Monday 27 July 2015

ಕವನ-43

ಜೊತೆ ಜೊತೆಯಲಿ ..!!



ಅವಳು ಹುಣ್ಣಿಮೆ ಬೆಳದಿಂಗಳ ಚಂದ್ರನಂತವಳು
ಅವನು ಮಿನುಗುವ ಚುಕ್ಕಿ ನಕ್ಷತ್ರದಂತವನು

ಇವನಿಗೆ ಅವಳ ಕಣ್ಣ ಸೆಳೆತವೂ
ಅವಳಿಗೆ ಅವನ ಹೃದಯ ಮಿಡಿತವೂ

ಇವಳಿಗೆ ಅವನ ಪ್ರೀತಿಯ ಹೊಂಬಿಸಿಲು
ಅವನಿಗೆ ಅವಳ ಚೆಲುವಿನ ಹೊಂಬೆಳಕು

ಅವನಿಗೆ ಅವಳ ನೆನಪಿನ ಹಾಡು
ಅವಳಿಗೆ ಅವನ ಸನಿಹದ ಜಾಡು

ಅವಳೊಡನೆ ಅವನ ಮೌನ ಮಾತಾಡಿತು
ಅವನೊಡನೆ ಅವಳ ಮನಸ್ಸು ಪಿಸುಗುಟ್ಟಿತು
                                          
                                                   -ಮನು


Friday 24 July 2015

ಸಂಕಲನ..!!

ಸಂಕಲನ..!!

ಬರೆಯಲೇನು?

ಹುಡುಗಾ
ನೀನಿರದ
ಜಗದಲ್ಲಿ
ಬದುಕಲು
ಕಾರಣವೇನಿದೆ
ನನಗೆ..
ನಿನ್ನುಸಿರ
ಗಾಳಿಯನ್ನಾದರೂ
ಬಿಟ್ಟು
ಹೋಗು
ಬದುಕಬೇಕಿದೆ
ಬದುಕ
ಮುಸ್ಸಂಜೆಯವರೆಗಾದರು
ಕೊನೆಗೆ...      
                                            
-ಪುನರ್ವಸು ವಸು

ನಟ್ಟ ನಡುರಾತ್ರಿಯಲಿ                                                      
ಕತ್ತಲ ಕೋಣೆಯಲ್ಲಿ
ಕುಳಿತು ಒಬ್ಬಂಟಿಯಾಗಿ
ಕಣ್ಣ ಕದಲಿಸುತ್ತಿರುವೆ
ಕೆನ್ನೆಯ  ಮೇಲೆ
ಕಂಬನಿಯು ಜಾರುತ್ತಿವೆ
ಯೋಚಿಸುತ್ತಿರುವೆ.....
ನನ್ನೆದೆಯೊಳಗಿನ  ಭಾವಕ್ಕೆ
ರೂಪವೊಂದ ಕೊಡುವುದಾದರೆ...
ಕಥೆ ಬರೆಯಲೇ, ಕವನ ಗೀಚಲೇ
ತಿಳಿಯದಾಗಿದೆ.
             -ಮೇಘ  

ಮಾತುಗಳ ಮಿಲನ
ಸ್ವರಗಳ ಸಮ್ಮಿಲನ
ಭಾವನೆಗಳ ಆಶಾ ಕಿರಣ
ಅದುವೇ ನನ್ನ ಒಲವಿನ ಆಮಂತ್ರಣ
ಮಾತು ಕಥೆಗೆ ಮುಖ್ಯ ಕಾರಣ
ಪ್ರೀತಿ ವಿಶ್ವಾಸದ ಸಂದೇಶದ ಹೊರಣ
ಸವಿ ನೆನಪಿನ ತಳಿರು ತೋರಣ
ಮರೆತರೂ ಮರೆಯದ ಭಾಂದವ್ಯದ
 ಒಲವಿನ ಕಿರಣ ಅದುವೇ
ನಮ್ಮ ನಿಮ್ಮ ಸ್ನೇಹದ
ಭವ್ಯವಾದ ಪಯಣ

                -ಸುನೀಲ ಡೊಳ್ಳಿನ


ಕಾಣದ ಕರೆಯೊಂದು
ಸರಿಸಿತು ತೆರೆಯ ಮರೆಗೆ...
ಮರೆಯದೆ ಉಳಿಸಿ 
ಸುಮಧುರ ನೆನಪುಗಳ
ನಾ ಬರುವವರಗೆ
ಬಾನಲ್ಲಿ
ಬೆಳದಿಂಗಳಾಗಿ ಅಲ್ಲಿಯವರೆಗೊ
ಎತ್ತಿಟ್ಟುಕೊಂಡಿರು

ಎನ್ನ ನೆನಪುಗಳ ಅಲ್ಲಿಯವರೆಗೊ. .!!
                        
                           -ಟಿ ನ್ ಜಗ
                                        
ನಿನ್ನ
ಮೇಲೆ
ಕವಿತೆ
ಗೀಚಿದ್ದು
ತಪೇನು
ಅಲ್ಲೆವಲ್ಲ...?

ಹಾಳೆಯ
ಮೇಲಾದರೂ
ದೂರವಾದ
ಎಷ್ಟೋ
ಶಬ್ದಗಳು
ಸೇರಿ
ಒಂದಾಗುತಿವೆ....
          -ಸಂತೋಷ್ ಎಸ್ ಕೆ

ಕಲ್ಪನೆಯ ಕಡಲು ಬತ್ತಿದೆ .
ಭಾವನೆಗಳ ಬರೆಯಲು ಸ್ಥಳವಿಲ್ಲ
ವಾಸ್ತವತೆಯ ಒಡಲು ತುಂಬಿದೆ.
ಕಾರಣಗಳ ತಿಳಿಯಲು ಮನಸಿಲ್ಲ.
ಕತ್ತಲೆಯಲ್ಲಿ ಕನಸ್ಸುಗಳು ಹುಟ್ಟಿದೆ
ಹಿಂಬಾಲಿಸುವ ಮಾರ್ಗವ ಕಂಡಿಲ್ಲ
ನಗು ಮೊಗದ ಹೊಳಪು ಮಾಸಿದೆ
ಬಣ್ಣಗಳನ್ನು ಹಚ್ಚಲು ತಿಳಿದಿಲ್ಲ
ಕರೆದಂಥ ನಿನ್ನ ಹೆಸರ ಸುಳಿವಿದೆ
ಮತ್ತೊಮ್ಮೆ ಕರೆಯಲು ನೆನಪಿಲ್ಲ.    
                        -ನಿನ್ನವ ಮನು 





   

Saturday 18 July 2015

ಕವನ-42

ಕಲ್ಪನೆ..!!

ಅಲೆಗಳೇ ಇಲ್ಲದ ಕಡಲನು ಕಂಡೆ
ಸಂಗೀತ ಸ್ವರದಲು ಮೌನವ ಕಂಡೆ
ನಗುವ ಮೊಗದಲು ಆಳುವನು ಕಂಡೆ
ನಗುವ ಚೆಲ್ಲದ ಬೆಳದಿಂಗಳ ಕಂಡೆ
ಚಂದಿರನಿಲ್ಲದ ಹುಣ್ಣಿಮೆಯ ಕಂಡೆ
ಬೀಸೋ ಗಾಳಿಯಲು ನಡುಕವ ಕಂಡೆ
ಕತ್ತಲೆ ಇಲ್ಲದ ಇರುಳನು ಕಂಡೆ
ಹಸಿರೇ ಇಲ್ಲದ ಧರಣಿಯ ಕಂಡೆ
ಬಣ್ಣಗಳೇ ಇಲ್ಲದ ಕಾಮನಬಿಲ್ಲನು ಕಂಡೆ
ಭಾವವೇ ಇಲ್ಲದ ಮನವ ಕಂಡೆ
ಕಂಬನಿಗೆ ಮಿಡಿಯದ ಹೃದಯವ ಕಂಡೆ
ತಾಯಿಯ ಮಮತೆಯಲು ಭೇದವ ಕಂಡೆ
ಮೋಸದ ನೂರು ಮುಖವಾಡ ಕಂಡೆ
ಸ್ನೇಹದ ಹೆಸರಲಿ ಸುಳ್ಳನು ಕಂಡೆ
ನೀನೇ ಇಲ್ಲದ  ನನ್ನನ್ನು ನಾ ಕಂಡೆ
          -ಮನು









Sunday 12 July 2015

ಕವನ-41

ಇನಿಯ..!!

ಹೇಳಬೇಕೆನಿಸಿದೆ ಇನಿಯನೆ ಸವಿಯಾದ ಮಾತೊಂದ
ಕೇಳಲೊಂದು ಕ್ಷಣ ಕಿವಿಗೊಡುವೆಯಾ  ನೀನು
ಕಪ್ಪು ಬಿಳುಪಿನ ಕನಸಿನಲ್ಲಿ ನಿನ್ನ ನೆರಳಿನಾಟ 
ಬಣ್ಣಗಳ ಬದುಕಿನಲ್ಲಿ ನಿನ್ನ ನೆನಪಿನ ನೋಟ

ಹೇಳಬೇಕೆನಿಸಿದೆ  ಗೆಳೆಯ ನನ್ನ ಮನಸಿನ ಮಾತೊಂದ
ಬಳಿಬರುವೆ ಬಳಿಗೆ ಸೆಳೆವೆ, ಪ್ರೀತಿಸಲು ನೀನು
ಸದ್ದು ಮಾಡದೆಯೇ ನನ್ನೆದೆಯ ಅಂಗಳದಲ್ಲಿ
ಸುಳಿದಾಡಿ ಪ್ರೀತಿಯ ಸಾರಿದವನು ನೀನು

ಇನಿಯನೆ ಮಗುವಂತೆ ನಿನ್ನ . ಮುದ್ದಾಡ ಬೇಕೆನಿಸಿದೆ
ತುಸು ಮುನಿಸಿನ ಜಗಳವಾಡಿ ನಿನ್ನ ರೇಗಿಸಬೇಕಿನಿಸಿದೆ 
ನೀ ಕೋಪದಲ್ಲಿದಾಗ ಮುದ್ದಾಡಿ ರಮಿಸಬೇಕೆನಿಸಿದೆ 
ತುಸು ದೂರ ಸುಮ್ಮನೆ ನಿನ್ನೊಡನೆ ನೆಡೆಯಬೇಕೆನಿಸಿದೆ 

ನಿನ್ನೆದೆಗೆ ಒರಗಿ ನನ್ನೆದೆಯ ಬಡಿತವ ಕೇಳಬೇಕೆನಿಸಿದೆ 
ನಿನ್ನ ಮಡಿಲಲಿ ಮಲಗಿ ನಿನ್ನ ಕಣ್ಣಲ್ಲಿ ನನ್ನ ಕಾಣಬೇಕೆನಿಸಿದೆ
ನಿನ್ನ ತೊಳ ಬಂದಿಯಲ್ಲಿ ನಾ ಕೊನೆಯವರೆಗೂ ಬಂದಿಯಾಗಬೇಕೆನಿಸಿದೆ 
ನಿನ್ನೊಡನೆ ಸಮಯವ ಕಳೆವಾಗ ಜಗವ ಮರೆಯಬೇಕೆನಿಸಿದೆ 

ನಿನ್ನ ನೋಟವನ್ನು ಕಂಡು ಬೆಳದಿಂಗಳೆ ನಾಚಿತು
ನಿನ್ನ ಕಣ್ಣ ಸನ್ನೆಯಲ್ಲಿ ನನ್ನ ಮನಸ್ಸು ನಾಚಿದೆ
ನಿನ್ನ ಕೊನೆಯವರೆಗೂ ನಾ ಇರುವೆ ಎಂದು ತಿಳಿದಿಲ್ಲ 
ನೀ ಕೊಟ್ಟ ಮಮತೆಗೆ , ಪ್ರೀತಿಗೆ ಕೊನೆ ಇಲ್ಲ 

ಯಾರಿಗೂ ಕಾಣದಂತೆ ಹೃದಯದಿ ನಿನ್ನ . ಬಚ್ಚಿಟ್ಟಿರುವೆ 
ಮನಸೆಂಬ ಮಂಟಪದಿ ಹೂಗಳ ನೆಟ್ಟ ಹೂಗಾರನು ನೀನು
ಕಗ್ಗತ್ತಲ ಜೀವನದಲ್ಲಿ ದೀಪ ಹಚ್ಚಿ ಕತ್ತಲ ಕಳೆದು
ನನ್ನೊಡನೆ ಬಾಳನು ಬೆಳಗಿಸುವೆಯ ನೀನು ??



Monday 6 July 2015

ಕವನ-40

ಚುಕ್ಕಿಗಳ ಚಿತ್ತಾರದ ನಡುವೆ..!!

ಬಾ ಗೆಳತಿ ಮೋಡದ ಮರೆಯಲ್ಲೊಂದು ಮುದ್ದಾದ ಗೂಡು  ಕಟ್ಟಿ 
 ಚಂದ್ರನ ಮೇಲೆ ಕುಳಿತು ತಾರೆಗಳ ಎಣಿಸೋಣ 

ಹಾಲು ಬೆಳದಿಂಗಳ ರಾತ್ರಿಯಲಿ ನಮ್ಮದೇ ಕನಸಿಗೆ 
ಜೊತೆಗೂಡಿ ಮುದ್ದಾದ ಹೆಸರನ್ನು ಹಿಡೋಣ 

ನನ್ನೆದೆಯ ಲೋಕದಲಿ ಕನಸ್ಸಿನೊಂದಿಗೆ ಸೇರಿ
ಪ್ರೀತಿಯ ಪಯಣವ ನೆಡೆಸೋಣ

ನನ್ನ ಮನಸಿನ ಕನ್ನಡಿಯಲಿ ಅಚ್ಚಳಿಯದೆ ಉಳಿದಿರುವ
ನಿನ್ನ ಬಿಂಬವ ಬಿಡಿಸೋಣ

ಹೇ ನನ್ನ ಮೌನರಾಗವೇ ಬೇಗ ಬಂದು ಬಿಡು
ನಮ್ಮ ಪ್ರೀತಿಯ ರಾಗವ ಕೇಳೋಣ 

              -ಮನು