Wednesday 31 December 2014

ನೆನಪಿನ ನೋವಲ್ಲಿ..!!

ನೆನಪಿನ ನೋವಲ್ಲಿ..!!

ದಿನವೂ ನಿನ್ನ ನೆನಪು ಅಂತ ಅಲ್ಲ ಗೆಳತಿ
ನಿನ್ನ ಬಿಟ್ಟು ಬೇರೆ ಯಾವ ಲೋಕವು ನನಗೆ ತಿಳಿದಿಲ್ಲ

ಬಹುಶಹ ಇದು 31/12/2013 ಆಗಿದ್ದರೆ ನೀನು ನನ್ನೊಂದಿಗೆ  ಮಾತಾಡುತ್ತಿದ್ದೆ ಅಲ್ವಾ ಕೋತಿ. ಇಂದು ಅದೇ 31/12 ಆದರೆ 2013 ಅಲ್ಲ ಕಾಣೆ 2014 . ನೀನು ಬರಿಯ ನೆನಪಾಗಿ ಉಳಿದಿರುವೆ ಕಣೊ .ಯಾಕೆ ಇಷ್ಟೊಂದು ನೆನಪಾಗುತ್ತಿದ್ದೀಯ ,ಮಗುವಿಗೆ ಅಮ್ಮನ ನೆನಪಾದಂತೆ . ತುಂತುರು ಹನಿಗಳಿಗೆ ಕಾಮನಬಿಲ್ಲಿನ ರಂಗಿನಂತೆ. ಕೃಷ್ಣನ ಕೊಳಲಿನ ನಾದದಂತೆ.
ನೀನು ಬರಿಯ ನೆನಪೆಂದು ಅದೆಲ್ಲೋ ದೂರದಲ್ಲಿನ ನಕ್ಷತ್ರಗಳನ್ನ ಎಣಿಸೋಣ ಎಂದರೇ ಆ ಮಿನುಗುವ ಚುಕ್ಕಿಗಳಲ್ಲೂ ನಿನ್ನ ನಗುವೇ ಕಾಣುತ್ತಿದೆ ಕಣೋ,ಹಾಲಿನ ಬಿಲ್ಲೆಯಂತೆ ಕಾಣ್ತಿದ್ದ ಆ ಕಳ್ಳ ಚಂದ್ರನನ್ನ ನೋಡೋಣ ಅಂತ ಕಣ್ಣ ರೆಪ್ಪೆಯ ಸರಿಸಿದರೆ ಅಲ್ಲೂ ನಿನ್ನ ಮೊಗವೇ ಕಾಣ್ತಿದೆ ,ಇಷ್ಟು ನೆನಪಾಗುತ್ತಿರುವ ನಿನ್ನ ನೆನಪಲ್ಲೇ ನಾ ಹುಚ್ಚನಾಗುವೆನೆಂಬ ಭಯ ಆಗುತ್ತಿದೆ  ಕೋತಿ.
ನಿನ್ನ ಹೆಸರನ್ನ ಒಮ್ಮೆ ಆ ಆಕಾಶಕ್ಕೆ ಹೇಳೋ ಆಸೆ ಆಗ್ತಿದೆ ಹೇಳ್ಳಾ?

ನೆನಪುಗಳಲ್ಲೆ ನೆನೆದು ನೆನೆದು
ಹೃದಯ ಹಸಿರಾಗಿದೆ
ನಿನ್ನ ನೆನಪುಗಳ ಮಂಜು ಮುಸುಕಿ
ನನ್ನ ಹೃದಯದ ಕಾಡು ಮಂಕಾಯಿತು

31/12/2013 ರನ್ನ ನೆನೆದರೆ ನಾನು ಒಂದು ವರ್ಷ ಚಿಕ್ಕವನಗಿಬಿಡ್ತೀನಿ ಕಣೊ , ದಿನಗಳು ಕಳೆದು ಕಳೆದು ,ನಿತ್ಯ ಕನಸ್ಸುಗಳ ಬುತ್ತಿ ಹೊತ್ತು 2013ರಕ್ಕೆ ವಿದಾಯ ಹೇಳುವ ತುಡಿತದಲ್ಲಿ ಇದ್ದ ಆ ಕ್ಷಣ . ಎಷ್ಟೋ ಭಾರೀ ಮಾತಾಡಿದ್ದರು , ಆಗಿನ್ನೂ ಪರಿಚಯವಾದಂತೆ ಇತ್ತು. ಪರಿಚಯವಾದ ಅಪರಿಚಿತರಂತೆ ಮೌನವನ್ನೇ ಮಾತನ್ನಾಗಿಸಿ ಸಮಯ ಕಳೆಯುತ್ತಿದ್ದೆವು .ಅಂದು ಅದೆಷ್ಟು ಬೇಗ 11 ಗಂಟೆಯಾಯಿತು ಗೊತ್ತಿಲ್ಲ . ಹೊಸ ವರ್ಷಕ್ಕೆ ಕೇವಲ 1 ಗಂಟೆ . ಅಂದ್ರೆ 60 ನಿಮಿಷ only 3600 ಸೆಕೆಂಡ್ಗಳು ,ಅದೆಷ್ಟು ಭಾರೀ ಗಡಿಯಾರದ ಕಡೆ ತಿರುಗಿದೇನೋ ಗೊತ್ತಿಲ್ಲ ಎಣಿಸಿದ್ದರೆ ಸೆಕೆಂಡ್ ಮುಳ್ಳು ಚಲಿಸಿದಕ್ಕಿಂತ ಹೆಚ್ಚು ಗಡಿಯಾರದ ಕಡೆ ನೋಡಿತಿದ್ದೆ ಅನಿಸ್ತಿದೇ ನಿಮಿಷಗಳು ಕಳೆದಂತೆ ಜೋರಾಗುತ್ತಿರುವ ಹೃದಯದ ಮಿಡಿತ.
ಸಮಯ ಅದಾಗಲೇ 11:55 ನಿನ್ನೊಡನೆ ಮಾತನಾಡಲು ಕಾಲ್ ಮಾಡಿದ್ದು ಅಷ್ಟೇ ಗೊತ್ತಿರೋದು ಆ ನಾಲ್ಕು ನಿಮಿಷ ಎಂ ಮಾತಾಡಿದೇವೋ ಗೊತ್ತಿಲ್ಲ time ಅದಾಗಲೇ 11:59 ಆಗಿತ್ತು. 2013ರರ ಕೊನೆಯ ನಿಮಿಷವನ್ನ ನೀನೊಂದಿಗೆ ಕಳೆಯುತ್ತಿದ್ದೆ . ಅದಾಗಲೇ ಕೌಂಟ್ ಡೌನ್ ಶುರು 59........10......3 2 1 HAPPY NEW YEAR ಎಂದು ನಿನ್ನ ಹೆಸರನ್ನ ಆ ನಡು ರಾತ್ರಿಯಲ್ಲಿ ಹುಚ್ಚನಂತೆ ಕಿರುಚಿದ ಆ ಕ್ಷಣ ಇಂದಿಗೂ ಕಾಡುತ್ತಿದೆ.

ನೆನಪಿನಲ್ಲಿ ನೆನಪಾಗಿ ಕಳೆದ ,ಕಳೆದ ವರ್ಷ
ಪ್ರೀತಿಯಲ್ಲಿ ಪ್ರೀತಿಯಿಂದ ಬರುತ್ತಿರುವ ಮುಂದಿನ ವರ್ಷ
ಜೀವನದ ಜೊತೆಯಲ್ಲಿ ಜೊತೆಯಾಗುವ ಈ ವರ್ಷ

ಅಂದು ನಿನ್ನೊಡನೆ ಮಾತನಾಡಲು , ಸಮಯವ ಕಳೆಯಲು ಕಾರಣವಿರಲಿಲ್ಲ ,ಕಳೆದ ಕ್ಷಣವಿರಲಿಲ್ಲ .ಆದರೆ ಇಂದು ನೀನೊಂದಿಗೆ ಹೆಜ್ಜೆ ಹಾಕಿದ ಪ್ರತಿ ಕ್ಷಣ ಉಂಟು ಅದನ್ನ ನಿನ್ನೊಡನೆ ಅಂಚಿಕೊಳ್ಳಲು ನೀನು ನನ್ನೊಂದಿಗಿಲ್ಲ ,ನನ್ನವಳಾಗಿ ಉಳಿದಿಲ್ಲ. ಪ್ರತಿ ಕ್ಷಣ , ಪ್ರತಿ ದಿನ ನೀ ನಾನೊಂದಿಗೆ ಇರುವೆ ಆದರೆ ಅದು ಬರಿಯ ನೆನಪಿನ ನೆಪವಾಗಿ ಅಷ್ಟೇ ಕಣೊ ಕೋತಿ .
ಅಪರಿಚಿತರಂತೆ ಬಂದು
ಪರಿಚಿತವಾದ ಹಾದಿಯಲ್ಲಿ 
ನೆಡೆದು ಹೋಗುವ ನಡುವೆ
ಉಳಿದದ್ದು ಕರಿನೆರಳಿನ ನೆನಪುಗಳು
                                               -manu


No comments:

Post a Comment