Monday, 2 November 2015

ಕವನ-52

 ಬಯಕೆ..!

ಹೇಳಬೇಕೆನಿಸಿದೆ ನೂರಾರು ಬಯಕೆಯ ಮಾತು
ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು ||
ನಿನ್ನ ಜೊತೆಯಲಿ ಬರುವೆನು ನಾನು
ಕಣ್ಣ ಸನ್ನೆಯಲಿ ಕರೆಯ ಬಾರದೆ ನೀನು
ನಿನ್ನುಸಿರಿಗೆ ಉಸಿರಾಗಿರುವೆ ನಾನು 
ಏಳೇ  ಜನುಮ ಸಾಕು ಏನೇನು ನಾನು.

ಹೇಳಬೇಕೆನಿಸಿದೆ ನೂರಾರು ಬಯಕೆಯ ಮಾತು
ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು ||
ರಂಗೇರಿದ ಮೊಗದೊಲ್ಲೊಂದು ಬಿರುಸಾದ ಹುಸಿಮುನಿಸು,
ನಲ್ಲೆ, ನೀನೀಗ ನೋಡಲೆಂತು ಸೊಗಸು 
ಮನಸಿನ ಸಾಗರದಲ್ಲಿ ಒಲವಿನ ಅಲೆ ಎಬ್ಬಿಸಿದೆ
ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ.

ಹೇಳಬೇಕೆನಿಸಿದೆ ನೂರಾರು ಬಯಕೆಯ ಮಾತು
ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು ||
ಚಂದ್ರನಿರದ ಬಾನಿನಲ್ಲಿ ಚುಕ್ಕಿ ರಾಜ್ಯವು ನನ್ನದು
ಚಂದ್ರನ ಹಾಗೆ ನಲಿವ ಮಂದಹಾಸ ನಿನ್ನದು
ಹಗಲು ರಾತ್ರಿಗಳು ಉರುಳಿದರೇನು
ಮಾಸಲು ಬಿಡೆನು ನಿನ್ನ ಮಂದಹಾಸವನ್ನು.
                                           -ಮನು



No comments:

Post a Comment