Saturday, 27 June 2015

ಕವನ-39

ನನ್ನವಳು..!!

ಮುದ್ದು ಮನಸಿನ ಮುದ್ದಾದ ಚೆಲುವೆನನ್ನವಳೂ 
ನಕ್ಕರೆ ಅರಳಿದ ಮಲ್ಲಿಗೆ ಹೂವಿನಂತವಳೂ
ಅಂಬರದಿ ಮಿಂಚಿವ ತಾರೆಯ ಕಣ್ಣಿನವಳೂ 
ಹುಣ್ಣಿಮೆ ಬೆಳದಿಂಗಳ ಚಂದ್ರನ ಮೊಗದವಳೂ 
ನೆಡೆದರೆ ನಾಟ್ಯ ಮಯೂರಿಯಂಥವಳೂ 
ಚಿಗುರೆಲೆಯ ಮೇಲಿನ ಇಬ್ಬನಿಯಂಥವಳು 
ಕುಂಚವೆ ನಾಚುವ ಚಿತ್ರವೂನನ್ನವಳು 
ಕವಿಗಳಿಗೂ ನಿಲುಕದ ಕಲ್ಪನೆಯಂಥವಳು 
ನನ್ನಯ ಕನಸ್ಸಿಗೆ ಕನ್ನಡಿಯಂಥವಳು 
ನನ್ನಯ ಮೌನಕ್ಕೆ ಮಾತಾದವಳು 
                               -ಮನು



No comments:

Post a Comment