ಪ್ರೇಮದ ಓಲೆ..!!
ಪ್ರೀತಿಯ ಹುಡುಗಿಗೆ,
ಎಲ್ಲಿಂದ ಶುರು ಮಾಡಲಿ ನನ್ನ ಪ್ರೀತಿಯ ಓಲೆಯನ್ನ ಗೆಳತಿ,
ಪ್ರೀತಿ ಪ್ರೇಮ , ಒಲವು ಮೊದಲಾದ ಶಬ್ದಕ್ಕೆ ಕೊಣೆಯೆಂಬುದೇ ಇಲ್ಲ , ಅದು ನಿತ್ಯ ನೂತನ ,ಚಿರಾಯು.
ರಜೆ ಮುಗಿದು ಕಾಲೇಜ್ ಪ್ರಾರಂಭವಾಗಲು ಇನ್ನೂ ಕೇವಲ 10 ದಿನ ಬಾಕಿ ಇದೆ, ನಿನ್ನ ಯಾವಾಗ ನೋಡಿತ್ತೀನೋ ಎಂದು ಮನವು ಹಂಬಲಿಸುತ್ತಿದೆ . ನಿನ್ನ ನೆನಪಿಗೆ ಮಿತಿಯೇ ಇಲ್ಲ , ನಿನ್ನ ನೆನಪಲ್ಲೇ ನಿನಗೊಂದು ಪತ್ರ ಬರೆಯಲು ಶುರು ಮಾಡಿದೆ , ಆದರೆ ಖಾಲಿಯ ಹಾಳೆಯ ಮೇಲೆ ಗೀಚಲು ಮನಸ್ಸಿನ ಮಾತೇಕೊ ಮೌನವಾಗಿ ಬಿಟ್ಟಿದೆ .
ನಿನಗೇ ಗೊತ್ತ ಜೂನ್ 1ಕ್ಕೆ ನಮ್ಮ ಪ್ರೀತಿಗೆ ಭರ್ತಿ 2 ವರ್ಷ , ನಿನ್ನ ಮೊದಲ ಭಾರೀ ಕಂಡಾಗ ಯಾಕೆ ನಿನ್ನ ಪ್ರೀತಿಸಲು ಆರಂಭಿಸಿದೆ ಎನ್ನುವುದೇ ಇಂದಿಗೂ ನಿಗೂಢ ಹಾಗೂ ಅಷ್ಟೇ ವಾಸ್ತವ . ಮೊದಲು ಕೇವಲ ಗೆಳತಿಯಾಗಿದ್ದ ನೀನು ಈಗ ನನ್ನ ಪಾಲಿಗೆ ಸರ್ವಸ್ವ .
ಈ 2 ವರ್ಷದ ಸವಿ ದಿನಗಳಿಗೆ ಹೆಸರಿಡೋ ಆಸೆ ಆಗ್ತಿದೆ .ಈ ಓಲೆಯೂ ನಿನಗೇ ತಲುಪುತ್ತೋ ಇಲ್ಲವೋ ತಿಳಿದಿಲ್ಲ , ಆದರೆ ಈ 2 ವರ್ಷದ ಸವಿ ನೆನಪಿಗೆ ಒಂದು ಹೆಸರನ್ನು ಹಿಡಲು ಬರ್ತೀಯಾ ಅಲ್ವಾ?.
"ನಾ ನಿನ್ನ ಕನಸಿನ ಚಂದಾದಾರನು
ಚಂದಾ ಬಾಕಿ ನೀಡಲು ಬಂದೆ ಬರುವೆನು
ನಾ ನೇರ ಹೃದಯದ ವರದಿಗಾರನೂ
ನಿನ್ನ ಕಂಡ ಕ್ಷಣದಲ್ಲೇ ಮಾತೆ ಮರೆವೆನು"
ಪ್ರತಿ ಹೃದಯ ಬಡಿತದಲ್ಲೂ , ಉಸಿರಲೂ ಆವರಿಸಿತೊಡಗಿ ಇಂದು ನಾನು ನಿನ್ನ ಪ್ರೀತಿಯಲ್ಲಿ ಮಾನಸಿಕ ರೋಗಿಯಾಗಿದ್ದೇನೆ .
ಏಕೋ ನಿನ್ನಲ್ಲೇ ಐಕ್ಯವಾಗಬೇಕೆಂಬ ಅತೀವ ಹಂಬಲ , ಅಂದು ನಿನ್ನ ಧ್ವನಿಯಿಂದ ಬಂದ ಮಮತೆಯ ನಾದ ಇಂದಿಗೂ ನನ್ನೆದೆಯಲ್ಲೇ ಝೇಂಕರಿಸುತ್ತಿವೆ ಇದೆ . ಅದಕ್ಕೆ ಈ 2 ವರ್ಷದ ಸವಿನೆನಪೆ ಸಾಕ್ಷಿ .
ನೂರು ವರುಷವಾದರೂ , ಯುಗ ಯುಗ ಕಳೆದರೂ ನಾ ನಿನ್ನ ಮರೆಯಲಾರೆ .ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ , ಪ್ರೇಮ ರಾಗ ಹಾಡು ಬಾ ಗೆಳತಿ ? ಬರ್ತೀಯಾ ಅಲ್ವಾ?
ಇಂತಿ ನಿನ್ನ ಗೆಳೆಯ -
ಮನು
No comments:
Post a Comment