Wednesday 31 December 2014

ನೆನಪಿನ ನೋವಲ್ಲಿ..!!

ನೆನಪಿನ ನೋವಲ್ಲಿ..!!

ದಿನವೂ ನಿನ್ನ ನೆನಪು ಅಂತ ಅಲ್ಲ ಗೆಳತಿ
ನಿನ್ನ ಬಿಟ್ಟು ಬೇರೆ ಯಾವ ಲೋಕವು ನನಗೆ ತಿಳಿದಿಲ್ಲ

ಬಹುಶಹ ಇದು 31/12/2013 ಆಗಿದ್ದರೆ ನೀನು ನನ್ನೊಂದಿಗೆ  ಮಾತಾಡುತ್ತಿದ್ದೆ ಅಲ್ವಾ ಕೋತಿ. ಇಂದು ಅದೇ 31/12 ಆದರೆ 2013 ಅಲ್ಲ ಕಾಣೆ 2014 . ನೀನು ಬರಿಯ ನೆನಪಾಗಿ ಉಳಿದಿರುವೆ ಕಣೊ .ಯಾಕೆ ಇಷ್ಟೊಂದು ನೆನಪಾಗುತ್ತಿದ್ದೀಯ ,ಮಗುವಿಗೆ ಅಮ್ಮನ ನೆನಪಾದಂತೆ . ತುಂತುರು ಹನಿಗಳಿಗೆ ಕಾಮನಬಿಲ್ಲಿನ ರಂಗಿನಂತೆ. ಕೃಷ್ಣನ ಕೊಳಲಿನ ನಾದದಂತೆ.
ನೀನು ಬರಿಯ ನೆನಪೆಂದು ಅದೆಲ್ಲೋ ದೂರದಲ್ಲಿನ ನಕ್ಷತ್ರಗಳನ್ನ ಎಣಿಸೋಣ ಎಂದರೇ ಆ ಮಿನುಗುವ ಚುಕ್ಕಿಗಳಲ್ಲೂ ನಿನ್ನ ನಗುವೇ ಕಾಣುತ್ತಿದೆ ಕಣೋ,ಹಾಲಿನ ಬಿಲ್ಲೆಯಂತೆ ಕಾಣ್ತಿದ್ದ ಆ ಕಳ್ಳ ಚಂದ್ರನನ್ನ ನೋಡೋಣ ಅಂತ ಕಣ್ಣ ರೆಪ್ಪೆಯ ಸರಿಸಿದರೆ ಅಲ್ಲೂ ನಿನ್ನ ಮೊಗವೇ ಕಾಣ್ತಿದೆ ,ಇಷ್ಟು ನೆನಪಾಗುತ್ತಿರುವ ನಿನ್ನ ನೆನಪಲ್ಲೇ ನಾ ಹುಚ್ಚನಾಗುವೆನೆಂಬ ಭಯ ಆಗುತ್ತಿದೆ  ಕೋತಿ.
ನಿನ್ನ ಹೆಸರನ್ನ ಒಮ್ಮೆ ಆ ಆಕಾಶಕ್ಕೆ ಹೇಳೋ ಆಸೆ ಆಗ್ತಿದೆ ಹೇಳ್ಳಾ?

ನೆನಪುಗಳಲ್ಲೆ ನೆನೆದು ನೆನೆದು
ಹೃದಯ ಹಸಿರಾಗಿದೆ
ನಿನ್ನ ನೆನಪುಗಳ ಮಂಜು ಮುಸುಕಿ
ನನ್ನ ಹೃದಯದ ಕಾಡು ಮಂಕಾಯಿತು

31/12/2013 ರನ್ನ ನೆನೆದರೆ ನಾನು ಒಂದು ವರ್ಷ ಚಿಕ್ಕವನಗಿಬಿಡ್ತೀನಿ ಕಣೊ , ದಿನಗಳು ಕಳೆದು ಕಳೆದು ,ನಿತ್ಯ ಕನಸ್ಸುಗಳ ಬುತ್ತಿ ಹೊತ್ತು 2013ರಕ್ಕೆ ವಿದಾಯ ಹೇಳುವ ತುಡಿತದಲ್ಲಿ ಇದ್ದ ಆ ಕ್ಷಣ . ಎಷ್ಟೋ ಭಾರೀ ಮಾತಾಡಿದ್ದರು , ಆಗಿನ್ನೂ ಪರಿಚಯವಾದಂತೆ ಇತ್ತು. ಪರಿಚಯವಾದ ಅಪರಿಚಿತರಂತೆ ಮೌನವನ್ನೇ ಮಾತನ್ನಾಗಿಸಿ ಸಮಯ ಕಳೆಯುತ್ತಿದ್ದೆವು .ಅಂದು ಅದೆಷ್ಟು ಬೇಗ 11 ಗಂಟೆಯಾಯಿತು ಗೊತ್ತಿಲ್ಲ . ಹೊಸ ವರ್ಷಕ್ಕೆ ಕೇವಲ 1 ಗಂಟೆ . ಅಂದ್ರೆ 60 ನಿಮಿಷ only 3600 ಸೆಕೆಂಡ್ಗಳು ,ಅದೆಷ್ಟು ಭಾರೀ ಗಡಿಯಾರದ ಕಡೆ ತಿರುಗಿದೇನೋ ಗೊತ್ತಿಲ್ಲ ಎಣಿಸಿದ್ದರೆ ಸೆಕೆಂಡ್ ಮುಳ್ಳು ಚಲಿಸಿದಕ್ಕಿಂತ ಹೆಚ್ಚು ಗಡಿಯಾರದ ಕಡೆ ನೋಡಿತಿದ್ದೆ ಅನಿಸ್ತಿದೇ ನಿಮಿಷಗಳು ಕಳೆದಂತೆ ಜೋರಾಗುತ್ತಿರುವ ಹೃದಯದ ಮಿಡಿತ.
ಸಮಯ ಅದಾಗಲೇ 11:55 ನಿನ್ನೊಡನೆ ಮಾತನಾಡಲು ಕಾಲ್ ಮಾಡಿದ್ದು ಅಷ್ಟೇ ಗೊತ್ತಿರೋದು ಆ ನಾಲ್ಕು ನಿಮಿಷ ಎಂ ಮಾತಾಡಿದೇವೋ ಗೊತ್ತಿಲ್ಲ time ಅದಾಗಲೇ 11:59 ಆಗಿತ್ತು. 2013ರರ ಕೊನೆಯ ನಿಮಿಷವನ್ನ ನೀನೊಂದಿಗೆ ಕಳೆಯುತ್ತಿದ್ದೆ . ಅದಾಗಲೇ ಕೌಂಟ್ ಡೌನ್ ಶುರು 59........10......3 2 1 HAPPY NEW YEAR ಎಂದು ನಿನ್ನ ಹೆಸರನ್ನ ಆ ನಡು ರಾತ್ರಿಯಲ್ಲಿ ಹುಚ್ಚನಂತೆ ಕಿರುಚಿದ ಆ ಕ್ಷಣ ಇಂದಿಗೂ ಕಾಡುತ್ತಿದೆ.

ನೆನಪಿನಲ್ಲಿ ನೆನಪಾಗಿ ಕಳೆದ ,ಕಳೆದ ವರ್ಷ
ಪ್ರೀತಿಯಲ್ಲಿ ಪ್ರೀತಿಯಿಂದ ಬರುತ್ತಿರುವ ಮುಂದಿನ ವರ್ಷ
ಜೀವನದ ಜೊತೆಯಲ್ಲಿ ಜೊತೆಯಾಗುವ ಈ ವರ್ಷ

ಅಂದು ನಿನ್ನೊಡನೆ ಮಾತನಾಡಲು , ಸಮಯವ ಕಳೆಯಲು ಕಾರಣವಿರಲಿಲ್ಲ ,ಕಳೆದ ಕ್ಷಣವಿರಲಿಲ್ಲ .ಆದರೆ ಇಂದು ನೀನೊಂದಿಗೆ ಹೆಜ್ಜೆ ಹಾಕಿದ ಪ್ರತಿ ಕ್ಷಣ ಉಂಟು ಅದನ್ನ ನಿನ್ನೊಡನೆ ಅಂಚಿಕೊಳ್ಳಲು ನೀನು ನನ್ನೊಂದಿಗಿಲ್ಲ ,ನನ್ನವಳಾಗಿ ಉಳಿದಿಲ್ಲ. ಪ್ರತಿ ಕ್ಷಣ , ಪ್ರತಿ ದಿನ ನೀ ನಾನೊಂದಿಗೆ ಇರುವೆ ಆದರೆ ಅದು ಬರಿಯ ನೆನಪಿನ ನೆಪವಾಗಿ ಅಷ್ಟೇ ಕಣೊ ಕೋತಿ .
ಅಪರಿಚಿತರಂತೆ ಬಂದು
ಪರಿಚಿತವಾದ ಹಾದಿಯಲ್ಲಿ 
ನೆಡೆದು ಹೋಗುವ ನಡುವೆ
ಉಳಿದದ್ದು ಕರಿನೆರಳಿನ ನೆನಪುಗಳು
                                               -manu


Wednesday 24 December 2014

ಕವನ-28


ಎಲ್ಲವೂ ನೀನೇ..!!

ನಿನ್ನ ನೆನಪು ಕೆಂಡ ಸಂಪಿಗೆಯಂತೆ
ನೆನೆಯಲಾಗುತ್ತಿದೆ ಒರೆತು 
ಸವಿಯಲಾಗುತ್ತಿಲ್ಲ.

ನಿನ್ನ ನಗುವು ಗುಲಾಬಿ ಹೂವಿನಂತೆ
ನೋಡಲಾಗುತ್ತಿದೆ  ಒರೆತು 
ಭಾಗಿಯಾಗಲಾಗುತ್ತಿಲ್ಲ.

ನಿನ್ನ ಕಣ್ಣ ನೋಟ ಮೊನಚಾದ ಖಡ್ಗದಂತೆ
ಗ್ರಹಿಸಬಹುದಷ್ಟೆ ಒರೆತು 
ಉತ್ತರಿಸಲಾಗುತ್ತಿಲ್ಲ.

ನಿನ್ನ ಮೊಗವು ಮುಂಗುರುಳ ಚಂದ್ರನಂತೆ
ಕೈ ತೋರಿ ಹೇಳಬಹುದೇ ಒರೆತು 
ತಲುಪಲಾಗುತ್ತಿಲ್ಲ .

ನನ್ನ ಪ್ರೀತಿ ಸಪ್ತ ಸಾಗರದಂತೆ
ವ್ಯರ್ಥವಾಗುತ್ತಿದೆ ಒರೆತು 
ನಿನ್ನಗೇ ತಿಳಿಸಲಾಗುತ್ತಿಲ್ಲ .


ಬದುಕು ಎಂಬ ಈ ಪಯಣ
ಯಶಸ್ಸಿನ ಕಡೆಗೆ ಒರೆತು
ಮಸಣದ ಕಡೆಗಲ್ಲ.
                      -ಮನು


Monday 22 December 2014

ಮೊದಲ ಕ್ಷಣ..!!

ಮೊದಲ ಕ್ಷಣ ..!!

ಆರಂಭದ ಆ ದಿನಗಳು
ಆಕರ್ಷಣೆಯ ಆ ಕಂಗಳು 
ಅಕ್ಕರೆಯ ಆ ನುಡಿಗಳು
ಆನಂದದ ಆ ನಲಿಯುವಾಗು
ಅಭಿಲಾಷೆಯ ಮನಗಳು
ಆಲಂಗಿಸುವ ಆ ನೋವುಗಳು

ಯಾಕೋ ಗೊತಿಲ್ಲ ಗೆಳತಿ ಮರೆಯಲಾಗುತ್ತಿಲ್ಲ ಆ ಎಲ್ಲ ಕ್ಷಣಗಳನ್ನ , ಅದ್ಯಾವುದೋ ನೆಪದಲ್ಲಿ ಪರಿಚಯವಾದ ನೀನು ಇಂದು ನನ್ನ ಮನಸ್ಸಿಗೆ ಇಷ್ಟು ಹತ್ತಿರವಾಗುತ್ತಿಯ ಎಂದು ನಾನು ಕನಸ್ಸಲ್ಲೂ ಉಹಿಸಿರಲಿಲ್ಲ .
ನಿನ್ನ ಒಂದು ಗಳಿಗೆಯೂ ಮರೆತು ಬದುಕಲಾರೆ ಗೆಳತಿ .
 ನೀ ನನಗೇ ನೆನಪಾಗುವ ಪ್ರತಿಯೊಂದು ಕ್ಷಣ ಅದೆಲ್ಲಿಂದಲೋ ಗೊತಿಲ್ಲ ಸಿ,ಸ್ ಅಶ್ವಥ್ ಸರ್ ರವರ ಕಾಣದ ಕಡಲಿಗೆ ಹಂಬಲಿಸಿದೆ ಮನ ಎಂಬ ಹಾಡು ನನ್ನ ಎದೆಯಲ್ಲಿ ಮನೆ ಮಾಡುವಂತೆ ಮಾಡುತ್ತದೆ , ಅದರ ಗುಂಗಿನಲ್ಲಿರುವ ರವಿ ಅಣ್ಣಾ ಬರೆದ ಲವ್ ಲವಿಕೆಯ ಕಥೆಗಳು ಸಾಲು ಸಾಲಾಗಿ ಬರುತ್ತವೆ . click

ನಿನ್ನ ಮೊದಲ ಭಾರೀ ಕಂಡದ್ದು ಕಾಲೇಜ್ ನಾ ಮೊದಲ ದಿನ ,ಆದರೆ ನಿನ್ನ ಪರಿಚಯವಾದದ್ದು ಅಂದು 19 ಜೂನ್ ,ಅದಾಗಲೇ ಕಾಲೇಜ್ ಬಿಟ್ಟು ಕೆಲ ಸಮಯ ಕಳೆದಿತ್ತು ,ಇತ್ತ ಸೂರ್ಯನು ತನ್ನ ಇರುವಿಕೆಯನ್ನ ನೆನಪಿಸಲು ಕಿರಣಗಳತೀಕ್ಷ್ಣತೆಯನ್ನು ಎಚ್ಚಿಸುತ್ತ ನಗೆ ಬೀರುತ್ತಿದ್ದನು.
ಪರಿಚಿತನಿಗೆ ಅಪರಿಚಿತನಂತೆ ಕಾಣುತ್ತಿದ್ದ ಸೆಂಟ್ರಲ್ ಬುಸ್ ಸ್ಟಾಪ್ ಅಲ್ಲಿ 258 ಬಸ್ಸಿಗಾಗಿ ಕಲ್ಲಿನ ಕುರ್ಚಿಯ ಮೇಲೆ ಅಮಾಯಕನಂತೆ ಕುಳಿತ್ತಿದ್ದೆ . ಅದ್ಯಾವುದೋ ನೆಪವಿಟ್ಟುಕೊಂಡು ಆ ಜನರ ಗುಂಪಿನ ಮಧ್ಯದಿಂದ ನನ್ನೆಡೆಗೆ ಮೆಲ್ಲ ನಗುವ ಬೀರುತ್ತಾ ಬಂದವಳು ನೀನು . ಆ ನಗು ನನ್ನೆದೆಗೆ ಮುದವ ನೀಡಿದಂತಿತ್ತು .ಅಂದು ನನ್ನ ಕಣ್ಣಿಗೆ ನೀನು ಯಾವುದೋ ಲೋಕದಿಂದ ಬಂದಂತೆ ಕಾಣುತ್ತಿದ್ದೆ ,ಅಂದು ನಾವು  ಎಷ್ಟು ಮಾತನಾಡಿದೆವು ನನಗೇ ಗೊತ್ತಿಲ್ಲ. ಮೊದಲ ಬಾರಿ ಹುಡುಗಿಯೋಡನ ಅಷ್ಟು ಮಾತಾಡಿದ್ದು . ನಿನ್ನ ಫ್ರೆಂಡ್ ನನ್ನ  ಎಷ್ಟು ಬೈಕೊಂಡ್ಲೋ ಗೊತ್ತಿಲ್ಲ . ಅಂದು ನಿನ್ನೊಡನೆ ಕಳೆದ ಆ ಕ್ಷಣ ಇಂದಿಗೂ ಮರೆತ್ತಿಲ್ಲ . ಅಂದು ನನ್ನ ಬದುಕಿಗೆ ಹೊಸ ನಾಂದಿಯನ್ನ ಹಾಡಿದಂತಿತ್ತು .
ನನ್ನ ಪ್ರತಿನಿತ್ಯ ಕಾಡುವ ನೆನಪೇ
ಮರೆತು ಮಂಕಾಗುವುದೇ  ನಿನ್ನಯ ಹೊಳಪೇ
ನೆನಪುಗಳ ನೆಪದಲ್ಲಿ ಕಾಡುತ್ತಿರುವೆಯಲ್ಲೇ
ನೆನಪುಗಳು ಮಾಸುವ ಮುನ್ನವೇ ಬರುವೆಯೇ?
 ಆದರೆ ಇಂದು ಅದೇ ಸೆಂಟ್ರಲ್  ಬಸ್ ಸ್ಟಾಪ್ ಅಲ್ಲಿ ,ಅದೇ ಕಲ್ಲಿನ ಕುರ್ಚಿಯ ಮೇಲೆ, ಅದೇ 258 ಬಸ್ಸಿಗಾಗಿ ಕಾದು ಕುಳಿತಿರುವೆ,ಅದೇ ಜನರ ಗುಂಪು ಇದೆ ಆದರೆ ನನ್ನೊಡನೆ ಮಾತನಾಡಲು ನಿನ್ನೊಬ್ಬಳಿಲ್ಲ , ನೀ ಇರದ ಈ ಕಲ್ಲು ಕುರ್ಚಿ ಖಾಲಿಯದಂತಿದೆ , ಕಾದು ಕುಳಿತಿರುವೆ ಗೆಳತಿ ನಿನಗಾಗಿ ನಿನ್ನ ಬರುವಿಕೆಗಾಗಿ .

ನಿನ್ನ ನೆನಪು ಅಗ್ನಿ ಸ್ನಾನದ ರೀತಿ
ನಿನ್ನ ಮರೆವು ಸುಡುವ ಹಿಮದ ಭೀತಿ
ಸುಖದ ಮಾಯಾಜಿಂಕೆಯ ಹುಡುಕುತ ಹೊರೆಟಿರುವೆ
ಹೂ ದಾರಿಯಲ್ಲಿ ಬರಿಯ ನೋವು ಮುಳ್ಳು 
ನಂಬಿಕೆಯನಿಟ್ಟು ನನ್ನೊಡನೆ ಬಾ ಗೆಳತಿ
ಕೈಯ ಹಿಡಿದು ನೆಡೆಸುವೇ ಜೊತೆಯಲಿ
ನಿಂತ ದೋಣಿಯ ಕೆಳಗೆ ಕಡಲು ಚಲಿಸುವ ಹಾಗೆ
ಮರಣವು ಮಗುವಿನಂತೆ ಬರುವತನಕ ನಿನ್ನ ಜೊತೆಯಲಿ 

                                                -----ನಿನ್ನವ ಮನು




Saturday 20 December 2014

ಕವನ-27


ಒಮ್ಮೆ ನೀನಗಾಗಿ

ಕನಸ್ಸಲ್ಲಿ ಕಂಡವಳು ಕಣ್ಣಲ್ಲಿ ಸೆರೆಯಾದಳು
ನನ್ನಸಲ್ಲಿ ಸಿಕ್ಕವಳು ಒಮ್ಮೆಗೇ ಮರೆಯಾದಳು
ಕಾಡುತ್ತಿರುವ ಅವಳ ನೆನಪನ್ನ ಮಳೆಯಲ್ಲಿ ತೊಯುವಾಸೆ 
ಹನಿ ಹನಿಯಲ್ಲೂ ಅವಳ ಮೊಗವನ್ನ ನೋಡುವಾಸೆ
ಹಂಬಲದಿ ಅವಳೊಡನೆ ಮಳೆಯಲ್ಲಿ ನೆಡೆಯುವಾಸೆ 
ತುಂತುರು ಹನಿಯಲ್ಲಿ ಅವಳ ಕಣ್ಣ ಹೊಲಪ ನೋಡುವಾಸೆ
ಅವಳ ನಗುವಿಗೆ ನಾ ಕಾರಣವಾಗುವಾಸೆ 
ಕವಿತೆಯ ಕೊನೆಯಲ್ಲಿ ನಿನ್ನ ಹೆಸರ ಬರೆಯುವಾಸೆ

                                                       -M@nu



Tuesday 16 December 2014

ಮಳೆಯ ಜೊತೆಯಲ್ಲಿ..ನೆನಪಿನ ಉಸಿರಲ್ಲಿ ..!!

ಮಳೆಯ ಜೊತೆಯಲ್ಲಿ..ನೆನಪಿನ ಉಸಿರಲ್ಲಿ ..!!

ಯಾಕಿಂದು ನೀನು ಇಷ್ಟು ನೆನಪಾದೆ ಗೆಳತಿ? ಮಳೆ ಅಂದ್ರೆ ನಿಂಗೆ ಇಷ್ಟ ಅಂತ ನನಗೆ ಯಾಕೆ ತಿಳಿಸಿದೆ? ಪ್ರತಿ ಭಾರೀ ಮಳೆ ಬಂದಾಗಲು ಮನಸ್ಸು ನಿನ್ನಲ್ಲಿ  ಓಡಿ ಬರುತ್ತೆ ಕಣೆ .ಮರೆಯೊದಾದ್ರೂ ಹೇಗೆ ನಿನ್ನ?......ಮಳೆ ಬಂದು ನಿನ್ನ ನೆನಪನ್ನ ನನ್ನ ಹೃದಯದಲ್ಲಿ ಮತ್ತೆ ಮತ್ತೆ ಮರುಕಳಿಸುವಂತೆ ಮಾಡುತ್ತದೆ .ನೀನೇ ಇಲ್ಲ ಈಗ ,ಯಾರಿದ್ದಾರೇ ನಂಗೆ ? ಇನ್ನೂ ಈ ಸುರಿಯುವ ಮಳೆಯಲ್ಲಿ ಬರುವ ನಿನ್ನ ನೆನಪುಗಳ ಮರೆಯೊದಾದ್ರೂ ಹೇಗೆ ಹೇಳು ??? ತುಂತುರು ಹನಿಯಂತೆ ಶುರುವಾಗುವ ನಿನ್ನ ಈ ನೆನಪುಗಳ ಹಾವಳಿ ,ಗುಡುಗು ಸಿಡಿಲ ಮಳೆಯಂತೆ ನನ್ನ ಹೃದಯದಲ್ಲಿ ಮೂಡುತ್ತಿವೆ .ಕಣ್ಣು ಒದ್ದೆಯಾಗಿ ಕಣ್ಣೀರು ಹನಿ ಹನಿಯಾಗಿ ಹೊರಬರುತ್ತೆ ನೀನಿಲ್ಲ ಎಂದಾಕ್ಷಣ .

ಯಾಕೋ ಗೊತ್ತಿಲ್ಲ ಕಣೆ ಪ್ರತಿ ಭಾರಿ ಮಳೆ ಬಂದಾಗಲು ನನ್ನ ಕಣ್ಣಲ್ಲಿ ನೀನು ಇರ್ತೀಯಾ .ನಿನ್ನ ನೆನಪುಗಳು ಕಣ್ಣೀರಾಗಿ ನನಗೇ ಗೊತ್ತಿಲ್ಲದಂತೆ ಮಳೆಯ ಹನಿಯಲ್ಲಿ ಭೂಮಿಯನ್ನ ಸ್ಪರ್ಶಿಸುತ್ತೆ .  ಹೇಳಾಗಾದ ಮಾತಾಗಿ ಉಳಿದಿರುವೆ ನೀನು .
ಮೊದಲ ಭಾರೀ ನಿನ್ನ ಮಳೆಯಲ್ಲಿ ಕಂಡ ಆ ದಿನ ಇಂದಿಗೂ ನನ್ನೆದೆಯಲ್ಲಿ ಹಚ್ಚಾಗಿ ಉಳಿದಿದೆ . ಅಂದು ಪುಟ್ಟ ಪುಟ್ಟ ಮೊಲದಂತೆ ಅತ್ತಿತ್ತ ಹೆಜ್ಜೆಯನಿಕ್ಕುತ್ತ ಸುತ್ತಾಡಿತ್ತಿದ್ದ ನಿನ್ನ ನೋಡಿ ನಾನೆಲ್ಲೋ ಕಳೆದು ಹೋದೆ .ನಿನ್ನ ಕಣ್ಣ ನೋಡಿದಾಗಲಂತೂ ಮೈಯಲ್ಲಿ ರೋಮಾಂಚನ ,ಮಿಂಚಿನ ಸಂಚಲನ ,ಹೇಳಲಾಗದ ಅನುಭವವದು . ಮಳೆ ಎಂದರೆ ನೆನಪಾಗುವ ಆ ದಿನ ನೀನೊಂದಿಗೆ ಕಳೆದಂತಿತ್ತು .ನಿನ್ನ ನೆನೆಯದ ದಿನವಿಲ್ಲ ,ನೆನಪುಗಳ ನೀಡದ ಮಳೆ ಇಲ್ಲ . ಕನಸುಗಳ ಕಾಣದ ದಿನವಿಲ್ಲ .

ಆ ಭೂಮಿಗಾದ್ರೂ ಸೂರ್ಯ ಇದ್ದಾನೆ ಒಣಗಿಸಿ ಮಳೆಯ ಕುರುಹು ಇಲ್ಲದ ಹಾಗೆ ಮಾಡಲಿಕ್ಕೆ ಆದ್ರೆ ನನ್ನ ಹೃದಯದ ಬೆಳಕಿನ ಸೂರ್ಯನಂತಿದ್ದ ನಿನ್ನ ನಗು ,ನಿನ್ನ ಮುಖ ಒಟ್ಟಿನಲ್ಲಿ ಹೇಳೋದಾದ್ರೆ ನೀನು ಈಗ ಇಲ್ಲ . ಈಗ ಯಾರಿದ್ದಾರೆ ನಂಗೆ ? ಇನ್ನೂ ಈ ಸುರಿಯುವ ಮಳೆಯಲ್ಲಿ ಬರುವ ನಿನ್ನ ನೆನಪುಗಳನ್ನ ಮರೆಯೊದಾದ್ರೂ ಹೇಗೆ ಕಣೇ? ಮತ್ತೆ ಮಳೆ ಹಾಗೆ ಬರ್ತೀಯ ನನ್ನ ಜೀವನಕ್ಕೆ ? ಬರಿಯ ನೆನಪನ್ನ ನೀಡೋದಕ್ಕೆ ಅಲ್ಲ ಗೆಳತಿ .ನನ್ನೊಡನೆ ಕೊನೆಯವರೆಗೂ ಇರಲಿಕ್ಕೆ . ನೀನಿಲ್ಲದ ಈ ಬದುಕು ಬರಡಾಗಿದೆ, ನಿನ್ನ ಪ್ರೀತಿಯನ್ನ ಸುರಿಸಿ ಅದನ್ನು ಮತ್ತೆ ಚಿಗುರಿಸ್ತಿಯಾ ????
ಒಬ್ಬಂಟಿ ನಾನಲ್ಲ..
ಆ ಆಸೆಯೂ ನನಗಿಲ್ಲ..
ನೀ ಬಿಟ್ಟು ಹೋದರು ..
ನನಗೆ ಚಿಂತೆ ಇಲ್ಲ ..
ಕಾರಣ
ನನ್ನ ಒಲವಿನ ಪ್ರೀತಿಗೆ ಸಾವಿಲ್ಲ
ನಿನ್ನ ನೆನೆಯದ ಕಣವಿಲ್ಲ 
ನಿನ್ನೊಂದಿಗಿನ ನೆನಪುಗಳೇ ಸಾಕಲ್ವಾ ??
ಮರಳಿ ಬರುವೆಯಾ ಗೆಳತಿ 
ಪ್ರೀತಿಯ ಅರಮನೆಗೆ ??
-ನಿನ್ನವ ಮನು 


Monday 8 December 2014

ಕವನ-26


ನಿನ್ನ ಆಗಮನಕ್ಕಾಗಿ..!!

ಕನಸ್ಸಲ್ಲಿ ಕಂಡ ಆ ಕ್ಷಣಗಳು
ಆಸ್ಪಷ್ಟವಾಗಿವೆ ಇಂದೇಕೋ.
ಕತ್ತಲಲ್ಲಿ ಕನವರಿಸಿ,ನಿನಗಾಗಿ ಹಪಹಪಿಸಿ
ನನ್ನ ಮನಸ್ಸು ಒಂಥರಾ ಮರು ಭೂಮಿಯಾಗಿದೆ
ನಿನಗಾಗಿ ಬರೆದ ಕವನಗಳ 
ಪುಟಗಳು ಇಂದೇಕೋ ಖಾಲಿ ಖಾಲಿ

ನೀ ಬರುವ ದಾರಿಯ ಕಂಡು ನಿನ್ನ  ಕಾಣದೆ
ಕಣ್ಣ ಹನಿಗಳು ತುಂಬಿ ಸ್ಪರ್ಧಿಸಿದಂತಾಗಿವೆ 
ನಿನ್ನ ನಗುವ ನೆನೆದು ನಾನಳುವೆ 
ನೀನಿರದ ಕ್ಷಣಗಳು ಬಿಡದೆ ಕಾಡುತಿವೆ 
ನನ್ನ ಎದೆಯ ಅಲೆಗಳು ಬಂದು ಇಣುಕಿವೆ
ನೀ ಆಗಮನದ ಹರ್ಷವ ನೋಡಲು
ನೂರಾರು ಕನಸುಗಳ ಹೊತ್ತು 
ನಿನ್ನ ನೆನಪಲ್ಲಿ ಕಾದಿರುವೆನು ನಿನಗಾಗಿ
                                                       
                                                                   -M@nu




Sunday 7 December 2014

ಕವನ-25



ಬಿಳಿಯ ಹಾಳೆಯ ಮೇಲಿನ ಬರಹಗಳು
ನಿನ್ನ ಮುದ್ದಾದ ಮಾತುಗಳು
ಹುಣ್ಣಿಮೆಯ ಬೆಳದಿಂಗಳ ಚಂದ್ರನು
ನಿನ್ನ ಮುದ್ದಾದ ನಗುವು
ಹೂವಿನ ಮೇಲಿನ ಮಂಜಿನ ಹನಿಯೂ 
ನಿನ್ನ ಮುಖದಲ್ಲಿ ಮೂಡುವ ನಾಚಿಕೆಯು
ಮುಗಿಲಲ್ಲಿ ಮೂಡುವ ಮೌನವೂ
ನಿನಗೇ ಹೇಳಲಾಗದ ಪ್ರೀತಿಯು
ನಾಳೆಯ ಸೊಗಸ ಚಿತ್ರ ಬಿಡಿಸಲಾಗುತ್ತಿಲ್ಲ
ನಿನ್ನೆಯ ನೆನಪು ,ಮರೆತು ಗೀಚಲು ಸಾಧ್ಯವಿಲ್ಲ
ನನ್ನ ಪ್ರೀತಿಯು ನಾಲಿಗೆಗೆ ತಿಳಿಯದು
ನನ್ನ ಹೃದಯಕೆ ಮಾತು ಬರದು.
                                         -m@nu