Friday, 28 August 2015

ಕವನ-46

ರಕ್ಷಾ ಬಂಧನ..!!


ನನ್ನಗೆ ಅದೆಲಿಲ್ಲದ ಆನಂದ 
ನನ್ನ ಮೇಲೆ ನಿನಗೆ ಅದೆಷ್ಟು ಅಕ್ಕರೆ ಅಣ್ಣ 
ಬಾಳ ಪುಟದ ನಡುವಲಿ ಈ ಭಾಂದವ್ಯ
ನಿನ್ನ ಅಕ್ಕರೆಯ ಸವಿಯ ಸ್ವಾದ ಅನನ್ಯ 

ಗೀಚಿದರು ಮುಗಿಯದ ಪ್ರೀತಿ ವಾತ್ಸಲ್ಯ ನಿನ್ನದು
ಲೋಕಕೆ ಸ್ನೇಹಮಯಿ ನನ್ನ ನಿನ್ನ ಭಾಂದವ್ಯ
ಏಳೆಂಟು ಸಾಲುಗಳಲ್ಲಿ ಮುಗಿಸಲು ಮನಸಿಲ್ಲ
ಅಣ್ಣಾ ನಿನ್ನ ಪ್ರೀತಿಯ ಚಿಲುಮೆಗೆ ಸಾಟಿ ಯಾರಿಲ್ಲ

ಈ ಸಾಲುಗಳು ಅಣ್ಣಾ ನಿನ್ನ ಪರವಾಗಿ
ಅಣ್ಣಾ ನಿನ್ನ ಯಶಸ್ಸಿಗೆ ಬೆಳಕಾಗಿ
ಅಣ್ಣಾ ನಿನ್ನ ಕಾಳಜಿಯ ಸಲುವಾಗಿ
ನಮ್ಮ ಈ ಬಂಧನದ ಗುರುತಾಗಿ 
                      -ಮನು


No comments:

Post a Comment