Tuesday, 9 June 2015

ಕವನ-38


ನೆನಪಿನ ಅಲೆ..!!

ಮನವೇಕೋ ಇಂದು ನಿನ್ನ ಬಯಸಿದೆ
ಕಣ್ಮುಚ್ಚಿ ಕುಳಿತಾಗ ನಿನ್ನ ಮೊಗವ ಕಂಡೆ
ಆ ಮೊಗದಲ್ಲಿ ಮುದ್ದಾದ ಕಿರುನಗುವ ಕಂಡೆ
ನಿನ್ನ ಕಂಡಾಗ ಮನ  ಕುಣಿಯುವುದನ್ನು ಕಂಡೆ

ನೆನಪಿನ ಪುಸ್ತಕವ ತೆರೆದು ಪ್ರೀತಿಯ ಪುಟವ ಹುಡುಕಿದೆ
ಪ್ರತಿ ಪುಟದಲು ಪ್ರೀತಿ ತುಂಬಿದ ನಿನ್ನ ಹೃದಯವ ಕಂಡೆ
ಹೃದಯದಿ ನನಗಾಗಿ ಕಟ್ಟಿದ ಮುದ್ದಾದ ಮಹಲನು ಕಂಡೆ
ನನ್ನ ಹೃದಯದಿ ನಿನ್ನ ಒಲವಿನ ಪ್ರೀತಿಯ ಗುರುತನು ಕಂಡೆ
ಮುದ್ದಾದ ಮಹಲಲು ತುಸು ಮೌನವ ಕಂಡೆ
ಆ ಮೌನದಲ್ಲೂ ನೀನಾಡುವ ನುಡಿಮುತ್ತನು ಕಂಡೆ

ನನ್ನ ಈ ಕವನಕ್ಕೆ ಸ್ಪೂರ್ತಿಯು ನೀನು
ನನ್ನ ಕನಸಿನ ಕಲ್ಪನೆಯೂ ನೀನು 
ಹೃದಯದಿ ಮೂಡಿದ ಭಾವನೆಯೂ ನೀನು
ಪ್ರೀತಿಯೆಂದರೇನು ಕಲಿಸಿಕೊಟ್ಟವಳು  ನೀನು
ನೋವಿನಲ್ಲೂ ಸುಖವ ಕೊಡುವ ಅಸಾಮಾನ್ಯ ಭಾವ ನೀನು
ನೆನಪಿನ ಪುಟಗಳ ಅಂಚಿನಲ್ಲಿ ಮೂಡಿದ ಸುಂದರ ಕನಸು ನೀನು.

                   -ಮನು


No comments:

Post a Comment