ಹಾಡ ಬಯಸಿದೆ ಹೃದಯದ ಹಾಡೊಂದನ
ಬರೆಯ ಬಯಸಿದೆ ಬಾಳ ಭಾವವೊಂದನ
ಬಿಡಿಸ ಬಯಸಿದೆ ಬದುಕಿನ ಚಿತ್ರವೊಂದನ
ನೆನೆಯ ಬಯಸಿದೆ ನಿನ್ನಯ ನೆನಪೊಂದನ
ನೀನೆಂಬುದು ನನ್ನ ಕವಿತೆಯಲ್ಲಿ ಸಾಮಾನ್ಯ
ನೀನೆಂಬುದು ನನ್ನ ಹೃದಯದಲ್ಲಿ ಅಸಾಮಾನ್ಯ
ನನ್ನ ಬಾಳಿನ ಬೆಳಕು ನೀನೇ
ನನ್ನ ಬದುಕಿನ ಬವಣೆಯೂ ನೀನೇ
ನನ್ನ ಜೀವದ ಉಸಿರು ನೀನೇ
ನನ್ನ ಜೀವನದ ಜ್ಯೋತಿಯು ನೀನೇ
ಮೂಡುವೆಯ ಬಯಸಿದ್ದಕ್ಕಿಂತ ಮಿಗಿಲಾಗಿ
ನನ್ನ ಬವಣೆಯ ಬಿಡುಸುವುದಕ್ಕಾಗಿ
ಕಂಬನಿಯ ಕಿರುನಗೆಯನ್ನಾಗಿಸುವುದಕ್ಕಾಗಿ
ಕನವರಿಕೆಯನ್ನ ಕಸಿವಿಸಿಗೊಳಿಸುವುದಕ್ಕಾಗಿ
-ಮನು
No comments:
Post a Comment