ನಿದ್ರೆಯ ನಡುವೆಯೂ ನಿನ್ನಯ ನೆನಪು..!!
ನಡುರಾತ್ರಿಯ ನಿದ್ದೆಯ ಬಿಟ್ಟು ನಿನ್ನ ನೆನೆದು ನೋಡುತ ಕುಳಿತೆ ಆಕಾಶವ
ನಕ್ಷತ್ರ ಮಧ್ಯದಲ್ಲಿ ಕಂಡೆನು ಮಿಂಚುತ ನಲಿದಾಡುತಿದ್ದ ನಿನ್ನ ವೈಭೋಗವ
ಚಂದಿರನ ಅಂಗಳದಲ್ಲಿ ಜೋಕಾಲಿ ಆಡುತಿದ್ದ ಆ ನಿನ್ನ ಸಂತೋಷವ
ಮೋಡಗಳೆ ನಾಚಿ ನೀರಾಗುತ್ತಿದವು ಕಂಡು ಆ ನಿನ್ನ ನಗು ಮೊಗವ
ತಂಗಾಳಿ ಹಾಡುತ ಸಾರುತುದು ಆ ನಿನ್ನ ಶಾಂತಾ ಸ್ವಭಾವವ
ಇಬ್ಬನಿಯು ಇಣುಕುತಿಹುದು ಹೊಲುತ ನಿನ್ನ ಬಿಂಬವ
ಕತ್ತಲು ಮರೆಮಾಚುತಿಹುದು ನಿನ್ನ ಕಾಡಿಗೆ ಕಣ್ಣ ನೋಟವ
ಸೂರ್ಯನು ಹಪಹಪಿಸುತಿಹನನು ನೋಡಲು ನಿನ್ನ ಮೈ ಮಾಟವ
-ನಿನ್ನವ ಮನು
No comments:
Post a Comment