Monday 16 February 2015

ಕವನ-33



ನೀ  ನನ್ನಲಿಲ್ಲ..!!

ಮರೆತ ನಿನ್ನ ನೆನಪೊಂದು ಜ್ಞಾಪಕವಾಯಿತು
 ಮರೆಯಲಾಗುತ್ತಿಲ್ಲ; ಬೇರೆಯಲಾಗುತ್ತಿಲ್ಲ.

ಕರೆದ ನಿನ್ನ ಹೆಸರೊಂದು ಕೇಳಿಬಂತು
ಕೇಳಲಾಗುತ್ತಿಲ್ಲ ;ಕರೆಯಲಾಗುತ್ತಿಲ್ಲ .

ನಿನ್ನೊಡನೆ ಕಳೆದ ಕ್ಷಣವೊಂದು ಕರಗಿಬಂತು
ಸ್ಮರಿಸಲಾಗುತ್ತಿಲ್ಲ.ಸ್ವೀಕರಿಸಲಾಗುತ್ತಿಲ್ಲ.

ಕಣ್ಣು ಹನಿಗಳಿಂದ ತುಂಬಿ ಬಂತು
ಒಣಗಿಸಲಾಗುತ್ತಿಲ್ಲ ;ಜಿನುಗಿಸಲಾಗುತ್ತಿಲ್ಲ.

ಬರೆದ ಸಾಲೊಂದು ಮೂಡಿಬಂತು 
ಅಳಿಸಲಾಗುತ್ತಿಲ್ಲ;ಮತ್ತೆ ಬರೆಯಲಾಗುತ್ತಿಲ್ಲ.

ಪ್ರೀತಿ ಎಂಬುದು ಮಾಯಾ ಜಿಂಕೆಯಂತೆ
ನಿನ್ನಲ್ಲೂ ಇಲ್ಲ;ಈಗ ನನ್ನಲ್ಲೂ ಇಲ್ಲ.
                                             -ಮನು







Thursday 5 February 2015

ಕವನ-32

ಮುದ್ದು ಕೋತಿಗಾಗಿ..!!

ಆಕಸ್ಮಿಕವಾಗಿ ಚಿಗುರಿದ ಮೊಗ್ಗೊಂದು 
ಅರಳಿದೆ ನಮ್ಮ ಸ್ನೇಹದ ತೋಟದಲ್ಲಿ 
ಈ ತೋಟದಲ್ಲಿ ಸಾವಿರ ಹೂವುಗಳು,
ಸಾವಿರ ಕನಸುಗಳು,ಕೊಂಚ ಕೋಪ
ಒಂದಿಷ್ಟು ಹುಸಿ ಮುನಿಸ್ಸು , ಸಾಗರದಷ್ಟು ಪ್ರೀತಿ .

ಮತ್ತೆ ಬಂದಿದೆ ಮುದ ತರುವ ನಿನ್ನ ಹುಟ್ಟು ಹಬ್ಬದ ಹರ್ಷ
ಸಾಲುಗಳು ಸರದಿಯಲ್ಲಿ ನಿಂತಿವೆ ಅರಸಲು ನಿನಗೇ ಈ ವರ್ಷ
ಹದಿಹರೆಯದ ಬದುಕಿನ ಹದಿನೆಂಟರ ವರ್ಷ
ಪ್ರತಿ ಕ್ಷಣ ,ದಿನ ತರಲಿ ನಿನಗೇ ಯಶಸ್ಸಿನ ಹರ್ಷ .

ಹೃದಯ ದೀಪವು ನಮ್ಮದೇ
ಮಿನುಗುವ ಸ್ನೇಹವೂ ನಮ್ಮದೇ 
ಹುಟ್ಟು ಸಾವಿನ ನಂಟು ,ಹೃದಯ ಮಿಡಿವವರೆಗೆ
ನಮ್ಮ ಈ ಸ್ನೇಹದ ನಂಟು , ಈ ಜಗದ ಕೊನೆಯವರೆಗೆ 
                                         -manu