ಏನೆಂದು ಬಣ್ಣಿಸಲಿ ಗೆಳತಿ ಆ ನಿನ್ನ ಅಂದವ
ಏನೆಂದು ವರ್ಣಿಸಲಿ ಗೆಳತಿ ಆ ನಿನ್ನ ಚೆಂದವ
ಕಣ್ಣುಗಳಿಗೆ ಕಾಣದೆ ನನ್ನ ಕನಸ್ಸಲ್ಲಿ ಕಾಡುವ ಮಾಯೆಯ?
ಪ್ರತಿಕ್ಷಣವೂ ಹೃದಯದಲ್ಲಿ ಮೂಡುವ ಪ್ರೀತಿ ಛಾಯೆಯ?
ನನ್ನ ಮೊಗದಲ್ಲಿ ಮೂಡುವ ನಗುವೇ
ಯಾಕೆ ಕ್ಷಣಮಾತ್ರದಲ್ಲಿ ಮಿಂದು ಮರೆಯಾಗುವೆ
ನೀ ನನ್ನ ಸುಂದರವಾದ ಸ್ವಪ್ನವೇ
ಬರುವೆ ಯಾಕೆ ನಾ ನಿದ್ರಿಸುವ ಸಮಯವೇ
ಸುಂದರಿಯು ಕೂರೂಪಿಯೋ ಕಂಡಿಲ್ಲ ನಾನಿಂದೂ
ಕಾಯುತಿರುವುದು ಮನವು ನಿನಗಾಗಿ ಎಂದೆಂದೂ
ಸುಂದರಿಯು ಕೂರೂಪಿಯೋ ಕಂಡಿಲ್ಲ ನಾನಿಂದೂ
ಕಾಯುತಿರುವುದು ಮನವು ನಿನಗಾಗಿ ಎಂದೆಂದೂ
No comments:
Post a Comment