Saturday 15 November 2014

ಸುರಿಯುವ ಸೋನೆಯಲ್ಲಿ ..!!


ಜಡಿಯ ಸೋನೆಯಲ್ಲಿ ..!!


ಬೆಳ್ಳಗೆ ಸೂರ್ಯನು ತನ್ನ ಮೊಗವ ತೋರಲು ನಾಚಿ ನೀರಾಗಿ ಮೋಡಗಳ ಮಧ್ಯೆ ಅವಿತು ಕುಳಿತ್ತಿದಂತ ಸಮಯ ,ಜಿನುಗುತ್ತಿದ್ದ ಮಂಜಿನ ಪನ್ನೀರಿನ ನೇರಳೆ ನೋಡಲು ಅಸ್ಪಷ್ಟ ,ಪರಿ ಶುದ್ದ ವಾತಾವರಣ .ತಂಗಾಳಿ ಮುದ ನೀಡುತ್ತಿತ್ತು. ದೂರದ ಗುಡುಗು,ಮಿಂಚಿನಾಟ ನಯನಗಳಿಗೆ ಸ್ವರ್ಗವನ್ನೇ ಸೃಷ್ಟಿಸಿತ್ತು .ಕಾಲೇಜ್ ಕ್ಯಾಂಪಸ್ ಅಲ್ಲಿ ಆ ಮುಸುಕು ಮುಂಜಾನೆಯಲ್ಲಿ ದಿನಕರನ ಹೊಂಬಿಸಿಲಲ್ಲಿ ಕಣ್ಣಿಗೆ ಹೊಳೆಯುವಂತೆ ಉಡುಗೆ ತೊಟ್ಟು ಬಂದವಳೇ ನನ್ನಾಕೆ ,ತುಂತೂರು ಹನಿಗಳಿಗೆ ಸಣ್ಣನೆ ಛತ್ರಿಯ ಹಿಡಿದು ಅಲ್ಲಿಂದ ಇಲ್ಲಿಗೆ ಜಿಂಕೆಯಂತೆ ಓಡಾಡುತ್ತಿದ್ದ ಅವಳನ್ನ ಕಂಡು ನನ್ನ ಮನಕಲುಕಿತು . ನನ್ನೆದೆಯ ಕೋಣೆಯೊಳಗೆ ನೆಲೆಯೂರಿದಳು ,ಮೊನಾಲಿಸಾಲಾನ್ನು ಮೀರಿಸುವ ಆ ನಗುವಿಗೆ ನಾ ಸೋಲದಿರಲಿಲ್ಲ,ನಾನಾಗ ಡಾಕ್ಟರ್ ಬಳಿ ಹೋಗಲಾರದ ರೋಗಿ,ಪ್ರೇಮ ರೋಗಿ.
ನಾನವಳ ಸೌಂದರ್ಯದ ಆರಾಧಕನಾದೆ ಕೂತರು,ನಿಂತರು,ಅವಳದೇ ಪರಿಪಾಠ ,ಮನಸೆಲ್ಲಾ ಅವಳೇ ತುಂಬಿರುವಾಗ ಕಣ್ಮುಚ್ಚಿದರು ಅವಳದೇ ಬಿಂಬ .ಕನಸಲ್ಲೆಲ್ಲ ಅವಳದೇ ರಾಜ್ಯಭಾರ .

ದಿನವೂ ನೋಡುತ್ತಿದ ಅವಳನ್ನು ಅಂದು ಎಷ್ಟು ಬಾರಿ ನೋಡಿದರು ಮನಸ್ಸಿಗೆ ತೃಪ್ತಿ ಆಗುತ್ತಿಲ್ಲ. ಅವಳ ಕಣ್ಣ ನೋಡಿದಾಗಲಂತೂ ಮೈಯೆಲ್ಲ ರೋಮಾಂಚನ ,ಮಿಂಚಿನ ಸಂಚಾರ ,ಹೇಳಲಾಗದ ಅನುಭವ ಅದು.
 ಅಂದು ಅವಳ ಮೇಲೆ ಎಲ್ಲಿಲದ ಒಲವು ,ಅವಳನ್ನ ಮಾತಾಡಿಸಬೇಕೆಂಬ ಹಂಬಲ ,ತುಸು ಸಮಯ ಅವಳೊಂದಿಗೆ  ಕಳೆಯ ಬೇಕೆಂಬ ಮನಸ್ಸು .ಆದರೆ ಯಾಕೋ ಗೊತ್ತಿಲ್ಲ ಅವಳ ಕಂಡೊಡನೆ ಮೂಕನಾಗುವೆ ,ಮನಸ್ಸಿನ ಭಾವನೆಯ ಹೊರಹಾಕಲಗದೆ ನನ್ನ ಹೃದಯದಲ್ಲೇ ಹಿಡಿದಿಟ್ಟಿಕೊಂಡು ಒದ್ದಾಡುವಂತಾಗಿದೆ .ಗೆಳತಿ ನೀ ಯಾಕೆ ಕಾಡುತಿರುವೆ ನನ್ನ ಇಷ್ಟು ,ನಿನ್ನ ಕಾಣದ ಕ್ಷಣ ನಾ ಈ ಲೋಕವೇ ತೊರೆದಂತೆ ,ನೀ ಇಲ್ಲದ ಈ ಬದುಕು ಶೂನ್ಯ .ಒಮ್ಮೆಯಾದರೂ ಬಂದು ಮಾತನಾಡಿಸುವೆಯ ??


ಬಯಕೆಯ ಬನದಲ್ಲಿ ಬದುಕಿನ ಬಯಲಲ್ಲಿ ,
ಕಣ್ಣಿನ ಕರೆಯಲ್ಲಿ ಕನಸಿನ ಮರೆಯಲ್ಲಿ,
ಬೆಳಕು ಚೆಲ್ಲಿದ್ದು ನಿನ್ನ ಮಾತು,
ಜೀವಕೆ ಬೇಕಿದೆ ನಿನ್ನ ಮಾತು ,
ಬಲಿಯಾದ ಆ ಮನಸು ನಿನ್ನದೇ ಕಣೇ ,
ನೀ ನನ್ನ ಬಳಿಗೆ ದೀಪ ಕಣೇ ,
ಕೊರಗಿ ಕರಗಿ ಕೊನೆಯಾಗು ಮುನ್ನ 
ಕಳುಹಿಸುವೆಯ ನಿನ್ನ ಮಾತಿನ ಸಂದೇಶವನ್ನ

                                                   -  ನಿನ್ನವ ಮನು



No comments:

Post a Comment