Sunday 18 January 2015

ಕವನ-31




ಉಸಿರಾಗಲೇ ..!!

ಕವಿ ಬರೆಯದ ಕವಿತೆಯು ನೀನು
ಆ ಕವಿತೆಯ ಪದಗಲಾಗಲೇನು
ಉತ್ತರವೇ ಸಿಗದಂತಹ ಪ್ರೆಶ್ನೆಯು ನೀನು
ಆ ಪ್ರಶ್ನೆಗೆ ಉತ್ತರವಾಗಿ ಉಳಿಯಲೇ ನಾನು

ಪರಿಮಳ ಬೀರುವ ಕುಸುಮವು ನೀನು
ಜೇನನು ಸವಿಯುವ ದುಂಬಿಯಾಗಲೇನು
ಬಾನ ಬೆಳದಿಂಗಳ ಚಂದ್ರನು ನೀನು
ಪಳ ಪಳ ಹೊಳೆಯುವ ಚುಕ್ಕಿಯಾಗಲೇನು

ಒಂಟಿ ದೋಣಿಯ ಪಯಣಿಗಳು ನೀನು
ದಡದಲ್ಲಿ ನಿಂತು ಕೈ ಚಾಚಲೇನು
ಶಿಲ್ಪಿ ಕೆತ್ತದ ಶಿಲೆಯು ನೀನು
ಆ ಶಿಲೆಗಳ ಕಲ್ಲಾಗಲೇನು

ಕಲ್ಪನೆಗೂ ನಿಲುಕದ ಕನಸ್ಸು ನೀನು
ಆ ಕನಸ್ಸಿನ ಕಲ್ಪನೆಯಾಗಲೇನು
ನನ್ನ ಬಾಳ ಬೆಳಕಿನ ಹಸಿರು ನೀನು
ಆ ಹಸಿರಿಗೆ ಉಸಿರಾಗಲೇ ನಾನು

                                       -ಮನು






Wednesday 14 January 2015

ಕವನ-30

ಪ್ರೀತಿಯ ಕಡಲಲ್ಲಿ..!!

ಚಂದ್ರನಂತೆ ನೀಡಿದೆ ನೀ ಬೆಳದಿಂಗಳಂಥ ಪ್ರೀತಿ  
ಬೆಳದಿಂಗಳ ನೆರಳಲ್ಲಿ ನೀನ್ನ ನಾ ಮರೆವ ಭೀತಿ 
ನೀನ್ನ  ಮರೆವ ಮನ ಮಾಡುವ ಮುನ್ನವೇ
ನೀ ಬೆಳದಿಂಗಳಲ್ಲಿ ನೆನಪುಗಳ ಹಣತೆಯ ಹೊತ್ತು ಬರುವೆ

ಕನಸ್ಸಿನ ಕನ್ನಡಿಯ ಅಂಗಡಿಯ ತೆರೆದವಳು ನೀನು
ಮನಸ್ಸಿನ ಕನ್ನಡಿಯ ನುಚ್ಚುನೂರು ಮಾಡಿದವನು ನಾನು
ಈ ನಮ್ಮ ಸ್ನೇಹಕ್ಕೆ ,ಪ್ರೇಮದ ಮುನ್ನುಡಿಯ ಅಕ್ಷರವ ತಿದ್ದಿದವನು ನಾನು
ತಿರಸ್ಕಾರದ ತಿರುವುಗಳ ತಿದ್ದಿ ಮುನ್ನುಡಿಯ ಕುರುಹುಗಳ ಅಳಿಸಿದವಳು ನೀನು

ನಾ ಕಂಡ ಕನಸ್ಸುಗಳು ಕನವರಿಕೆಯಲ್ಲೇ ಮಾಯಾ
ಬೆಳದಿಂಗಳು ಮಾಯವಾಗಿ ಮೂಡಿದೆ ಹೃದಯದಲ್ಲಿ ಗಾಯ
ನಿನ್ನ ನನ್ನ ಪ್ರೀತಿಗೆ,ಸಾವೆ ಇಲ್ಲದ ನೆನಪುಗಳಿಗೆ ಕೊನೆ ಎಲ್ಲಿ?
ಪ್ರೀತಿ ಕಾಣೆಯಾದರು ,ನೆನಪುಗಳ ಹಾವಳಿಗೆ ಮಿತಿ ಎಲ್ಲಿ?
                                                                      
                                               -ಮನು



Sunday 11 January 2015

ಕವನ-29


ಬಯಕೆಯ ಬನದಲ್ಲಿ..!! 

ಹೇಳದೆ ಹೊರಟು ಹೋದೆಯಾ ಕಾರಣವೊಂದನ
ನಿನ್ನ ಕಣ್ಣ ಸೆಳೆತಕೆ ಸೋತು ಹೋದೆನು ಅಂದು
ನಿನ್ನ ಮನವ ಗೆಲ್ಲದೆಯೇ ಸೋತು ಸೊರಗಿರುವೆ ಇಂದು

ಹಗಲಿರುಳು ನಿನ್ನದೇ ನೆನಪು ಕಾಡಿತು
ಎಲ್ಲೆಂದರಲ್ಲಿ ಕಣ್ಣು ನಿನ್ನನೇ ಅರಸಿತು
ವಸಂತಕ್ಕೆ ಹಾತೊರೆಯುವ ಹಕ್ಕಿಯಂತೆ
ಸೂರ್ಯನನ್ನೇ ಕಾದಿರುವ ಸೂರ್ಯಕಾಂತಿಯಂತೆ

ಮನವ ಬಿಚ್ಚಿ ಹೇಳಲಾರೆ
ಮನಸ್ಸಿನೊಳಗೆ ಬಚ್ಚಿಡಲಾರೆ
ಎದಿರು ನೋಡುತ್ತಿರುವೆನು ಆ ಸಮಯವ
ನಿನ್ನ ಆಗಮನಕ್ಕಾಗಿ ಇಟ್ಟ ಆ ದಾರಿ ದೀಪವ
                                                  -ಮನು