Thursday, 13 November 2014

ಕವನ-21



ಕನಸ್ಸೆಂಬ ಕನ್ನಡಿಯ ಹಿಡಿದು
ಕನವರಿಕೆಯ ಮೆಟ್ಟಿಲ ಹೇರಿ
ದೂರದ ದಾರಿಯಲ್ಲಿ ನಿನ್ನ
ಆಗಮನವ ಬಯಸುತ್ತ ನಿಂತೆ
ಮೌನಿಯಾಗಿ ಕಾದು ನಿಂತೇನು
ಕಣ್ಣ ರೆಪ್ಪೆಯ ಅಳುಕಿಸದೆ

ಕಾದಿರುವೆ ಗೆಳತಿ ನಿನಗಾಗಿ
ನಿನ್ನ ಅವಿಭಾಜ್ಯ ಅಂಗವಾಗಿ
ನೀ ಬಾರದ ಯಾತನೆ
ವೇದನೆಯಲ್ಲಿ ಮುಗಿಯದು ಬವಣೆ
ಬರುವೆಯ ಈ ಬರಡು ಭೂಮಿಗೆ 
ಮುಂಗಾರು ಮಳೆಯಾಗಿ

ಕತ್ತಲಿನಿಂದ ಆವರಿಸಿರುವ ನನ್ನ
ಮನಸ್ಸಿಗೆ  ಬೆಳಕ್ಕಾಗಿ
ನಿನ್ನ ಪ್ರೀತಿಯ ಕತ್ತಲಿನ ಕಾಡಿನಲ್ಲಿ
ಮೂಡುವುದೇ ನೀ ಬರುವ ದಾರಿ ಬೆಳಕಾಗಿ
ಕಾಡುವ ಕತ್ತಲಲ್ಲಿ ಗೆಳತಿ ನಿನ್ನ 
ಕಣ್ಣ ಹೊಳಪಿನ ಬೆಳಕ ಬಯಸುತ್ತಿರುವೆನು

ತಡಮಾಡದೆ ಬಂದು ನಿಲ್ಲುವೆಯ
ನಿನ್ನ ಕಣ್ಣ ಹೊಲಪ ಚೆಲ್ಲುವೆಯ 
ನನ್ನ ಕಣ್ಣ ಕಂಬನಿ ಜಾರುವ
ಮುನ್ನ ಬಂದು ಹೊರಸುವೆಯಾ ?
ನನ್ನ ಪ್ರಾಣ ಪಕ್ಷಿ ಹಾರುವ 
ಮುನ್ನ ಜೋಪಾನ ಮಾಡುವೆಯಾ ?

                            ನಿನ್ನವ ಮನು


No comments:

Post a Comment