ನೀನಿರದೇ..!!
ನೀ ತೊರೆದ ಆ ಗಳಿಗೆ
ರಂಗೇರಿದ ನೀಲಿ ಬಾನಲ್ಲಿ ಕಾರ್ಮೋಡ ಕರಿನೆರಳು
ಅಲಲ್ಲಿ ಹಕ್ಕಿಗಳ ಚಿಲಿಪಿಲಿ ನಾದಾ
ಬೂರ್ಗೊರೆವ ಸಾಗರದ ಅಲೆಗಳು.
ನೀನಿರದ ಈ ಸಂಜೆಯಲಿ ಆತಂಕ ಮನೆಮಾಡಿದೆ
ಕೂಗಿಲೆಯ ದನಿಯಲ್ಲಿ ಮೊದಲ ಇಂಪಿಲ್ಲ
ಅರಳಿದೆ ಹೂವಲ್ಲಿ ಇನಿತು ಕಂಪಿಲ್ಲ
ಬೀಸುವ ಗಾಳಿಯಲ್ಲಿ ಒಂದಿನಿತೂ ತಂಪಿಲ್ಲ.
ನೀನಿರದ ಆ ಸಮಯ ನೆನಪುಗಳು ಕಾಡಿವೆ
ಮನದಲಿ ಕಾಣದ ನೋವೊಂದು ಆವರಿಸಿದೆ
ಮಾತು ಮೌನವಾಗಿ ಮನಸು
ಬಾರವಾಗಿ ನಿನ್ನ ಮಾತು ಕೇಳದಾಗಿದೆ.
ನೀನಿರದೇ ಬಾಳಿಗಿಲ್ಲ ಅರ್ಥ
ಬಾಳೆನಿಸುವುದು ವ್ಯರ್ಥ
ನೀನಿರದ ಬದುಕು ಬದುಕಲ್ಲ ಗೆಳತಿ ಬಂದುಬಿಡು
ಬೆಳಕಂತೆ ಮುಸುಕಿರುವ ಮಬ್ಬನ್ನು ಸರಿಸು
ಬೆಳಕಂತೆ ಮುಸುಕಿರುವ ಮಬ್ಬನ್ನು ಸರಿಸು