ಎಲೆಲ್ಲಿ ಹುಡುಕಲಿ ಗೆಳತಿ ನಿನ್ನ ಎಲ್ಲಿರುವೆ ಎಂದು ?
ಯಾರ್ಯಾರ ಕೇಳಲಿ ಗೆಳತಿ ನೀ ಯಾರಿರಬಹುದೆಂದು ?
ದುಂಬಿಯ ಕೇಳಿದೆನನ್ನವಳು ಯಾರೆಂದು ?
ದುಂಬಿಯೂ ಹೇಳಿತು ನಿನ್ನವಳು ಹೂವೆಂದು!
ಮೋಡವ ಕೇಳಿದೆ ನೀನು ಎಲ್ಲಿರುವೆ ಎಂದು ?
ಮೋಡವೂ ಗುಡುಗಿತು ನೀನು ವರ್ಷವಿರಬಹುದೆಂದು!
ಪಾರಿಜಾತ ಮರವ ಪ್ರಶ್ನಿಸಿದೆ ನನ್ನವಳು ಯಾರೆಂದು?
ಪಾರಿಜಾತವು ಉತ್ತರಿಸಿತು ನೀ ಶ್ರೀಗಂಧವಿರಬಹುದೆಂದು!
ಕೋಗಿಲೆಯ ಕೇಳಿದೆ ನನ್ನವಳು ಹೇಗಿರಬಹುದೆಂದು?
ಕೋಗಿಲೆ ಹಾಡುತ ಹೇಳಿತು ಮಧುರ ಕಂಠವೀರಬಹುದೆಂದು!
ಜಾತ್ರೆಯಲ್ಲಿ ಹುಡುಕಿದೆ ನೀನಿರಬಹುದೆಂದು
ಭಾವಿಸಿದೆ ಬೊಂಬೆಯೇ ನೀನಾಗಿರಬಹುದೆಂದು!
ಬೆಟ್ಟದ ತುದಿಯಲ್ಲಿ ನಿಂತೆ ನೀ ಕಾಣಬಹುದೆಂದು
ನಿನ್ನ ಬಿಟ್ಟು ಕಂಡಿತು ಸುಂದರ ಜಗವಂದು!
ಸಾಗರದ ಮಧ್ಯೆ ದುಮುಕಿ ಹುಡುಕಿದೆ ನೀ ಅಲ್ಲಿರಬಹುದೆಂದು
ಜಲಚರ ಪ್ರಶ್ನಿಸಿದವು ನೀ ಏಕೆ ಬಂದಿರುವೆ ಎಂದು?
No comments:
Post a Comment