ಮರೆಯದೆ ಕ್ಷಮಿಸು ನೆನಪಾದರೆ..!!
ಮರೆತು ಬಿಡು ನಿನ್ನೆಗಳ ನೆನಪುಗಳನ್ನು
ಕಣ್ಣಲ್ಲಿ ಬಚ್ಚಿಟ್ಟ ಕನಸುಗಳನ್ನು
ಜೊತೆಯಲಿ ನಕ್ಕು ನಲಿದ ಕ್ಷಣಗಳನ್ನು
ಮತ್ತೆ ಎಣಿಸದಿರು ಅತ್ತು ಹಗುರಾದ ಕಣ್ಣಹನಿಗಳನು
ಜೊತೆಯಲಿ ಕೈ ಹಿಡಿದು ನೆಡೆದ ಕ್ಷಣಗಳನು
ಸದಾ ನಿನ್ನ ಕಣ್ಣಂಚಿನ ಖುಷಿಯಲಿ
ನನಗೊಂದು ಸಣ್ಣ ಪಾಲಿರಲಿ
ನಿನಗೆ ನಿನ್ನದೇ ನಾಳೆಗಳಿವೆ
ನೆನ್ನೆಯ ಕಹಿ ನೆನಪನು ಮರೆಯಲು
ನಿನ್ನ ಹೊಳೆವ ಬದುಕಲಿ ಮತ್ತೆ ನೆನೆಯದಿರು
ನನ್ನನ್ನು , ನೋವ ನೀಡುವ ನೆನ್ನಗಳನು
ಮರೆತುಬಿಡು ನೀ ನನ್ನ ನ್ನು
ಅಳಿಸಿಬಿಡು ನನ್ನ ಹೆಸರನ್ನು..!!
-ಮನು
ಸೂಪರ್
ReplyDeleteಬ್ಯೂಟಿಫುಲ್