ಗುಂಪು ಇದೆ ಆದರೆ ನನ್ನೊಡನೆ ಮಾತನಾಡಲು ನಿನ್ನೊಬ್ಬಳಿಲ್ಲ , ನೀ ಇರದ ಈ ಕಲ್ಲು ಕುರ್ಚಿ ಖಾಲಿಯದಂತಿದೆ , ಕಾದು ಕುಳಿತಿರುವೆ ಗೆಳತಿ ನಿನಗಾಗಿ ನಿನ್ನ ಬರುವಿಕೆಗಾಗಿ .

ನಿನ್ನ ನೆನಪು ಅಗ್ನಿ ಸ್ನಾನದ ರೀತಿ
ನಿನ್ನ ಮರೆವು ಸುಡುವ ಹಿಮದ ಭೀತಿ
ಸುಖದ ಮಾಯಾಜಿಂಕೆಯ ಹುಡುಕುತ ಹೊರೆಟಿರುವೆ
ಹೂ ದಾರಿಯಲ್ಲಿ ಬರಿಯ ನೋವು ಮುಳ್ಳು 
ನಂಬಿಕೆಯನಿಟ್ಟು ನನ್ನೊಡನೆ ಬಾ ಗೆಳತಿ
ಕೈಯ ಹಿಡಿದು ನೆಡೆಸುವೇ ಜೊತೆಯಲಿ
ನಿಂತ ದೋಣಿಯ ಕೆಳಗೆ ಕಡಲು ಚಲಿಸುವ ಹಾಗೆ
ಮರಣವು ಮಗುವಿನಂತೆ ಬರುವತನಕ ನಿನ್ನ ಜೊತೆಯಲಿ 

                                                -----ನಿನ್ನವ ಮನು




Saturday 20 December 2014

ಕವನ-27


ಒಮ್ಮೆ ನೀನಗಾಗಿ

ಕನಸ್ಸಲ್ಲಿ ಕಂಡವಳು ಕಣ್ಣಲ್ಲಿ ಸೆರೆಯಾದಳು
ನನ್ನಸಲ್ಲಿ ಸಿಕ್ಕವಳು ಒಮ್ಮೆಗೇ ಮರೆಯಾದಳು
ಕಾಡುತ್ತಿರುವ ಅವಳ ನೆನಪನ್ನ ಮಳೆಯಲ್ಲಿ ತೊಯುವಾಸೆ 
ಹನಿ ಹನಿಯಲ್ಲೂ ಅವಳ ಮೊಗವನ್ನ ನೋಡುವಾಸೆ
ಹಂಬಲದಿ ಅವಳೊಡನೆ ಮಳೆಯಲ್ಲಿ ನೆಡೆಯುವಾಸೆ 
ತುಂತುರು ಹನಿಯಲ್ಲಿ ಅವಳ ಕಣ್ಣ ಹೊಲಪ ನೋಡುವಾಸೆ
ಅವಳ ನಗುವಿಗೆ ನಾ ಕಾರಣವಾಗುವಾಸೆ 
ಕವಿತೆಯ ಕೊನೆಯಲ್ಲಿ ನಿನ್ನ ಹೆಸರ ಬರೆಯುವಾಸೆ

                                                       -M@nu



Tuesday 16 December 2014

ಮಳೆಯ ಜೊತೆಯಲ್ಲಿ..ನೆನಪಿನ ಉಸಿರಲ್ಲಿ ..!!

ಮಳೆಯ ಜೊತೆಯಲ್ಲಿ..ನೆನಪಿನ ಉಸಿರಲ್ಲಿ ..!!

ಯಾಕಿಂದು ನೀನು ಇಷ್ಟು ನೆನಪಾದೆ ಗೆಳತಿ? ಮಳೆ ಅಂದ್ರೆ ನಿಂಗೆ ಇಷ್ಟ ಅಂತ ನನಗೆ ಯಾಕೆ ತಿಳಿಸಿದೆ? ಪ್ರತಿ ಭಾರೀ ಮಳೆ ಬಂದಾಗಲು ಮನಸ್ಸು ನಿನ್ನಲ್ಲಿ  ಓಡಿ ಬರುತ್ತೆ ಕಣೆ .ಮರೆಯೊದಾದ್ರೂ ಹೇಗೆ ನಿನ್ನ?......ಮಳೆ ಬಂದು ನಿನ್ನ ನೆನಪನ್ನ ನನ್ನ ಹೃದಯದಲ್ಲಿ ಮತ್ತೆ ಮತ್ತೆ ಮರುಕಳಿಸುವಂತೆ ಮಾಡುತ್ತದೆ .ನೀನೇ ಇಲ್ಲ ಈಗ ,ಯಾರಿದ್ದಾರೇ ನಂಗೆ ? ಇನ್ನೂ ಈ ಸುರಿಯುವ ಮಳೆಯಲ್ಲಿ ಬರುವ ನಿನ್ನ ನೆನಪುಗಳ ಮರೆಯೊದಾದ್ರೂ ಹೇಗೆ ಹೇಳು ??? ತುಂತುರು ಹನಿಯಂತೆ ಶುರುವಾಗುವ ನಿನ್ನ ಈ ನೆನಪುಗಳ ಹಾವಳಿ ,ಗುಡುಗು ಸಿಡಿಲ ಮಳೆಯಂತೆ ನನ್ನ ಹೃದಯದಲ್ಲಿ ಮೂಡುತ್ತಿವೆ .ಕಣ್ಣು ಒದ್ದೆಯಾಗಿ ಕಣ್ಣೀರು ಹನಿ ಹನಿಯಾಗಿ ಹೊರಬರುತ್ತೆ ನೀನಿಲ್ಲ ಎಂದಾಕ್ಷಣ .

ಯಾಕೋ ಗೊತ್ತಿಲ್ಲ ಕಣೆ ಪ್ರತಿ ಭಾರಿ ಮಳೆ ಬಂದಾಗಲು ನನ್ನ ಕಣ್ಣಲ್ಲಿ ನೀನು ಇರ್ತೀಯಾ .ನಿನ್ನ ನೆನಪುಗಳು ಕಣ್ಣೀರಾಗಿ ನನಗೇ ಗೊತ್ತಿಲ್ಲದಂತೆ ಮಳೆಯ ಹನಿಯಲ್ಲಿ ಭೂಮಿಯನ್ನ ಸ್ಪರ್ಶಿಸುತ್ತೆ .  ಹೇಳಾಗಾದ ಮಾತಾಗಿ ಉಳಿದಿರುವೆ ನೀನು .
ಮೊದಲ ಭಾರೀ ನಿನ್ನ ಮಳೆಯಲ್ಲಿ ಕಂಡ ಆ ದಿನ ಇಂದಿಗೂ ನನ್ನೆದೆಯಲ್ಲಿ ಹಚ್ಚಾಗಿ ಉಳಿದಿದೆ . ಅಂದು ಪುಟ್ಟ ಪುಟ್ಟ ಮೊಲದಂತೆ ಅತ್ತಿತ್ತ ಹೆಜ್ಜೆಯನಿಕ್ಕುತ್ತ ಸುತ್ತಾಡಿತ್ತಿದ್ದ ನಿನ್ನ ನೋಡಿ ನಾನೆಲ್ಲೋ ಕಳೆದು ಹೋದೆ .ನಿನ್ನ ಕಣ್ಣ ನೋಡಿದಾಗಲಂತೂ ಮೈಯಲ್ಲಿ ರೋಮಾಂಚನ ,ಮಿಂಚಿನ ಸಂಚಲನ ,ಹೇಳಲಾಗದ ಅನುಭವವದು . ಮಳೆ ಎಂದರೆ ನೆನಪಾಗುವ ಆ ದಿನ ನೀನೊಂದಿಗೆ ಕಳೆದಂತಿತ್ತು .ನಿನ್ನ ನೆನೆಯದ ದಿನವಿಲ್ಲ ,ನೆನಪುಗಳ ನೀಡದ ಮಳೆ ಇಲ್ಲ . ಕನಸುಗಳ ಕಾಣದ ದಿನವಿಲ್ಲ .

ಆ ಭೂಮಿಗಾದ್ರೂ ಸೂರ್ಯ ಇದ್ದಾನೆ ಒಣಗಿಸಿ ಮಳೆಯ ಕುರುಹು ಇಲ್ಲದ ಹಾಗೆ ಮಾಡಲಿಕ್ಕೆ ಆದ್ರೆ ನನ್ನ ಹೃದಯದ ಬೆಳಕಿನ ಸೂರ್ಯನಂತಿದ್ದ ನಿನ್ನ ನಗು ,ನಿನ್ನ ಮುಖ ಒಟ್ಟಿನಲ್ಲಿ ಹೇಳೋದಾದ್ರೆ ನೀನು ಈಗ ಇಲ್ಲ . ಈಗ ಯಾರಿದ್ದಾರೆ ನಂಗೆ ? ಇನ್ನೂ ಈ ಸುರಿಯುವ ಮಳೆಯಲ್ಲಿ ಬರುವ ನಿನ್ನ ನೆನಪುಗಳನ್ನ ಮರೆಯೊದಾದ್ರೂ ಹೇಗೆ ಕಣೇ? ಮತ್ತೆ ಮಳೆ ಹಾಗೆ ಬರ್ತೀಯ ನನ್ನ ಜೀವನಕ್ಕೆ ? ಬರಿಯ ನೆನಪನ್ನ ನೀಡೋದಕ್ಕೆ ಅಲ್ಲ ಗೆಳತಿ .ನನ್ನೊಡನೆ ಕೊನೆಯವರೆಗೂ ಇರಲಿಕ್ಕೆ . ನೀನಿಲ್ಲದ ಈ ಬದುಕು ಬರಡಾಗಿದೆ, ನಿನ್ನ ಪ್ರೀತಿಯನ್ನ ಸುರಿಸಿ ಅದನ್ನು ಮತ್ತೆ ಚಿಗುರಿಸ್ತಿಯಾ ????
ಒಬ್ಬಂಟಿ ನಾನಲ್ಲ..
ಆ ಆಸೆಯೂ ನನಗಿಲ್ಲ..
ನೀ ಬಿಟ್ಟು ಹೋದರು ..
ನನಗೆ ಚಿಂತೆ ಇಲ್ಲ ..
ಕಾರಣ
ನನ್ನ ಒಲವಿನ ಪ್ರೀತಿಗೆ ಸಾವಿಲ್ಲ
ನಿನ್ನ ನೆನೆಯದ ಕಣವಿಲ್ಲ 
ನಿನ್ನೊಂದಿಗಿನ ನೆನಪುಗಳೇ ಸಾಕಲ್ವಾ ??
ಮರಳಿ ಬರುವೆಯಾ ಗೆಳತಿ 
ಪ್ರೀತಿಯ ಅರಮನೆಗೆ ??
-ನಿನ್ನವ ಮನು 


Monday 8 December 2014

ಕವನ-26


ನಿನ್ನ ಆಗಮನಕ್ಕಾಗಿ..!!

ಕನಸ್ಸಲ್ಲಿ ಕಂಡ ಆ ಕ್ಷಣಗಳು
ಆಸ್ಪಷ್ಟವಾಗಿವೆ ಇಂದೇಕೋ.
ಕತ್ತಲಲ್ಲಿ ಕನವರಿಸಿ,ನಿನಗಾಗಿ ಹಪಹಪಿಸಿ
ನನ್ನ ಮನಸ್ಸು ಒಂಥರಾ ಮರು ಭೂಮಿಯಾಗಿದೆ
ನಿನಗಾಗಿ ಬರೆದ ಕವನಗಳ 
ಪುಟಗಳು ಇಂದೇಕೋ ಖಾಲಿ ಖಾಲಿ

ನೀ ಬರುವ ದಾರಿಯ ಕಂಡು ನಿನ್ನ  ಕಾಣದೆ
ಕಣ್ಣ ಹನಿಗಳು ತುಂಬಿ ಸ್ಪರ್ಧಿಸಿದಂತಾಗಿವೆ 
ನಿನ್ನ ನಗುವ ನೆನೆದು ನಾನಳುವೆ 
ನೀನಿರದ ಕ್ಷಣಗಳು ಬಿಡದೆ ಕಾಡುತಿವೆ 
ನನ್ನ ಎದೆಯ ಅಲೆಗಳು ಬಂದು ಇಣುಕಿವೆ
ನೀ ಆಗಮನದ ಹರ್ಷವ ನೋಡಲು
ನೂರಾರು ಕನಸುಗಳ ಹೊತ್ತು 
ನಿನ್ನ ನೆನಪಲ್ಲಿ ಕಾದಿರುವೆನು ನಿನಗಾಗಿ
                                                       
                                                                   -M@nu




Sunday 7 December 2014

ಕವನ-25



ಬಿಳಿಯ ಹಾಳೆಯ ಮೇಲಿನ ಬರಹಗಳು
ನಿನ್ನ ಮುದ್ದಾದ ಮಾತುಗಳು
ಹುಣ್ಣಿಮೆಯ ಬೆಳದಿಂಗಳ ಚಂದ್ರನು
ನಿನ್ನ ಮುದ್ದಾದ ನಗುವು
ಹೂವಿನ ಮೇಲಿನ ಮಂಜಿನ ಹನಿಯೂ 
ನಿನ್ನ ಮುಖದಲ್ಲಿ ಮೂಡುವ ನಾಚಿಕೆಯು
ಮುಗಿಲಲ್ಲಿ ಮೂಡುವ ಮೌನವೂ
ನಿನಗೇ ಹೇಳಲಾಗದ ಪ್ರೀತಿಯು
ನಾಳೆಯ ಸೊಗಸ ಚಿತ್ರ ಬಿಡಿಸಲಾಗುತ್ತಿಲ್ಲ
ನಿನ್ನೆಯ ನೆನಪು ,ಮರೆತು ಗೀಚಲು ಸಾಧ್ಯವಿಲ್ಲ
ನನ್ನ ಪ್ರೀತಿಯು ನಾಲಿಗೆಗೆ ತಿಳಿಯದು
ನನ್ನ ಹೃದಯಕೆ ಮಾತು ಬರದು.
                                         -m@nu


Thursday 27 November 2014

ಕವನ-24


ನೀನಿರದ ಬದುಕು???


ನಿನ್ನ ನೆನೆದು ನಾನೆಂದೂ ಕಣ್ಣೀರು ಇಡಲಾರೆ 
 ನಿನ್ನ ನೆನೆಯದ ನೆನಪನ್ನ ನೀ ನೀಡಬೇಕು
ನಿನ್ನ ಪ್ರತಿಬಿಂಬವ ಹುಡುಕುತ ನಾ ಎಲ್ಲೂ ಹೋಗಲಾರೆ
ನಿನ್ನ ಬಿಂಬವು ಕಾಣದ ಕನ್ನಡಿಯ ನೀ ನೀಡಬೇಕು
ನಿನ್ನ ನಗುವ ಮೊಗವನ್ನ  ಮತ್ತೊಮ್ಮೆ ನಾ ನೋಡಲಾರೆ 
ನಿನ್ನ ನಗು ಮೊಗವ ಕಾಣದ ಕಣ್ಣ ನೀ ನೀಡಬೇಕು
ನಿನ್ನ ಧ್ವನಿಯ ಮತ್ತೊಮ್ಮೆ ನಾ ಕೇಳಲಾರೆ
ನಿನ್ನ ಮಧುರ ಮಾತ ಕೇಳದ ಕಿವಿಯ ನೀ ನೀಡಬೇಕು
ನಿನ್ನ ಮತ್ತೊಮ್ಮೆ ನನ್ನ ಸ್ವಪ್ನದಲ್ಲಿ ನೋಡಲಾರೆ
ನಿನ್ನ ಸ್ವಪ್ನವೇ ಬಾರದ ನಿದ್ದೆಯ ನೀ ನೀಡಬೇಕು
ನಿನಗಾಗಿ ನನ್ನ ಹೃದಯವು ಮತೊಮ್ಮೆ ಮಿಡಿಯಲಾರದು 
ನೀನಗಾಗಿ ಮಿಡಿಯದ ಹೃದಯವ ನೀ ತೋರಬೇಕು
ನಿನ್ನ ಬದುಕಲ್ಲಿ ಮತ್ತೆ ನಾನೆಂದೂ ಬರಲಾರೆ
ನೀನಿಲ್ಲದ ಜಗತ್ತನ ನೀನೇ ಪರಿಚಯಿಸಬೇಕು

                                                  -M@nu






Monday 24 November 2014

ಕವನ-23


ನೆನಪುಗಳ ಹಾವಳಿ..!!



ಕಣ್ಣಹನಿಯೊಂದು ಕೆನ್ನೆ ಮೇಲೆ ನಿಂತಿದೆ 
ಕನಸ್ಸುಗಳು ಮರೀಚಿಕೆಯಾಗಿ ಉಳಿದಿವೆ
ನೆನಪುಗಳ ಹಾವಳಿಯೂ ಹೆಚ್ಚಾಗಿದೆ
ನೋವಿನಲ್ಲಿ ಹೃದಯವು ಒದ್ದಾಡಿದೆ
ಮೌನವೂ ಮಗುವಾಗಿ ಮಲಗಿದೆ
ನಿನ್ನ ನಗುವು ನೋವಿಲ್ಲದೆ ನಲಿದಾಡಿದೆ
ಕನಸ್ಸಲ್ಲೂ ಕಾಡುತ್ತಿದೆ ನಿನ್ನಯ ಮೆಲ್ಲ ದನಿ
ಕಣ್ಣಿಂದ ಹೊರಬರಲು ಯತ್ನಿಸಿದೆ ಕಂಬನಿ
ಮರೆಯಲು ಯತ್ನಿಸಿದ ನೋವು
ಕಂಡಂತೆ ತೋರುತ್ತಿದೆ ನನ್ನಯ ಸಾವು 
ನೀನಗಾಗಿ ,ನಿನ್ನ ನಗುವಿಗಾಗಿ ಮರೆಯಲು
ಮನಮಾಡುವೆ ನನ್ನಯ ಸವಿ ಕನಸನ್ನ
                                                   
                                             -M@nu
              




                                                           

Tuesday 18 November 2014

ಕವನ-22

ನೆನಪಿನ ಹಾದಿಯಲಿ..!!

ಕಣ್ತುಂಬಿಕೊಂಡಿದೆ ನೀರು ಕಂಬನಿಯಾಗಿ
ನೋವಿನಿಂದಲ್ಲ ಗೆಳತಿ; ನಿನ್ನ ನೆನಪಿಂದ
ಸಾಗರದ ದಂಡೆಯಲ್ಲಿ ಕಾದು ಕುಳಿತಿರುವೆ ನಿನಗಾಗಿ
ಅಲೆಗಳಂತೆ ಬಂದು ತಲುಪುವೆಯ ನೀ ನನಗಾಗಿ
ಕಾಲವು ಉರುಳುತ್ತಿದೆ ಗೆಳತಿ ನಿನ್ನ ನೆನಪಲ್ಲಿ
ಜೀವವು ಕರಗಿ ಕೊರಗುವ ಮುನ್ನ ಬರುವೆಯಾ
ಆಕಾಂಷೆಯ ಬುತ್ತಿಯ ಹಿಡಿದು ಕಾದಿರುವೆ
ಒಮ್ಮೆ ಬಂದು ತುಂಬಿಸುವೆಯ ಪ್ರೀತಿಯ ನುಡಿಯಿಂದ 
ನಾಳೆ ಎಂಬುದು ಮರೀಚಿಕೆಯಾಗಿ ಉಳಿದಿಲ್ಲ
ಈ ಜೀವಕ್ಕೆ ದೇವರು ನಾಳೆಯ ಬರವಸೆಯು ಕೊಟ್ಟಿಲ್ಲ
ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳ ನೆನೆಯುತ್ತಾ
ನೆನಪುಗಳ ನೆಮ್ಮದಿಯಲ್ಲಿ ಕವನಗಳ ಬರೆಯುತ್ತಾ
ನಿನ್ನಿಲ್ಲದ ಬದುಕಿನ ದಾರಿ ಸಾಗಿದೆ ಕತ್ತಲಲ್ಲಿ
ನಿನ್ನಯ ನೆನೆಪುಗಳು ಒಮ್ಮೊಮ್ಮೆ ಮೋಡುವುದು ಬೆಳಕಾಗಿ
ಅಳಿಸಲಾಗದ ಹೆಜ್ಜೆಯ ಗುರುತು ನಿನ್ನಯ ನೆನಪು
ಬಿಡಿಸಲಾಗದ ಒಗಟು ನನ್ನಯ ಈ ಬದುಕು

                                               -ನಿನ್ನವ ಮನು



Sunday 16 November 2014

ತುಸು ದೂರ ಸುಮ್ಮನೆ..!!

ತುಸು ದೂರ ಸುಮ್ಮನೆ..!!


ಕೆಂದಾವರೆಯ ಸೂರ್ಯನು ತನ್ನ ದಿನ ನಿತ್ಯದ ಕೇಲಸವ  ಮುಗಿಸಿ ಪ್ರಪಂಚಕ್ಕೆ ತನ್ನ ವಂದನೆಯ ಹೇಳುತ್ತಿದ್ದ ಸಮಯ,
ಮರೆಯಾಗುತ್ತಿರುವ ನೇಸರ....
ಆಗಸದ ಹೃದಯದಲ್ಲಿ...
ಬಿಡಿಸುವ ... ಬಣ್ಣದ ಚಿತ್ತಾರ... ಮನಮೋಹಕ....!

ಇತ್ತ ಚಂದ್ರನು ಭೂಮಿಗೆ ತನ್ನ ಚಳುವಿನ ಕಿರಣಗಳನ್ನು ಮುಟ್ಟಿಸಲು ತುದಿಗಾಲಲ್ಲಿ ಹಾತೋರಿಯುತಿರುವನು
ಬೆಳ್ಳಿ ಮೊಡವೆ... ಎಲ್ಲಿ ಓಡುವೆ...?.
ಸಂಜೆಯ ನೇಸರನ ನೋಡಲು....
ಸಂಭ್ರಮವೇ...?
ಇರುಳಿನ ಚಂದ್ರಮನ ಆಗಮನದ... ನಾಚಿಕೆಯೇ...?

ಜನನಿಬಿಡ ರಸ್ತೆ ,ಅಪುರೂಪಕ್ಕೆ ಆಗೋ ಇಗೋ ಎಂಬಂತೆ ಒಂದು ವಾಹನ ,ಕತ್ತಲು ಪ್ರಪಂಚವ ತನ್ನ ಮಡಿಲಲ್ಲಿ ಜೋಪಾನ  ಮಾಡುವಂತಿತ್ತು ,ಚಂದ್ರನು ಮುಗುಳು ನಗುತ್ತಾ ಬಾನಿನಲ್ಲಿ ಆಟವಾಡುತ್ತಿರುವನು ,ನಿಶಬ್ದದದ ಮನೆ ಮಾಡಿತ್ತು ,ತಂಪಾದ ತಂಗಾಳಿಯ ನಡುವಲ್ಲಿ  ಮೆಲ್ಲನೆಯ ದನಿಯಲ್ಲಿ ಹಾಡೊಂದನ ಕೇಳುತ ಅವಳ ಮೊಗವನ್ನೇ ನೋಡುತ ,ತುಸುವೇಗದಲ್ಲಿ ನನ್ನ ಗೆಳತಿಯೊಂದಿಗೆ ಹೊರಟ long drive ,ಆ ಮುದ್ದಾದ ಮೊಗವ ಕಣ್ತುಂಬಿ ನೋಡುತ್ತಿದದ್ದ ಸಮಯ ,ಮನದಲ್ಲಿ ನೂರಾರು ಮಾತು ,ಹೇಳಲಾಗದೆ ಅವಳನ್ನೇ ನೋಡುವುದರಲ್ಲೇ ತಲ್ಲೀನ,  ಅವಳು ನನೆದೆಗೆ ಹೊರಗಿದಳು,ನನೆದೆಗೆ ಮೂದವ ನೀಡಿದಂತಿತ್ತು ಅವಳ ಆ ಸ್ಪರ್ಶ ,ಮೊದಲ ಬಾರಿ ನನಕೇ ನನೆದೆಗೆ ಹೊರಗಿ ಮಲಗಿದ್ದೆ. ತುಸು ಹೊತ್ತು ಸುಮ್ಮನೆ ಏನು ಮಾತಾಡದೆಯೇ ಹೋಗುತ್ತಿದೆವು . ಅವಳ ದ್ವನಿ  ಕೇಳಿಸಿತು .

"ಮನು" !! ಅಂದಳು .
ನಾನು ಹಾ !! ಅಂದೆ ,
ನನ್ನ ಎಷ್ಟು ಇಷ್ಟ ಪಡುತ್ತಿಯ ಅಂದಳು .
ಹೇಳಲಾಗೋದಷ್ಟು ,ನನ್ನ ಕೊನೆಯ ಗಳಿಗೆಯ ವರೆಗೂವರೆಗೂ ಇಷ್ಟ ಪಡ್ತಾನೆ  ಇರ್ತೀನಿ ಅಂದೆ.

ನಾನು ನಿನಗೆ ಯಾಕೆ ಇಷ್ಟ ಅದೇ ಅಂದಳು .
ತುಸು ಹೊತ್ತು ಸುಮ್ಮನೆ ಮೌನಿಯಾಗಿ ,ಹೇಳಿದೆ ನಿನ್ನೊಡನೆ ಆಡಿದ ಆ ಮಾತು ಹಾಗೂ ನನ್ನ ನಂಬಿಸಲು ಹೇಳಿದ ಕೆಣಕುವ ಆ ಸುಳ್ಳು ನನಗೆ ಬಹಳ ಇಷ್ಟ ಅಂದೆ .

ಮತ್ತೆ ಮೌನ ,sound  system  ಅಲ್ಲಿ ಇಂಪಾದ ಹಾಡನ್ನ ಕೇಳುತ ಮುಂದೆ ಸಾಗುತ್ತಿದೆವು  . ಕತ್ತಲಲ್ಲಿ ಪಳ ಪಳ ಹೊಳೆಯುತ್ತಾ ಮೀನಿನಂತೆ ಅತ್ತಿತ್ತ ಓಡಾಡುತ್ತಾ ನನ್ನ ಕೆಣಕುತ್ತಿದವು .ಮುದ್ದಾದ ಕೆನ್ನೆ , ಚೆಂದದ ತುಟಿ , ಸಣ್ಣ ಸೋನೆಯಂತೆ ಸೂಸುತ್ತಿದ ಮುಗುಳು ನಗು ಅಬ್ಬಾ!! ನನೆದೆಯಲ್ಲಿ ಸಂಚಲವ ಹುಟ್ಟಿಸಿತ್ತು.
ತಂಗಾಳಿಯ ತಂಪಲ್ಲಿ ,ನನಗೆ ಜೋರಾದ ಟ್ರಿಣ್  ಟ್ರಿಣ್ ಎನ್ನುವ ಶಬ್ದ .ಕಣ್ಣು ಬಿಟ್ಟು ನೋಡುತ್ತೇನೆ ,ನಾ ಕಂಡದೆಲ್ಲ ಸುಂದರ  ಸ್ವಪ್ನ ,yea its a dream ride with my girl . 
   
ನಿನ್ನಾಣೆ ನಿನ್ನಾಣೆ ನೀ ಕನಸಲ್ಲಿ ಕಂಡೆ
ನನ್ನಾಣೆ ನನ್ನಾಣೆ ಸುಳ್ಳಲ್ಲ ಓ ಜಾಣೆ
ತುಂತುರು ಹನಿಯ ಮಳೆಯಲ್ಲಿ
ಹನಿ ಹನಿಗಳ ಸೊಗಸಲ್ಲಿ ,
ಮಳೆಬಿಲ್ಲಿನ ರಂಗಲ್ಲಿ 
ನೀ ಹೃದಯಕೆ ಬರುವೆಯಾ.

ಒಮ್ಮೆಲೆ ನನಸಲ್ಲಿ ಕಂಡು ಬಿಡೆ 
ಅತ್ತಲು ಇತ್ತಲು ಲೋಕವನ್ನೇ ಮರೆಸುಬಿಡೆ 
ಒಲವ ಹೂ ಮಳೆಯಲ್ಲಿ 
ಪ್ರೀತಿ ಹಸಿರು ಇಳೆಯಲ್ಲಿ 
ಕರಗಿ ಹೋಯ್ತು ಮನಸಲ್ಲಿ
ನೀ ಹೃದಯಕೆ ಬರುವೆಯಾ.

                                          - manu





Saturday 15 November 2014

ಸುರಿಯುವ ಸೋನೆಯಲ್ಲಿ ..!!


ಜಡಿಯ ಸೋನೆಯಲ್ಲಿ ..!!


ಬೆಳ್ಳಗೆ ಸೂರ್ಯನು ತನ್ನ ಮೊಗವ ತೋರಲು ನಾಚಿ ನೀರಾಗಿ ಮೋಡಗಳ ಮಧ್ಯೆ ಅವಿತು ಕುಳಿತ್ತಿದಂತ ಸಮಯ ,ಜಿನುಗುತ್ತಿದ್ದ ಮಂಜಿನ ಪನ್ನೀರಿನ ನೇರಳೆ ನೋಡಲು ಅಸ್ಪಷ್ಟ ,ಪರಿ ಶುದ್ದ ವಾತಾವರಣ .ತಂಗಾಳಿ ಮುದ ನೀಡುತ್ತಿತ್ತು. ದೂರದ ಗುಡುಗು,ಮಿಂಚಿನಾಟ ನಯನಗಳಿಗೆ ಸ್ವರ್ಗವನ್ನೇ ಸೃಷ್ಟಿಸಿತ್ತು .ಕಾಲೇಜ್ ಕ್ಯಾಂಪಸ್ ಅಲ್ಲಿ ಆ ಮುಸುಕು ಮುಂಜಾನೆಯಲ್ಲಿ ದಿನಕರನ ಹೊಂಬಿಸಿಲಲ್ಲಿ ಕಣ್ಣಿಗೆ ಹೊಳೆಯುವಂತೆ ಉಡುಗೆ ತೊಟ್ಟು ಬಂದವಳೇ ನನ್ನಾಕೆ ,ತುಂತೂರು ಹನಿಗಳಿಗೆ ಸಣ್ಣನೆ ಛತ್ರಿಯ ಹಿಡಿದು ಅಲ್ಲಿಂದ ಇಲ್ಲಿಗೆ ಜಿಂಕೆಯಂತೆ ಓಡಾಡುತ್ತಿದ್ದ ಅವಳನ್ನ ಕಂಡು ನನ್ನ ಮನಕಲುಕಿತು . ನನ್ನೆದೆಯ ಕೋಣೆಯೊಳಗೆ ನೆಲೆಯೂರಿದಳು ,ಮೊನಾಲಿಸಾಲಾನ್ನು ಮೀರಿಸುವ ಆ ನಗುವಿಗೆ ನಾ ಸೋಲದಿರಲಿಲ್ಲ,ನಾನಾಗ ಡಾಕ್ಟರ್ ಬಳಿ ಹೋಗಲಾರದ ರೋಗಿ,ಪ್ರೇಮ ರೋಗಿ.
ನಾನವಳ ಸೌಂದರ್ಯದ ಆರಾಧಕನಾದೆ ಕೂತರು,ನಿಂತರು,ಅವಳದೇ ಪರಿಪಾಠ ,ಮನಸೆಲ್ಲಾ ಅವಳೇ ತುಂಬಿರುವಾಗ ಕಣ್ಮುಚ್ಚಿದರು ಅವಳದೇ ಬಿಂಬ .ಕನಸಲ್ಲೆಲ್ಲ ಅವಳದೇ ರಾಜ್ಯಭಾರ .

ದಿನವೂ ನೋಡುತ್ತಿದ ಅವಳನ್ನು ಅಂದು ಎಷ್ಟು ಬಾರಿ ನೋಡಿದರು ಮನಸ್ಸಿಗೆ ತೃಪ್ತಿ ಆಗುತ್ತಿಲ್ಲ. ಅವಳ ಕಣ್ಣ ನೋಡಿದಾಗಲಂತೂ ಮೈಯೆಲ್ಲ ರೋಮಾಂಚನ ,ಮಿಂಚಿನ ಸಂಚಾರ ,ಹೇಳಲಾಗದ ಅನುಭವ ಅದು.
 ಅಂದು ಅವಳ ಮೇಲೆ ಎಲ್ಲಿಲದ ಒಲವು ,ಅವಳನ್ನ ಮಾತಾಡಿಸಬೇಕೆಂಬ ಹಂಬಲ ,ತುಸು ಸಮಯ ಅವಳೊಂದಿಗೆ  ಕಳೆಯ ಬೇಕೆಂಬ ಮನಸ್ಸು .ಆದರೆ ಯಾಕೋ ಗೊತ್ತಿಲ್ಲ ಅವಳ ಕಂಡೊಡನೆ ಮೂಕನಾಗುವೆ ,ಮನಸ್ಸಿನ ಭಾವನೆಯ ಹೊರಹಾಕಲಗದೆ ನನ್ನ ಹೃದಯದಲ್ಲೇ ಹಿಡಿದಿಟ್ಟಿಕೊಂಡು ಒದ್ದಾಡುವಂತಾಗಿದೆ .ಗೆಳತಿ ನೀ ಯಾಕೆ ಕಾಡುತಿರುವೆ ನನ್ನ ಇಷ್ಟು ,ನಿನ್ನ ಕಾಣದ ಕ್ಷಣ ನಾ ಈ ಲೋಕವೇ ತೊರೆದಂತೆ ,ನೀ ಇಲ್ಲದ ಈ ಬದುಕು ಶೂನ್ಯ .ಒಮ್ಮೆಯಾದರೂ ಬಂದು ಮಾತನಾಡಿಸುವೆಯ ??


ಬಯಕೆಯ ಬನದಲ್ಲಿ ಬದುಕಿನ ಬಯಲಲ್ಲಿ ,
ಕಣ್ಣಿನ ಕರೆಯಲ್ಲಿ ಕನಸಿನ ಮರೆಯಲ್ಲಿ,
ಬೆಳಕು ಚೆಲ್ಲಿದ್ದು ನಿನ್ನ ಮಾತು,
ಜೀವಕೆ ಬೇಕಿದೆ ನಿನ್ನ ಮಾತು ,
ಬಲಿಯಾದ ಆ ಮನಸು ನಿನ್ನದೇ ಕಣೇ ,
ನೀ ನನ್ನ ಬಳಿಗೆ ದೀಪ ಕಣೇ ,
ಕೊರಗಿ ಕರಗಿ ಕೊನೆಯಾಗು ಮುನ್ನ 
ಕಳುಹಿಸುವೆಯ ನಿನ್ನ ಮಾತಿನ ಸಂದೇಶವನ್ನ

                                                   -  ನಿನ್ನವ ಮನು



Thursday 13 November 2014

ಕವನ-21



ಕನಸ್ಸೆಂಬ ಕನ್ನಡಿಯ ಹಿಡಿದು
ಕನವರಿಕೆಯ ಮೆಟ್ಟಿಲ ಹೇರಿ
ದೂರದ ದಾರಿಯಲ್ಲಿ ನಿನ್ನ
ಆಗಮನವ ಬಯಸುತ್ತ ನಿಂತೆ
ಮೌನಿಯಾಗಿ ಕಾದು ನಿಂತೇನು
ಕಣ್ಣ ರೆಪ್ಪೆಯ ಅಳುಕಿಸದೆ

ಕಾದಿರುವೆ ಗೆಳತಿ ನಿನಗಾಗಿ
ನಿನ್ನ ಅವಿಭಾಜ್ಯ ಅಂಗವಾಗಿ
ನೀ ಬಾರದ ಯಾತನೆ
ವೇದನೆಯಲ್ಲಿ ಮುಗಿಯದು ಬವಣೆ
ಬರುವೆಯ ಈ ಬರಡು ಭೂಮಿಗೆ 
ಮುಂಗಾರು ಮಳೆಯಾಗಿ

ಕತ್ತಲಿನಿಂದ ಆವರಿಸಿರುವ ನನ್ನ
ಮನಸ್ಸಿಗೆ  ಬೆಳಕ್ಕಾಗಿ
ನಿನ್ನ ಪ್ರೀತಿಯ ಕತ್ತಲಿನ ಕಾಡಿನಲ್ಲಿ
ಮೂಡುವುದೇ ನೀ ಬರುವ ದಾರಿ ಬೆಳಕಾಗಿ
ಕಾಡುವ ಕತ್ತಲಲ್ಲಿ ಗೆಳತಿ ನಿನ್ನ 
ಕಣ್ಣ ಹೊಳಪಿನ ಬೆಳಕ ಬಯಸುತ್ತಿರುವೆನು

ತಡಮಾಡದೆ ಬಂದು ನಿಲ್ಲುವೆಯ
ನಿನ್ನ ಕಣ್ಣ ಹೊಲಪ ಚೆಲ್ಲುವೆಯ 
ನನ್ನ ಕಣ್ಣ ಕಂಬನಿ ಜಾರುವ
ಮುನ್ನ ಬಂದು ಹೊರಸುವೆಯಾ ?
ನನ್ನ ಪ್ರಾಣ ಪಕ್ಷಿ ಹಾರುವ 
ಮುನ್ನ ಜೋಪಾನ ಮಾಡುವೆಯಾ ?

                            ನಿನ್ನವ ಮನು


Monday 10 November 2014

ಕವನ-20


ನಾ ಅವಳಾದಾಗ..!!

 ಮುಗುಳು ನಗೆಯಲ್ಲಿ  ಮೆಲ್ಲಗೆ ಪರಿಚಯವಾದ ಇನಿಯನೆ
ಮನಸ್ಸು ಹತೋರಿಯುತಿದೆ  ನಿನ್ನೊಡನೆ ಸಂಭಾಷಿಸಲು
ಹೇಳಬೇಕೆಂದು ಬಂದ ತುಟಿಯ ಮೇಲಿನ ಮಾತು
ನಿನ್ನ ಕಂಡೊಡನೆ ಕ್ಷಣದಲ್ಲಿ  ಮಾಯ 
ಹಂಬಲಿಸಿದೆ ಮನ ನಿನ್ನ ಕಾಣಲು 
ಮಂಕಾಗುವುದು  ಮನ ನಿನ್ನ ನೋಡದೆಯೇ 
ನೀನೆಂಬುದು ಬರಿಯ ಆಕರ್ಷಣೆಯ
ನನ್ನಲ್ಲಿ ಅಡಗಿರುವ ಚಿಗುರಿನ ಪ್ರೀತಿಯ
 ಹೇಗೆ ವ್ಯಕ್ತಪಡಿಸಲಿ ನನ್ನ ಈ ಪ್ರೀತಿಯ
ಎದುರು ನೋಡುತ್ತಿರುವೆನು ಸುಸಮಯವ



Sunday 9 November 2014

ಕವನ-19


ನೀಡ ಬಯಸಿದೆ ಕನಸಿನ ಉಡುಗೊರೆಯ 
ಅಂದವೋ ಚೆಂದವೋ ತಿಳಿದಿಲ್ಲ
ನನ್ನಯ ನಲುಮೆಯ ಉಡುಗೊರೆಯ
ನೀಡುವೆನು ನನ್ನ ಮನಬಂದ ದಿನದೊಂದು 
ಮರೆತ್ತಿರಲಿಲ್ಲ ಅಂದು ನಿನ್ನ ಹುಟ್ಟುಹಬ್ಬವೆಂದು!
ಕುತೂಹಲದ ಉಡುಗೊರೆಯ ಕರುಹು ನೀಡದೆ ನೀಡುವೆನು .

ತಾಯಿಯ ಮಮತೆಯ ನೂಲಿನಿಂದ ಹೆಣೆದ,
ತಂದೆಯ ನಂಬಿಕೆಯ ಹೊಲಿಗೆ ಇಂದ ಹೊಲಿದ ,
ಸ್ನೇಹಿತರ ಸ್ನೇಹದಿಂದ ಅಲಂಕರಿಸಿದ,
ನನ್ನಯ ಪ್ರೀತಿಯ ಬಣ್ಣದ ಲೇಪನವನ್ನ ಹಚ್ಚಿದ,
ಅಂದಾ,ವೋ ಚೆಂದವೋ, ಸುಂದರವೂ !
 ಏನೆಂದು ತಿಳಿದಿಲ್ಲ ,ತಿಳಿಸುವೆಯ ಗೆಳತಿ 
ಮುಂದೊಂದು ದಿನ ರಾರಾಜಿಸುವೆಯ 
ನಾ ಕೊಟ್ಟ  ಉಡುಗೊರೆಯ   ತೊಟ್ಟು



Saturday 8 November 2014

ಕವನ-18


ನಿದ್ರೆಯ ನಡುವೆಯೂ ನಿನ್ನಯ ನೆನಪು..!!



 ನಡುರಾತ್ರಿಯ ನಿದ್ದೆಯ  ಬಿಟ್ಟು ನಿನ್ನ ನೆನೆದು ನೋಡುತ ಕುಳಿತೆ ಆಕಾಶವ
ನಕ್ಷತ್ರ ಮಧ್ಯದಲ್ಲಿ ಕಂಡೆನು ಮಿಂಚುತ ನಲಿದಾಡುತಿದ್ದ ನಿನ್ನ ವೈಭೋಗವ
ಚಂದಿರನ ಅಂಗಳದಲ್ಲಿ ಜೋಕಾಲಿ ಆಡುತಿದ್ದ  ಆ ನಿನ್ನ ಸಂತೋಷವ
ಮೋಡಗಳೆ ನಾಚಿ ನೀರಾಗುತ್ತಿದವು ಕಂಡು ಆ ನಿನ್ನ ನಗು ಮೊಗವ

ತಂಗಾಳಿ ಹಾಡುತ ಸಾರುತುದು  ಆ ನಿನ್ನ ಶಾಂತಾ ಸ್ವಭಾವವ
ಇಬ್ಬನಿಯು  ಇಣುಕುತಿಹುದು ಹೊಲುತ  ನಿನ್ನ  ಬಿಂಬವ
ಕತ್ತಲು ಮರೆಮಾಚುತಿಹುದು ನಿನ್ನ ಕಾಡಿಗೆ ಕಣ್ಣ ನೋಟವ
ಸೂರ್ಯನು ಹಪಹಪಿಸುತಿಹನನು ನೋಡಲು ನಿನ್ನ ಮೈ ಮಾಟವ 

                                                 -ನಿನ್ನವ ಮನು 




Friday 7 November 2014

ಕವನ-17


ನೆನಪಿನ ನೆಪದಲ್ಲಿ ನನ್ನಾಕೆ...!!!


ನಿನ್ನನು ಮರೆಯಲು ಯತ್ನಿಸಿದ ನೆನಪು
ಮರೆಯಲಾಗದೆ ಮತ್ತಷ್ಟು ಮರುಕಳಿಸುವ ನೆನಪು
ನೀ ನನ್ನ ಕವಿತೆಯ ಸಾಲದ ನೆನಪು
ಕವಿತೆಯ ನೆಪದಲ್ಲಿ ನೆನಪಾದ ನೆನಪು
ನಿನ್ನ ಮೊದಲ ಬಾರಿ ನಾ ಕಂಡ ನೆನಪು
ಮರೆತರೂ ಮಾಸಿ ಹೋಗದ ನಿನ್ನಯ ನೆನಪು

ನಿನ್ನಯ ಮುಗುಳ್ನಗೆಯ ನೆನಪು
ಅತ್ತರು ಅಳಿಯದ ಆ ನೆನಪು
ನಿನ್ನಯ ಕಣ್ಣ ಕಾಡಿಗೆಯ ನೆನಪು
ಕಣ್ಣು ಕುರುಡಾದರೂ ಕಾಡುವ ನೆನಪು
ಕಲ್ಪನೆಗೂ ನಿಲುಕದ ನಿನ್ನಯ ನೆನಪು
ನನ್ನ ಉಸಿರಲಿ ಉಸಿರಾಗುವ ನೆನಪು

ಬಯಕೆಯ ಬುತ್ತಿಯನಿಟ್ಟು ಕಾದಂತ ನೆನಪು
ಬಯಕೆಗಳಿಲ್ಲದೆ ಭಿಕಾರಿಯದಂತ ನೆನಪು
ನೀ ನನ್ನ ತೊರೆದ ಗಳಿಗೆಯ ನೆನಪು
ಮನಕ್ಕೆ ನೀ ನನ್ನವಳಲ್ಲವೆಂದು ಸಂಭಾಳಿಸೀದ ನೆನಪು
ನರನರಗಳಲ್ಲಿಯೂ ನೀ ಇರುವೆಂದರಿತ ನೆನಪು
ನೀ ಬರಿಯ ನೆನಪೆಂದು ನೊಂದ ನೆನಪು

ಹೃದಯವು ಮಿಡಿತವ ಮರೆತಂತ ನೆನಪು
ಗುಳಿಗೆಯ ನುಂಗಿ ನೆನಪಿಸಿಕೊಂಡಂತ ನೆನಪು
ಕಾಲುಗಳು ನಡಿಗೆಯ ಮರೆತಂತ ನೆನಪು
ನಿನ್ನ ಇಂಬಾಲಿಸಿ ಮತ್ತೆ ನೆನೆದ ನೆನಪು
ಮಿನುಗುವ ಮಳಿಗೆಯಲ್ಲಿ ಮೇರೆವ ನಿನ್ನ ನೆನಪು
ಕರುಣೆಯ ಅಲೆಯಲ್ಲಿ ಕನವರಿಕೆಯ ನೆನಪು

ಓ ನನ್ನ ಪ್ರತಿನಿತ್ಯದ ನೆನಪೇ
ಮರೆಯಲಾಗದು ನಿನ್ನಯ ಹೊಳಪೆ 
ನೆನಪುಗಳ ನೆಪದಲ್ಲಿ ಕಾಡುತಿರುವೆಯಲ್ಲೇ 
ನೆನಪುಗಳು ಮಾಸುವ ಮುನ್ನ ಮುಂದೆ ಬರುವೆಯಾ

ಕತ್ತಲಲ್ಲಿ ನೂರಾರು ಕನಸುಗಳ ಹೊತ್ತು
ಮನದೊಳು ನಿನ್ನಯ ನೆನಪಿನ ಚಿತ್ರ ಚಿತ್ತಾರವ ಬಿಡಿಸಿ
ನೆನಪುಗಳ ನೆನೆದು ಕಣ್ಣೀರು ಸುರಿಸಿ
ಕಾಯುತ್ತಿರುವೆನು ಗೆಳತಿ ನಿನ್ನ ಬರುವಿಕೆಗಾಗಿ 

                                        -ನಿನ್ನವ ಮನು 


Thursday 6 November 2014

ಕವನ-16

ಸ್ನೇಹ..!!


ಕಂಬಿನಿಯ ಒರೆಸಿ ಮಮತೆಯ ತೋರುವ
ಜೊತೆಯಲ್ಲಿ ನೆಡೆವ ಸ್ನೇಹವಿದು
ರಕ್ತ ಸಂಬಂದಕ್ಕಿಂತ ಮಿಗಿಲಾದದ್ದು
ಕರುಳ ಬಳ್ಳಿಯ ಮೀರುಸುವಂತದ್ದು 
ಪ್ರೀತಿಯ ಒಡಲಿದು ನೆನಪಿನ ಕಡಲಿದು
ಅರಿವ ದಾರಿಯ ತೋರುವ ಗುರುವಿದು 

ಹುಟ್ಟು ಸಾವಿನ ನಂಟು
ಹೃದಯ ಮಿಡಿವವರೆಗೂ
ಈ ಸ್ನೇಹದ ನಂಟು
ಜನುಮ ಜನುಮಗಳವರೆಗೂ
ಜೀವಕ್ಕೆ ಬೇಕಿದೆ ನಿನ್ನಯ ಅಪ್ಪುಗೆ
ಜೀವನಕ್ಕೆ ಬೇಕಿದೆ ನಿನ್ನಯ ಸ್ನೇಹದ ಒಪ್ಪುಗೆ 

                             -ನಿನ್ನ ಗೆಳೆಯ ಮನು


Monday 3 November 2014

ಕವನ-15



ಹಾಡ ಬಯಸಿದೆ ಹೃದಯದ ಹಾಡೊಂದನ
ಬರೆಯ ಬಯಸಿದೆ ಬಾಳ ಭಾವವೊಂದನ
ಬಿಡಿಸ ಬಯಸಿದೆ ಬದುಕಿನ ಚಿತ್ರವೊಂದ
ನೆನೆಯ ಬಯಸಿದೆ ನಿನ್ನಯ ನೆನಪೊಂದ

ನೀನೆಂಬುದು ನನ್ನ ಕವಿತೆಯಲ್ಲಿ ಸಾಮಾನ್ಯ
ನೀನೆಂಬುದು ನನ್ನ ಹೃದಯದಲ್ಲಿ ಅಸಾಮಾನ್ಯ
ನನ್ನ ಬಾಳಿನ ಬೆಳಕು ನೀನೇ
ನನ್ನ ಬದುಕಿನ ಬವಣೆಯೂ ನೀನೇ
ನನ್ನ ಜೀವದ ಉಸಿರು ನೀನೇ
ನನ್ನ ಜೀವನದ ಜ್ಯೋತಿಯು ನೀನೇ

ಮೂಡುವೆಯ ಬಯಸಿದ್ದಕ್ಕಿಂತ ಮಿಗಿಲಾಗಿ
ನನ್ನ ಬವಣೆಯ ಬಿಡುಸುವುದಕ್ಕಾಗಿ
ಕಂಬನಿಯ ಕಿರುನಗೆಯನ್ನಾಗಿಸುವುದಕ್ಕಾಗಿ 
ಕನವರಿಕೆಯನ್ನ ಕಸಿವಿಸಿಗೊಳಿಸುವುದಕ್ಕಾಗಿ
                                                   -ಮನು


Friday 31 October 2014

ಕವನ-13

ಕನ್ನಡಾಂಭೆಗೆ ಕಿರು ನಮನ!!!


ಕಲಿಯುವಾಗ ಸುಂದರ ಸ್ವರ್ಗವು
ರಮ್ಯರಮಣೀಯ ನಿಸರ್ಗವು
ಕಂಬನಿಗೆ ಮಿಡಿಯುವ ನಾಡು
ಕೈ ಹಿಡಿದು ಮೇಲೆತ್ತುವ ಬೀಡು 
ಅಮ್ಮ ಎಂದರೆ ಆರೈಕೆ
ಅಪ್ಪ ಎಂದರೆ ಓಲೈಕೆ

ಗಾಯಕರ ಗ್ರಾಮವಿದು 
ಲೇಖಕರ ಲೋಕವಿದು
ಶಾಸನಗಳ ನಾಡಿದು
ಕವಿಗಳ ಬೀಡಿದು

ಅಮೃತವೇ ಕಾವೇರಿ
ಶ್ರೀಮಂತಿಕೆಯೇ ಶ್ರೀಗಂಧ 
ಮಲೆನಾಡಿನ ಮಂದಹಾಸ
ಕಗಮೃಗಗಳ ತವರೂರು

ಜಂಬೂಸವಾರಿಯ ವೈಭೋಗ
ತರ ತರ ತಿನಿಸುಗಳ ಈ ಯೋಗ
ದೇವಾಲಯಗಳ ಆಗರ
ಎಂದಿಗೂ ಮಧುರ ಈ ನಗರ

ಕನ್ನಡವೇ ನಮ್ಮ ಉಸಿರು
ಕರ್ನಾಟಕವೇ ನಮ್ಮ ತವರು
ಕನ್ನಡಾಂಭೆಯೇ ನಮ್ಮಮ್ಮ 
ಅವಳಿಗೊಂದು ನಮನವ ಸಲ್ಲಿಸಮ್ಮ

ಎಲ್ಲೆ ಇರು ಹೇಗೆ ಇರು ಏನೆಂದು ಕನ್ನಡವಾಗಿರು




ಕವನ-12


ನನ್ನವಳಿಗಾಗಿ ...!!-07


ನನ್ನೊಲವಿನ   ನವಿಲುಗರಿಯೇ
ಎಷ್ಟು ಸುಂದರ ಈ ನಿನ್ನ ಪರಿಯೇ
ಕೋಮಲವೂ ಆ ನಿನ್ನ ಸ್ಪರ್ಶ
ನೀ ಜೊತೆಯಲ್ಲಿದರೆ ಎಷ್ಟೊಂದು ಹರ್ಷ

ನನ್ನೆದೆಯ ಕೆಂಪು ಗುಲಾಬಿಯೇ
ಮುದುಡದಿರು ಅರಳುವ ಮುನ್ನವೇ
ಪೋಷಿಸುವೆನು ನಿನ್ನ ಮನದಲ್ಲಿಟ್ಟು 
ಅರಳುವೆಯ ಪ್ರೀತಿಯ ಅಭಿಲಾಷೆಯನ್ನಿಟ್ಟು

ಸಾವಿರ ಸಾವಿರ ಪ್ರಶ್ನೆಗಳ ಸಂತೆಯೇ
ಕಾಯುತ್ತಿರುವೆನು ನಿನ್ನ ಉತ್ತರಕ್ಕೆ ಅಂತೆಯೇ
ಮೂಡುವೆಯ ಮಿನುಗುವ ನಕ್ಷತ್ರದಂತೆಯೇ
ಮರೆಯಾಗುವೆಯ ಅಮಾವಾಸ್ಯೆಯ ಚಂದ್ರನಂತೆಯೇ ?

ಓ ನನ್ನ ಪ್ರತಿನಿತ್ಯ ಕಾಡುವ ನೆನಪೇ
ಮರೆತು ಮಂಕಾಗುವುದೇ  ನಿನ್ನಯ ಹೊಳಪೇ
ನೆನಪುಗಳ ನೆಪದಲ್ಲಿ ಕಾಡುತ್ತಿರುವೆಯಲ್ಲೇ
ನೆನಪುಗಳು ಮಾಸುವ ಮುನ್ನವೇ ಬರುವೆಯೇ?

-ನಿನ್ನವ ಮನು 


Thursday 30 October 2014

ಕವನ-11




ಕವಲು ದಾರಿಯ ಕನವರಿಕೆಯಲ್ಲಿ ನೂರೆಂಟು ಭಾವ
ಬರೆಯಲು ಹೋದರೆ ಬರೆಯಲಾಗದ ಭಾವ
ನೋಡಲು ಹೋದರೆ ನೋಡಲಾಗದ ನೋಟ
ಪ್ರೀತಿಯೆಂಬ ಮಾಯೆ ನೀ ಇಷ್ಟೊಂದು ನೋವ.

ಕಾಣದ ಲೋಕದಲ್ಲಿ ನೀನಗಾಗಿ ಕಾದು ಕುಳಿತಿರುವವನು ನಾನು
ಒಮ್ಮೆಯಾದರೂ ಬಂದು ಹೋಗುವೆಯಾ ನನ್ನಯ ಜಾನು
ಪ್ರೀತಿಯೆಂಬ ಹಣತೆಯ ಮನದಲ್ಲಿ ಹಚ್ಚಿ
ಬೆಳಕು ಮೂಡುವ ಮುನ್ನವೇ ಮರೆಯಾದೆಯ 

ಅಸ್ಪಷ್ಟವಾಗಿದೆ ನನ್ನ ಈ ಬದುಕು
ಸ್ಪಷ್ಟವಾಗಿಸುವುದೇ ನಿನ್ನ ಬೆಳಕು
ಹಣತೆಯು ಬೇಡ,ಮೊಂಬತ್ತಿಯು ಬೇಡ
ನಿನ್ನ ಆಗಮನವೆಂಬ ಬೆಳಕೆ ಸಾಕು.

ಅರೆಗಳಿಗೆಯ ಆರಾಧಕ  ನಾನಲ್ಲ
ಅರೆಗಳಿಗೆಯು ನಿನ್ನ ಬಿಟ್ಟಿರೋದಿಲ್ಲ
ಅರೆನಿದ್ರೆಯಲ್ಲೂ ಪರಿತಪಿಸುವೆ ನಿನ್ನ ಹೆಸರನ್ನ
ಅರೆ ಹುಚ್ಚನಾಗಿರುವೆನು ನಿನ್ನ ಗುಂಗಿನಲ್ಲಿ ನಾನೀನ್ನ

ಆಸೆಗಳ ಅಭಿಲಾಷೆಯನ್ನ ತಿಳಿಸಿರುವೆ ನಾನಂದು
ಈಡೇರಿಸುವ ಒಲವು ನಿನ್ನದೆಂದೆಂದು
ಕವಲು ದಾರಿಯಲ್ಲಿ ಕಾದು ಕುಳಿತಿರುವೆ
ನೀನು ಬರುವೆ ಎಂಬ ನಿರೀಕ್ಷೆಯಲ್ಲಿ .

-ನಿನ್ನವ ಮನು 


Friday 24 October 2014

ಕವನ-09



ಕಗ್ಗತ್ತಲು ಆವರಿಸಿತು ಸುತ್ತಲೂ ನೀ
ನನ್ನವಳಲ್ಲವೆಂದು ಅರಿತ ಆ ಕ್ಷಣ 
ಮೂಡುವೆಯ ಮೊಂಬತ್ತಿಯಾಗಿ 
ನನ್ನ ಬಾಳಿನ ನಂದಾದೀಪವಾಗಿ 
ನನ್ನ ಅರೆಗಳಿಗೆಯು ನಾನು ಬಿಟ್ಟಿರಲಾರೆ 
ನಿನ್ನ ಪ್ರೇಮಕ್ಕೆ ಬೆಲೆಯೂ ಕಟ್ಟಲಾರೆ
    ಎದುರು ನೋಡುತ್ತಿರುವೆನು ಗೆಳತಿ ನನ್ನ ಆಗಮನಕ್ಕಾಗಿ 
ನೂರಾರು ಭಾವನೆಯ ಕನಸ್ಸುಗಳ ಹೊತ್ತು
ಕನವರಿಕೆಯಲ್ಲಿ ಕರಗಿದೆ ಈ ಜೀವನ
ಕಾಣಬಹುದೆ ಒಮ್ಮೆಯಾದರೂ ನಿನ್ನನ್ನು ಈ ಮನ.
                                   
                                                         -ನಿನ್ನವ ಮನು


Wednesday 22 October 2014

ಕವನ-07




ಕಾಣದ ಪ್ರೀತಿಗಾಗಿ ಕನವರಿಸಿದೆ ನನ್ನ ಈ ಮನ
ಕಂಡರೂ ಕಾಣದಂತೆ ನಟಿಸುತ್ತಿದೆ ನಿನ್ನ ಆ ಮನ
    ನಾ ನಿನ್ನ ಪ್ರೀತಿಯ ಅಂಗಳದಲ್ಲಿ ಅಲೆದಾಡುತಿರುವ  
ಪ್ರೀತಿಯ ಅಲೆಮಾರಿ
ಬೇಡುತ್ತಿರುವೆನು ಆ ನಿನ್ನ ಹೃದಯವೆಂಬ ಪ್ರೀತಿಯ 
  ಮಂದಿರದಲ್ಲಿ ಪ್ರೀತಿಗೆ ನೆಲೆ
  ನನ್ನ ಸ್ವಪ್ನಗಳ ಸರಮಾಲೆಯಲ್ಲಿ ಸುಳಿಯಿತ್ತಿರುವವಳು ನೀನೇ
  ನಾ ಒಮ್ಮೆ ಯಾದರೂ ಸುಳಿದಿಲ್ಲವೇ ಆ ನಿನ್ನ ಕೆಟ್ಟ ಕನಸಲ್ಲೂ?
              ಅಜ್ಞಾಪಿಸುವೆ ಆ ದೇವರಿಗೂ ನುಮ ಜನುಮದಲ್ಲೂ ನೀ ನನ್ನವಲಾಗಳೆಂದು
             ಬೇಡುವೆನು ಆ ದೇವರನ್ನು  ಶಸ್ಸು ಕಾಣಲಿ ಈ ನನ್ನ ಪ್ರೀತಿಯೆಂದೆಂದೂ
 ಬಡವ ನಾ ದುಡ್ಡಿನಲ್ಲಿ  ಶ್ರೀಮಂತ ಈ ನನ್ನ ಪ್ರೀತಿಯಲ್ಲಿ
ಕಣ್ಣಲ್ಲಿ ಕಣ್ಣಿಟ್ಟು ಕಾಯುವೆನು ಗೆಳತಿ ಆ ನಿನ್ನ ಪ್ರಾಣವ.
                                                          -ಮನು

Tuesday 21 October 2014

ಕವನ-06


ಮೊದಲ ಭಾರೀ ನೀ ನಕ್ಕ ಆ ಗಳಿಗೆ 
          ಪ್ರತಿನಿತ್ಯವೂ ನೀಡುತ್ತಿದೆ ನನಗೊಂದು ಪ್ರೀತಿಯ ಗುಳಿಗೆ !
ಮೊದಲ ಭಾರೀ ನೀ ನಾಡಿದ ಆ ಮಾತು 
                  ಇಂದಿಗೂ ಪೋಣಿಸಿದಂತಿದಿ ನನ್ನ ಕಿವಿಯಲ್ಲಿ ಸಂಗೀತದ ಮುತ್ತು !
ಮೊದಲ ಬಾರಿ ನೀ ಅತ್ತ ಆ ಕ್ಷಣ 
ಇಂದಿಗೂ ಕಲಕುವಂತೆ ಮಾಡಿತು ಈ ಮನ!
    ಮೊದಲ ಬಾರಿ ನಿನ್ನ ಮೊಗದಲ್ಲಿ ಕಂಡ ಆ ಮುನಿಸು 
ನೆನೆದು ನೆನೆದು ನಗಿಸುವಂತ ಆ ಸೊಗಸ್ಸು!
ಮೊದಲ ನಿನ್ನಲ್ಲಿ ಕಂಡಂತ  ಆ ಮೌನ 
ಮಾಡಿತು ನನ್ನನ್ನು ಮೌನಿಯ ಆ ಮೌನಕೆ!
ನೀನೆ  ನನ್ನ ಮೊದಲ ಕನಸಿ ಹುಡುಗಿ 
ನೀನೆ  ನನ್ನ ಕೊನೆಯ ನನಸಿನ ಕನಸು!
                           
                                                           -  ಮನು



.

Sunday 19 October 2014

ಕವನ-05



ನನ್ನವಳಿಗಾಗಿ ...!!



ಏಕೆ ಮರೆಯಾಯಿತು ಗೆಳತಿ ನಿನ್ನಲ್ಲಿ ಮೊದಮೊದಲು ಕಂಡ ಆ ನಗು
ಏಕೆ ಮೂಕದೆ ಗೆಳತಿ ಎಲ್ಲಿ ನಿನ್ನಯ ಪಟ್ ಪಟ್ ಪಟಾಕಿ ಮಾತು
ಏಕೆ ಮಂಕಾಯಿತು  ಗೆಳತಿ  ನಿನ್ನಯ ಪಳ ಪಳ ಹೊಳೆಯುತ್ತಿದಂತ ಕಣ್ಣುಗಳು
ಏಕೆ ಕುಗ್ಗಿರುವೇ  ಗೆಳತಿ  ಎಲ್ಲಿ ಹೋಯಿತು ಮೊದಮೊದಲಿದ್ದ ಉತ್ಸಾಹ 

ಬಾಯಲ್ಲಿ ಬೆರಳಿಟ್ಟು ಕ್ಲಿಕ್ಕಿಸಿಕೊಂಡ ಆ ನಗುಮೊಗದ ಭಾವಚಿತ್ರ 
ಬರೆಯುವಂತೆ ಪ್ರೇರೇಪಿಸಿತು ನಿನಗೊಂದು ಪತ್ರ
ಆಗಲು ಬಯಸಿದೆ ನಿನ್ನ ಮನದ ಆರಾಧಕ 
ಬಯಸಿದ್ದೆ ತಪ್ಪಾಯಿತು ನಾನೊಬ್ಬ ಅಪ್ರಯೋಜಕ
ನನ್ನ ಮನಸ್ಸು ಹೇಳುತ್ತಿತ್ತು ನೀ ನನ್ನವಳಾಗುವೆ ಎಂದು
ವಾಸ್ತವ ಕರೆ ನೀಡುತ್ತಿತ್ತು ಅವಳು ನಿನ್ನವಳಲ್ಲವೆಂದು 

ನಿನ್ನಯ ಪ್ರೀತಿಯ ಒಲುಮೆಯಲ್ಲಿ ನನಗೇ ಕಂಡದ್ದು ಎರಡೇ ಭಾವ
ಒಂದು ನಿನ್ನಯ ಮಾತು,  ಮತ್ತೊಂದು ನನ್ನನ್ನು ಅಣುಕಿಸಲು
ಹೇಳುತ್ತಿದ್ದ ಸುಳ್ಳು
ನೀ ಯಾಕೆ ನನಗೇ ಇಷ್ಟವಾದೆ ತಿಳಿದಿಲ್ಲ ನನಗಿಂದು
ಕಂಬನಿ ಮೂಡುವುದು ನೆನೆದರೆ ಆ ಸವಿ ನೆನಪೊಂದು
ನೀ ನನಗಿಂದು ಹಚ್ಚ ಹಸಿರಾದ ನೆನಪು
ಮತ್ತೆ ಮೂಡುವುದೇ ನನ್ನಲ್ಲಿ ಪ್ರೀತಿಯ ಹೊಳಪು

                                                     
                                                                        ನಿನ್ನ ಗೆಳೆಯ ಮನು



Thursday 16 October 2014

ಕವನ-04




ಎಲೆಲ್ಲಿ ಹುಡುಕಲಿ ಗೆಳತಿ ನಿನ್ನ ಎಲ್ಲಿರುವೆ ಎಂದು ?
ಯಾರ್ಯಾರ ಕೇಳಲಿ ಗೆಳತಿ ನೀ ಯಾರಿರಬಹುದೆಂದು ?
ದುಂಬಿಯ ಕೇಳಿದೆನನ್ನವಳು ಯಾರೆಂದು ?
ದುಂಬಿಯೂ ಹೇಳಿತು ನಿನ್ನವಳು ಹೂವೆಂದು!
ಮೋಡವ  ಕೇಳಿದೆ ನೀನು ಎಲ್ಲಿರುವೆ ಎಂದು ?
ಮೋಡವೂ ಗುಡುಗಿತು ನೀನು ವರ್ಷವಿರಬಹುದೆಂದು!
ಪಾರಿಜಾತ ಮರವ ಪ್ರಶ್ನಿಸಿದೆ ನನ್ನವಳು ಯಾರೆಂದು?
ಪಾರಿಜಾತವು ಉತ್ತರಿಸಿತು ನೀ ಶ್ರೀಗಂಧವಿರಬಹುದೆಂದು!
ಕೋಗಿಲೆಯ ಕೇಳಿದೆ ನನ್ನವಳು ಹೇಗಿರಬಹುದೆಂದು?
ಕೋಗಿಲೆ ಹಾಡುತ ಹೇಳಿತು ಮಧುರ ಕಂಠವೀರಬಹುದೆಂದು!
ಜಾತ್ರೆಯಲ್ಲಿ ಹುಡುಕಿದೆ ನೀನಿರಬಹುದೆಂದು 
ಭಾವಿಸಿದೆ ಬೊಂಬೆಯೇ ನೀನಾಗಿರಬಹುದೆಂದು!
ಬೆಟ್ಟದ ತುದಿಯಲ್ಲಿ ನಿಂತೆ ನೀ ಕಾಣಬಹುದೆಂದು
ನಿನ್ನ ಬಿಟ್ಟು ಕಂಡಿತು ಸುಂದರ ಜಗವಂದು!
ಸಾಗರದ ಮಧ್ಯೆ ದುಮುಕಿ ಹುಡುಕಿದೆ ನೀ ಅಲ್ಲಿರಬಹುದೆಂದು
 ಜಲಚರ ಪ್ರಶ್ನಿಸಿದವು ನೀ ಏಕೆ  ಬಂದಿರುವೆ ಎಂದು?

Tuesday 14 October 2014

ಕವನ-03


ಏನೆಂದು ಬಣ್ಣಿಸಲಿ ಗೆಳತಿ ಆ ನಿನ್ನ ಅಂದವ
ಏನೆಂದು ವರ್ಣಿಸಲಿ ಗೆಳತಿ  ಆ ನಿನ್ನ ಚೆಂದವ
ಕಣ್ಣುಗಳಿಗೆ  ಕಾಣದೆ ನನ್ನ ಕನಸ್ಸಲ್ಲಿ  ಕಾಡುವ ಮಾಯೆಯ?
ಪ್ರತಿಕ್ಷಣವೂ ಹೃದಯದಲ್ಲಿ ಮೂಡುವ ಪ್ರೀತಿ ಛಾಯೆಯ?
ನನ್ನ ಮೊಗದಲ್ಲಿ ಮೂಡುವ ನಗುವೇ
ಯಾಕೆ ಕ್ಷಣಮಾತ್ರದಲ್ಲಿ ಮಿಂದು ಮರೆಯಾಗುವೆ
ನೀ ನನ್ನ ಸುಂದರವಾದ ಸ್ವಪ್ನವೇ 
 ಬರುವೆ ಯಾಕೆ ನಾ ನಿದ್ರಿಸುವ ಸಮಯವೇ
ಸುಂದರಿಯು ಕೂರೂಪಿಯೋ ಕಂಡಿಲ್ಲ ನಾನಿಂದೂ
ಕಾಯುತಿರುವುದು ಮನವು ನಿನಗಾಗಿ ಎಂದೆಂದೂ




Saturday 11 October 2014

ಕವನ-01

ಅವಳಿಗಾಗಿ ...!!!!

ಹೃದಯ ಪರಿತಪಿಸುತ್ತಿದೆ ಗೆಳತಿ ನಿನಗಾಗಿ
ಆ ನಿನ್ನ ಬರುವಿಕೆಗಾಗಿ,ನಿನ್ನ ಇರುವಿಕೆಗಾಗಿ
ಕಣ್ಣುಗಳು ಹುಡುಕುತ್ತಿವೆ ಆ ನಿನ್ನ ಮೊಗವನ್ನ 
ಒಮ್ಮೆಯಾದರೂ ಬಂದು ಬೀರುವೆಯ ಆ ನಿನ್ನ ನಗುವನ್ನ
 ಬಿಡದೆಯೇ ಕಾಡುತಿಹುದು ನಿನ್ನ ಆ ಕಣ್ಣಂಚಿನ ಕಾಡಿಗೆ
ನನ್ನ ಮನಸ್ಸು ಸಾಗುತಿಹುದು ಹುಡುಕುತ ನಿನ್ನ ದೂರದ ನಾಡಿಗೆ 
ಎಲ್ಲಿಯೂ ಕಾಣದ ನೀನು ಕಾಣುವೆ ನಾ ಕಣ್ಣ ಮುಚ್ಚಿದಾಗ
ದೂರ ಸಾಗುವೆ ನೀನು ನಾ ಕಣ್ಣ ತೆರೆದಾಗ
ಗೆಳತಿ ನೀನು ನನ್ನ ಕನಸ್ಸಿನ ಛಾಯೆಯ?
ಇಲ್ಲವೇ ನೀನು ನನ್ನ ನನಸ್ಸಿನ ಮಾಯೆಯ?



                                             -ನಿನ್ನವನು ಮನು