ಬದುಕು..!
ಸುಖದ ದಾರಿಯನ್ನ ಅರಸಿ ಸಾಗುತಿದೆ ಪಯಣ
ಸಮುದ್ರದ ಅಲೆಯಂತೆ ಬದುಕಿನ ಪಯಣ
ದಾರಿಯು ಸಿಕ್ಕಿತೆನ್ನಲು ಪುನಃ ತಪ್ಪಿದ೦ತೆ
ಬೆಳಕು ಹರಿದರೂ ಕತ್ತಲು ಕವಿದಿರುವ೦ತೆ
ಬದುಕು ಏಳು ಬೀಳಿನ ಆಟ
ಎಲ್ಲಿಯ ತನಕ ಈ ಓಟ?
ನಕ್ಕರು ನಕ್ಕ ಹಾಗಿಲ್ಲ
ಅತ್ತರೂ ಅತ್ತ ಹಾಗಿಲ್ಲ
ಬದುಕಿನ ರೆಂಬೆ ಹೇರಿ ಕುಳಿತಾಗ
ಇನ್ನೊಂದು ತನ್ನ ಹೇರು ಎಂದಂತೆ
ಏರಿ ತುದಿಯನು ಮುಟ್ಟಿದಾಗ,
ಮರವೇ ಕುಸಿದು ನೆಲವಪ್ಪಿದ೦ತೆ
ಇಲ್ಲಿ ಎಲ್ಲ ಹಾರಲೀಚ್ಚಿಸುತಿಹರು
ತಮ್ಮ ಗುರಿಯ ಮುಟ್ಟಬೇಕೆಂದು ಇರುವರು
-ಮನು
No comments:
Post a Comment