Friday 20 November 2015

ಕವನ -55

ನವ್ಯ ನವಿಲೇ ..!


ಎಲ್ಲಿಂದಲೋ ತೂರಿ ಬಂದ ತಂಗಾಳಿ  ಪರಿ
ಹೆಕ್ಕಿ ತಂದಿತು ನಿನ್ನ ನೆನಪಿಸುವ ನವಿಲು ಗರಿ

ಅತ್ತಿಂದಿತ್ತ ಸಂಚರಿಸುವ ನವಿಲಿಗೆ ರೆಕ್ಕೆಯೇ ಕಾವಲು
ತಂಗಾಳಿಯಲ್ಲಿ ನಲಿದಾಡುವ ನಲ್ಲೆಗೆ ಚಂದಿರನೇ ಕಾವಲು
ಆ ಕೃಷ್ಣವೇಣಿಗೆ ಅಷ್ಟಗಲದ ಕಣ್ಣು ನೀಲಿ,  ಅದನ್ನಪ್ಪಿದ ಕಪ್ಪು
 ಒರೆ ಕಣ್ಣ ನೋಟದ ಸುಂದರಿ ಕಣ್ಣಿನ ಅಂಚಲ್ಲಿ ಕಾಡಿಗೆಯ ಕಪ್ಪು

ಬೀಸುತ್ತಿದ್ದ ಗಾಳಿಗೆ ಮೈ ಕೊಡವಿ ಕುಣಿಯುತ್ತಿದ ನಾಟ್ಯ ಮಯೂರಿ
ಪಿಳಿ ಪಿಳಿ ಕಣ್ಣ ನಲ್ಲೇ,  ಎದೆಯೊಳಗೆ ಸಣ್ಣ ನಗರಿ
ಕುಣಿಯುತಿವೆ ನವಿಲುಗಳು ಹೂದೋಟದ ಅಂಗಳದಿ 
ನೆಡೆಯುತ್ತಿಹಳು ನಲ್ಲೇ ನನ್ನ ಹೃದಯ ಮಂದಿರದಲಿ

ಮರಳುಗಾಡಲ್ಲಿ ನೆರಳು ದೊರೆತಂತೆ
ಹೇ ನವಿಲೇ ನಿನ್ನ ಶೃಂಗಾರ
ಇರುಳ ಕತ್ತಲಲಿ ಬೆಳಕು ಹರಿದಂತೆ
ಹೇ ಗೆಳತಿಯೇ ನೀನೇ ನನ್ನ ಬಂಗಾರ
ನವಿಲೇ ನಿನ್ನ ಹೋಲಿಕೆಗೆ ಯಾರಿಲ್ಲ ಸಮ
ನಲ್ಲೇ ನೀನೇ ನನ್ನ ಬಾಳಿನ ಸೌಗಂಧದ ಕುಸುಮ
           -ಮನು

Monday 9 November 2015

ಕವನ-54

ಬದುಕು..!

ಸುಖದ ದಾರಿಯನ್ನ ಅರಸಿ ಸಾಗುತಿದೆ ಪಯಣ 
ಸಮುದ್ರದ  ಅಲೆಯಂತೆ ಬದುಕಿನ ಪಯಣ 
ದಾರಿಯು ಸಿಕ್ಕಿತೆನ್ನಲು  ಪುನಃ ತಪ್ಪಿದ೦ತೆ
ಬೆಳಕು ಹರಿದರೂ ಕತ್ತಲು ಕವಿದಿರುವ೦ತೆ 

ಬದುಕು ಏಳು ಬೀಳಿನ ಆಟ 
ಎಲ್ಲಿಯ ತನಕ ಈ ಓಟ? 
 ನಕ್ಕರು ನಕ್ಕ ಹಾಗಿಲ್ಲ 
ಅತ್ತರೂ ಅತ್ತ ಹಾಗಿಲ್ಲ 

ಬದುಕಿನ ರೆಂಬೆ ಹೇರಿ ಕುಳಿತಾಗ 
ಇನ್ನೊಂದು ತನ್ನ ಹೇರು ಎಂದಂತೆ 
ಏರಿ ತುದಿಯನು ಮುಟ್ಟಿದಾಗ, 
ಮರವೇ ಕುಸಿದು ನೆಲವಪ್ಪಿದ೦ತೆ 
ಇಲ್ಲಿ ಎಲ್ಲ ಹಾರಲೀಚ್ಚಿಸುತಿಹರು  
ತಮ್ಮ ಗುರಿಯ ಮುಟ್ಟಬೇಕೆಂದು ಇರುವರು
         -ಮನು


ಕವನ-53

ಮೌನ..!

ನಿನ್ನ ಆಸೆಯ
 ಕಂಗಳಿಗೆ ಮುತ್ತಿಡುವ 
ತವಕದಿ ಮರೆತೇ ನಾ
 ನಿನ್ನ ಕೆಂದುಟಿಯನ್ನ  
 ಹುಸಿ ಕೋಪದಿ ಅವೂ
 ಬೀರುತಿವೆ  ನನ್ನೆಡೆಗೆ
ಕೊಂಕು ನುಡಿಯನ್ನ

ನಿನ್ನ ಒಲವಿನ ಸ್ವರ 
ಮೂಡದೆ ನನ್ನಿ ಹೃದಯವು
 ಮರೆತಂತಿದೆ ತಾಳ ಶ್ರತಿಯನ್ನ
ಶಪಿಸುತಿದೆ ಮನ
 ನಲ್ಲೇ ನಿನ್ನ ಹೃದಯದ 
ಅಶ್ರಯವನ್ನ ಅರಸಿ 
ಲೋಕವ ಮರೆಯಲು ಇನ್ನ

ಗರಿಗೆದರಿವೆ ನೆನಪುಗಳು 
ಎನ್ನ  ಮನದ ಕತ್ತಲೆಯ 
ತೊರೆದು ಹೊನ್ನ ನೇಸರನ 
ಕಿರಣದೊಳಪಿನಲ್ಲಿ ನಲಿದು
 ನಿನ್ನ ಮುಂಗುರುಳ ಸರಿಸಿ
ಚುಂಬಿಸಲೇ ಆಸೆಯಿಂದ
ನಲಿವ ನಿನ್ನ ಕಂಗಳನ್ನ
            -ಮನು


                                                                 

Monday 2 November 2015

ಕವನ-52

 ಬಯಕೆ..!

ಹೇಳಬೇಕೆನಿಸಿದೆ ನೂರಾರು ಬಯಕೆಯ ಮಾತು
ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು ||
ನಿನ್ನ ಜೊತೆಯಲಿ ಬರುವೆನು ನಾನು
ಕಣ್ಣ ಸನ್ನೆಯಲಿ ಕರೆಯ ಬಾರದೆ ನೀನು
ನಿನ್ನುಸಿರಿಗೆ ಉಸಿರಾಗಿರುವೆ ನಾನು 
ಏಳೇ  ಜನುಮ ಸಾಕು ಏನೇನು ನಾನು.

ಹೇಳಬೇಕೆನಿಸಿದೆ ನೂರಾರು ಬಯಕೆಯ ಮಾತು
ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು ||
ರಂಗೇರಿದ ಮೊಗದೊಲ್ಲೊಂದು ಬಿರುಸಾದ ಹುಸಿಮುನಿಸು,
ನಲ್ಲೆ, ನೀನೀಗ ನೋಡಲೆಂತು ಸೊಗಸು 
ಮನಸಿನ ಸಾಗರದಲ್ಲಿ ಒಲವಿನ ಅಲೆ ಎಬ್ಬಿಸಿದೆ
ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ.

ಹೇಳಬೇಕೆನಿಸಿದೆ ನೂರಾರು ಬಯಕೆಯ ಮಾತು
ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು ||
ಚಂದ್ರನಿರದ ಬಾನಿನಲ್ಲಿ ಚುಕ್ಕಿ ರಾಜ್ಯವು ನನ್ನದು
ಚಂದ್ರನ ಹಾಗೆ ನಲಿವ ಮಂದಹಾಸ ನಿನ್ನದು
ಹಗಲು ರಾತ್ರಿಗಳು ಉರುಳಿದರೇನು
ಮಾಸಲು ಬಿಡೆನು ನಿನ್ನ ಮಂದಹಾಸವನ್ನು.
                                           -ಮನು