Friday 28 August 2015

ಕವನ-46

ರಕ್ಷಾ ಬಂಧನ..!!


ನನ್ನಗೆ ಅದೆಲಿಲ್ಲದ ಆನಂದ 
ನನ್ನ ಮೇಲೆ ನಿನಗೆ ಅದೆಷ್ಟು ಅಕ್ಕರೆ ಅಣ್ಣ 
ಬಾಳ ಪುಟದ ನಡುವಲಿ ಈ ಭಾಂದವ್ಯ
ನಿನ್ನ ಅಕ್ಕರೆಯ ಸವಿಯ ಸ್ವಾದ ಅನನ್ಯ 

ಗೀಚಿದರು ಮುಗಿಯದ ಪ್ರೀತಿ ವಾತ್ಸಲ್ಯ ನಿನ್ನದು
ಲೋಕಕೆ ಸ್ನೇಹಮಯಿ ನನ್ನ ನಿನ್ನ ಭಾಂದವ್ಯ
ಏಳೆಂಟು ಸಾಲುಗಳಲ್ಲಿ ಮುಗಿಸಲು ಮನಸಿಲ್ಲ
ಅಣ್ಣಾ ನಿನ್ನ ಪ್ರೀತಿಯ ಚಿಲುಮೆಗೆ ಸಾಟಿ ಯಾರಿಲ್ಲ

ಈ ಸಾಲುಗಳು ಅಣ್ಣಾ ನಿನ್ನ ಪರವಾಗಿ
ಅಣ್ಣಾ ನಿನ್ನ ಯಶಸ್ಸಿಗೆ ಬೆಳಕಾಗಿ
ಅಣ್ಣಾ ನಿನ್ನ ಕಾಳಜಿಯ ಸಲುವಾಗಿ
ನಮ್ಮ ಈ ಬಂಧನದ ಗುರುತಾಗಿ 
                      -ಮನು


Thursday 13 August 2015

ಕವನ-45

ನಿನ್ನದೋ   ನನ್ನದೋ ..!!

ನಿನ್ನ ನಗುವಿನಿಂದ 
 ಹುಟ್ಟಿದ ಈ  
ಸ್ನೇಹ, 
ಹಿಂದಿನದೋ 
ಎಂದಿನದೋ 
ತಿಳಿದಿಲ್ಲ ಗೆಳತಿ..!

ನಿನ್ನ ನೆನಪಿನಿಂದ
ಹುಟ್ಟಿದ ಈ
ಕವನ,
ನಿನ್ನದೋ
ನನ್ನದೋ ..
ಗೊಂದಲವಿದೆ ಗೆಳತಿ ..!

ನಿನ್ನ ಒಲವಿನಿಂದ 
ಹುಟ್ಟಿದ ಈ  
ಪ್ರೀತಿ ,
ಈ  ಜನುಮದೋ 
ಏಳು ಜನುಮದೋ
ಸುಳಿವಿಲ್ಲ ಗೆಳತಿ ..!

-ಮನು





Tuesday 11 August 2015

ಕವನ-44

ನೀನೆಂದರೆ...!!

ನೀನೆಂದರೆ...
ಒಲವು, ಚೆಲುವು
ನಲಿವು.
ಬವಣೆ ಬದುಕಿಗೆ
ಭರವಸೆ !

ನೀನೆಂದರೆ...
ಕನಸು,ಹೊಂಗನಸು
ಮನಸ್ಸು
ನಿಷ್ಕಲ್ಮಶ,ನಿರ್ಮಲ
ನಿರುಪಮಾ !

ನೀನೆಂದರೆ...
ಕಲ್ಪನೆ, ಪರಿಕಲ್ಪನೆ
ಬದಲಾವಣೆ!
ನಾಳೆಯ ನಿರೀಕ್ಷೆ,
ಪ್ರತೀಕ್ಷೆ  !
            -ಮನು