Friday, 20 November 2015

ಕವನ -55

ನವ್ಯ ನವಿಲೇ ..!


ಎಲ್ಲಿಂದಲೋ ತೂರಿ ಬಂದ ತಂಗಾಳಿ  ಪರಿ
ಹೆಕ್ಕಿ ತಂದಿತು ನಿನ್ನ ನೆನಪಿಸುವ ನವಿಲು ಗರಿ

ಅತ್ತಿಂದಿತ್ತ ಸಂಚರಿಸುವ ನವಿಲಿಗೆ ರೆಕ್ಕೆಯೇ ಕಾವಲು
ತಂಗಾಳಿಯಲ್ಲಿ ನಲಿದಾಡುವ ನಲ್ಲೆಗೆ ಚಂದಿರನೇ ಕಾವಲು
ಆ ಕೃಷ್ಣವೇಣಿಗೆ ಅಷ್ಟಗಲದ ಕಣ್ಣು ನೀಲಿ,  ಅದನ್ನಪ್ಪಿದ ಕಪ್ಪು
 ಒರೆ ಕಣ್ಣ ನೋಟದ ಸುಂದರಿ ಕಣ್ಣಿನ ಅಂಚಲ್ಲಿ ಕಾಡಿಗೆಯ ಕಪ್ಪು

ಬೀಸುತ್ತಿದ್ದ ಗಾಳಿಗೆ ಮೈ ಕೊಡವಿ ಕುಣಿಯುತ್ತಿದ ನಾಟ್ಯ ಮಯೂರಿ
ಪಿಳಿ ಪಿಳಿ ಕಣ್ಣ ನಲ್ಲೇ,  ಎದೆಯೊಳಗೆ ಸಣ್ಣ ನಗರಿ
ಕುಣಿಯುತಿವೆ ನವಿಲುಗಳು ಹೂದೋಟದ ಅಂಗಳದಿ 
ನೆಡೆಯುತ್ತಿಹಳು ನಲ್ಲೇ ನನ್ನ ಹೃದಯ ಮಂದಿರದಲಿ

ಮರಳುಗಾಡಲ್ಲಿ ನೆರಳು ದೊರೆತಂತೆ
ಹೇ ನವಿಲೇ ನಿನ್ನ ಶೃಂಗಾರ
ಇರುಳ ಕತ್ತಲಲಿ ಬೆಳಕು ಹರಿದಂತೆ
ಹೇ ಗೆಳತಿಯೇ ನೀನೇ ನನ್ನ ಬಂಗಾರ
ನವಿಲೇ ನಿನ್ನ ಹೋಲಿಕೆಗೆ ಯಾರಿಲ್ಲ ಸಮ
ನಲ್ಲೇ ನೀನೇ ನನ್ನ ಬಾಳಿನ ಸೌಗಂಧದ ಕುಸುಮ
           -ಮನು

No comments:

Post a Comment