ಮೊದಲ ಕ್ಷಣ ..!!
ಆರಂಭದ ಆ ದಿನಗಳು
ಆಕರ್ಷಣೆಯ ಆ ಕಂಗಳು
ಅಕ್ಕರೆಯ ಆ ನುಡಿಗಳು
ಆನಂದದ ಆ ನಲಿಯುವಾಗು
ಅಭಿಲಾಷೆಯ ಮನಗಳು
ಆಲಂಗಿಸುವ ಆ ನೋವುಗಳು
ನಿನ್ನ ಒಂದು ಗಳಿಗೆಯೂ ಮರೆತು ಬದುಕಲಾರೆ ಗೆಳತಿ .
ನೀ ನನಗೇ ನೆನಪಾಗುವ ಪ್ರತಿಯೊಂದು ಕ್ಷಣ ಅದೆಲ್ಲಿಂದಲೋ ಗೊತಿಲ್ಲ ಸಿ,ಸ್ ಅಶ್ವಥ್ ಸರ್ ರವರ ಕಾಣದ ಕಡಲಿಗೆ ಹಂಬಲಿಸಿದೆ ಮನ ಎಂಬ ಹಾಡು ನನ್ನ ಎದೆಯಲ್ಲಿ ಮನೆ ಮಾಡುವಂತೆ ಮಾಡುತ್ತದೆ , ಅದರ ಗುಂಗಿನಲ್ಲಿರುವ ರವಿ ಅಣ್ಣಾ ಬರೆದ ಲವ್ ಲವಿಕೆಯ ಕಥೆಗಳು ಸಾಲು ಸಾಲಾಗಿ ಬರುತ್ತವೆ . click
ನಿನ್ನ ಮೊದಲ ಭಾರೀ ಕಂಡದ್ದು ಕಾಲೇಜ್ ನಾ ಮೊದಲ ದಿನ ,ಆದರೆ ನಿನ್ನ ಪರಿಚಯವಾದದ್ದು ಅಂದು 19 ಜೂನ್ ,ಅದಾಗಲೇ ಕಾಲೇಜ್ ಬಿಟ್ಟು ಕೆಲ ಸಮಯ ಕಳೆದಿತ್ತು ,ಇತ್ತ ಸೂರ್ಯನು ತನ್ನ ಇರುವಿಕೆಯನ್ನ ನೆನಪಿಸಲು ಕಿರಣಗಳತೀಕ್ಷ್ಣತೆಯನ್ನು ಎಚ್ಚಿಸುತ್ತ ನಗೆ ಬೀರುತ್ತಿದ್ದನು.
ಪರಿಚಿತನಿಗೆ ಅಪರಿಚಿತನಂತೆ ಕಾಣುತ್ತಿದ್ದ ಸೆಂಟ್ರಲ್ ಬುಸ್ ಸ್ಟಾಪ್ ಅಲ್ಲಿ 258 ಬಸ್ಸಿಗಾಗಿ ಕಲ್ಲಿನ ಕುರ್ಚಿಯ ಮೇಲೆ ಅಮಾಯಕನಂತೆ ಕುಳಿತ್ತಿದ್ದೆ . ಅದ್ಯಾವುದೋ ನೆಪವಿಟ್ಟುಕೊಂಡು ಆ ಜನರ ಗುಂಪಿನ ಮಧ್ಯದಿಂದ ನನ್ನೆಡೆಗೆ ಮೆಲ್ಲ ನಗುವ ಬೀರುತ್ತಾ ಬಂದವಳು ನೀನು . ಆ ನಗು ನನ್ನೆದೆಗೆ ಮುದವ ನೀಡಿದಂತಿತ್ತು .ಅಂದು ನನ್ನ ಕಣ್ಣಿಗೆ ನೀನು ಯಾವುದೋ ಲೋಕದಿಂದ ಬಂದಂತೆ ಕಾಣುತ್ತಿದ್ದೆ ,ಅಂದು ನಾವು ಎಷ್ಟು ಮಾತನಾಡಿದೆವು ನನಗೇ ಗೊತ್ತಿಲ್ಲ. ಮೊದಲ ಬಾರಿ ಹುಡುಗಿಯೋಡನ ಅಷ್ಟು ಮಾತಾಡಿದ್ದು . ನಿನ್ನ ಫ್ರೆಂಡ್ ನನ್ನ ಎಷ್ಟು ಬೈಕೊಂಡ್ಲೋ ಗೊತ್ತಿಲ್ಲ . ಅಂದು ನಿನ್ನೊಡನೆ ಕಳೆದ ಆ ಕ್ಷಣ ಇಂದಿಗೂ ಮರೆತ್ತಿಲ್ಲ . ಅಂದು ನನ್ನ ಬದುಕಿಗೆ ಹೊಸ ನಾಂದಿಯನ್ನ ಹಾಡಿದಂತಿತ್ತು .
ಓ ನನ್ನ ಪ್ರತಿನಿತ್ಯ ಕಾಡುವ ನೆನಪೇ
ಮರೆತು ಮಂಕಾಗುವುದೇ ನಿನ್ನಯ ಹೊಳಪೇ
ನೆನಪುಗಳ ನೆಪದಲ್ಲಿ ಕಾಡುತ್ತಿರುವೆಯಲ್ಲೇ
ನೆನಪುಗಳು ಮಾಸುವ ಮುನ್ನವೇ ಬರುವೆಯೇ?
ಆದರೆ ಇಂದು ಅದೇ ಸೆಂಟ್ರಲ್ ಬಸ್ ಸ್ಟಾಪ್ ಅಲ್ಲಿ ,ಅದೇ ಕಲ್ಲಿನ ಕುರ್ಚಿಯ ಮೇಲೆ, ಅದೇ 258 ಬಸ್ಸಿಗಾಗಿ ಕಾದು ಕುಳಿತಿರುವೆ,ಅದೇ ಜನರ ಗುಂಪು ಇದೆ ಆದರೆ ನನ್ನೊಡನೆ ಮಾತನಾಡಲು ನಿನ್ನೊಬ್ಬಳಿಲ್ಲ , ನೀ ಇರದ ಈ ಕಲ್ಲು ಕುರ್ಚಿ ಖಾಲಿಯದಂತಿದೆ , ಕಾದು ಕುಳಿತಿರುವೆ ಗೆಳತಿ ನಿನಗಾಗಿ ನಿನ್ನ ಬರುವಿಕೆಗಾಗಿ .
ನಿನ್ನ ನೆನಪು ಅಗ್ನಿ ಸ್ನಾನದ ರೀತಿ
ನಿನ್ನ ಮರೆವು ಸುಡುವ ಹಿಮದ ಭೀತಿ
ಸುಖದ ಮಾಯಾಜಿಂಕೆಯ ಹುಡುಕುತ ಹೊರೆಟಿರುವೆ
ಹೂ ದಾರಿಯಲ್ಲಿ ಬರಿಯ ನೋವು ಮುಳ್ಳು
ನಂಬಿಕೆಯನಿಟ್ಟು ನನ್ನೊಡನೆ ಬಾ ಗೆಳತಿ
ಕೈಯ ಹಿಡಿದು ನೆಡೆಸುವೇ ಜೊತೆಯಲಿ
ನಿಂತ ದೋಣಿಯ ಕೆಳಗೆ ಕಡಲು ಚಲಿಸುವ ಹಾಗೆ
ಮರಣವು ಮಗುವಿನಂತೆ ಬರುವತನಕ ನಿನ್ನ ಜೊತೆಯಲಿ
-----ನಿನ್ನವ ಮನು
No comments:
Post a Comment