Tuesday, 27 October 2015

ಕವನ-02



 ಮೂಡಣದ ರವಿಯು ಕೇಳುತಿಹನು ನೀ ಯಾರೆಂದು
 ಪಡುವಣದ ಚಂದ್ರನು ಪ್ರಶ್ನಿಸುತಿಹನು ನೀ ಎಲ್ಲೆಂದು
 ನಲಿವ ನಕ್ಷತ್ರವು ಹೇಳುತಿಹುದು ನಾ ನೋಡಿಲ್ಲವೆಂದು
 ಭೂರಮೆಯು ಭ್ರಮಿಸುತಿಹುದು ನೀನಿಲ್ಲವೆಂದು
  ನಾ ಹೇಗೆ ಉತ್ತರಿಸಲಿ ಗೆಳತಿ  ನೀ ಇರುವೆ ಎಂದು
   ದುಂಬಿಯೂ ಕೇಳುತಿರುವುದು ನಿನ್ನವಳು ನಲಿವ ಹೂವೆಂದು
    ಇರುವೆಯು ಕೇಳುತಿರುವುದು ನಿನ್ನವಳು ಸಿಹಿಯ ಸಕ್ಕರೆಯೇ ಎಂದು
    ಹಾಡುವ ಕೋಗಿಲೆಯೂ ಅಣಕಿಸುತ್ತಿರುವುದು ನಿನ್ನ ಕಂಠ  ನನಗಿಂತ ಇಂಪಾ 
    ಬೀಸುವ ಗಾಳಿಯು ಕೆಣಕಿರುವುದು ನಿನ್ನವಳು ನನಗಿಂತ ತಂಪಾ 
    ನಾ ಹೇಗೆ ಉತ್ತರಿಸಲಿ ಗೆಳತಿ ನೀ ಹೇಗೆಂದು?
                                          -ಮನು 



ಕವನ-08



ನೂರಾರು ಮುಖಗಳಲ್ಲಿ
   ಒಂದು ಮುಖವ ಹುಡುಕಿದೆ!!
  ಕಾಣದೆಯೇ ಕಾಡಿಹುದು
 ನಿನ್ನ ಮಾಯಾ ಛಾಯೆ !!
ಜಡಿ ಮಳೆಯಲ್ಲಿ ಒಬ್ಬನೇ ನಿಂತು 
ಹನಿಗಳಲ್ಲಿ ಕಂಡಂಥ ನಿನ್ನ ಮೊಗ !!
  ಮನಸ ಮಂದಿರದಲ್ಲಿ
ಮುಚ್ಚಿರುವ ಬಾಗಿಲನು
ತೂರಿ ಬರುತ್ತಿದೆ ನಿನ್ನ ನೆನಪಿನ ಕಿರಣ !!
ಕಳೆದ ಕ್ಷಣಗಳ ನಲಿವು
ನೋವಾಗಿ ನೆನೆಸುತ್ತಿದೆ 
ನಿನ್ನ ಮರೆಯುವ ಯತ್ನ ಎಷ್ಟು ಕಠಿಣ!!  
                           -ಮನು


ಕವನ-14




ನವಿಲು ನರ್ತನದಂತ ಆ ನಿನ್ನ ನಡಿಗೆ
ಕಾಡುವ ಕಾಮನಬಿಲ್ಲಂತ ಆ ನಿನ್ನ ನೋಟ
ಅರಳಿದ ಹೂವಂತ ಆ ನಿನ್ನ ಮುಗುಳ್ನಗು 
ಕೋಗಿಲೆಯ ಗಾನದಂತ ಆ ನಿನ್ನ ನುಡಿಮುತ್ತು
ಬಣ್ಣ ಬಣ್ಣದ ಚಿಟ್ಟೆಯಂತ ಆ ನಿನ್ನ ನಲಿವು
ಬಿಡದೆ ಕಾಡಿರುವ ಆ ನಿನ್ನ ಕಾಡಿಗೆಯ ಕಣ್ಣು

ನೀನೆಂಬುದು ಸತ್ಯದ ಸುಳ್ಳಲ್ಲ 
ನೀನೆಂಬುದು ಸುಳ್ಳಿನ ಸತ್ಯವಲ್ಲ 
ನೀನೆಂಬುದು ನನ್ನಲಿರುವ ನೋವು
ನೀನೆಂಬು ನನ್ನಲಿರುವ ನಲಿವು
ಒಂದು ಹನಿಯ ಕಣ್ಣೀರು ಜಾರಿದರೂ ನನ್ನಾಣೆ
ಕಣಲ್ಲಿ ಕಣ್ಣಿಟ್ಟು ಕೊನೆವರೆಗೂ ಕಾಯುವೆನು ತಾಯಾಣೆ

ಕಾಡದಿರು ಕೊಲ್ಲದಿರು
ಮುನಿಯದಿರು ಮರೆಯಾಗದಿರು
ಜೊತೆಯಲ್ಲಿರು ಜೀವವಾಗಿರು
ಬಯಸಿದೆಲ್ಲ ನೀಡುವೆನು 
ಈ ಬಡ ಜೀವವ ಒತ್ತೆಯನಿಟ್ಟು
ಜೀವನದುದ್ದಕ್ಕೂ ಜೀವವಿರುವವರೆಗೂ
                        -ಮನು

ಕವನ-10

ನನ್ನವಳಿಗಾಗಿ ...!!-05

ಏನೆಂದು ತಿಳಿಸಲಿ ಗೆಳತಿ ನನ್ನ ಮನದ ಹಂಬಲವ  
ನನ್ನ ಆಸೆಗಳ ಮಹಾಪೂರವ  
ನಿನ್ನ ಕೈ ಹಿಡಿದು ಜೊತೆಯಲ್ಲಿ ತೂಸು ದೂರ ಸುಮ್ಮನೆ ಸಾಗುವ ಆಸೆ 
ಹುಣ್ಣಿಮೆಯ ಬೆಳದಿಂಗಳಲ್ಲಿ ನಿನ್ನ ಮುದ್ದಾದ ನಗು ಮೊಗವ ನೋಡುವ ಆಸೆ 
ಕಾಡಿಗೆ ಹಚ್ಚಿದ ಕಣ್ಣಿನಲ್ಲಿ ನನ್ನ ಪ್ರತಿಬಿಂಬವ ಕಾಣುವ ಆಸೆ 
ಒಂದು ಕೈ ತುತ್ತು ತಿಂದು ನಿನ್ನಿಂದ ತಾಯಿಯ ಮಮತೆಯ ಪಡೆಯುವ ಆಸೆ 
ತೂಸು ಮುನಿಸಿನ ಸಣ್ಣ ಜಗಳವಾಡಿ ನಿನ್ನ ರೇಗಿಸುವ ಆಸೆ 
ಚಿತ್ರದಲ್ಲಿ ಕಂಡ ತೊಡುಗೆಯ ಮತ್ತೊಮ್ಮೆತೊಟ್ಟ ನಿನ್ನ ನೋಡುವ ಆಸೆ  
ನಿನ್ನ ಕೆಂಪಾದ ಕೆನ್ನೆಯ ಮೇಲೆ ಕಾಡಿಗೆ ಬೊಟ್ಟೊಂದ ಇಡುವ ಆಸೆ 
ನಿನ್ನ ಕಷ್ಟ ಸುಖಗಳಲ್ಲಿ ಬಾಗಿಯಾಗುವ ಆಸೆ 
ಮುಂದೊಂದು ದಿನ ನಿನ್ನಮಮತೆಯ ಮಡಿಲ್ಲಲ್ಲಿ ಪ್ರಾಣವ ಬಿಡುವ ಆಸೆ  
 

-ನಿನ್ನವ ಮನು 


Friday, 23 October 2015

ಕವನ-51

ಮೌನ..!



 ಕಟ್ಟಲೆ ಬೇಕಾಗಿದೆ ನಿನ್ನ ಕಳೆದು ಹೋದ
 ನೆನಪುಗಳಿಗೆ ಒಂದು ಗೋರಿ 
ಒಲವಿನ ಮೆರವಣಿಗೆ ಮುಗಿದ ಮೇಲೆ
ಬಿಕೋ ಎನ್ನುತ್ತಿದೆ ಮಸಣದ ದಾರಿ.

ನೆಡೆದು ಬಂದ ದಾರಿಯಲ್ಲಿ ಮಾಸಿ  ಹೋದ
 ನಿನ್ನ ನೆನಪಿನ ಹೆಜ್ಜೆಯ ಗುರುತು
ಅದೇ ದಾರಿಯಲ್ಲಿ ಒಬ್ಬೋಂಟಿಯಾಗಿ ನಿಂತು ,ನೀ ತೊರೆದು 
ಹೋದ ಮನ ನಿನ್ನ ನೆನೆದು ನಿಂತಿದೆ ತುಂಬಿ ಬಂದ ಉಸಿರು . 
  
ನಾನೆಷ್ಟೇ ತುಂಬಿ ಕೊಟ್ಟರು ಪ್ರೀತಿ
ನನ್ನ ಪ್ರೀತಿಯ ಪುಟಗಳು ಬರಿ ಶೂನ್ಯ
ಅನಿಸುತಿದೆ ನಾನೇಕೋ  ಒಬ್ಬೋಂಟಿ ಎಂದು
ಬದುಕೆಂಬ ಕತ್ತಲಲ್ಲಿ ಬರಿ ಶೂನ್ಯ .
                                    -ಮನು




Wednesday, 21 October 2015

ಕವನ-50

   ಒಂದು  ಸಂಜೆ..!


ಕಳೆಯ ಬಯಸಿದೆ ಮನಸ್ಸು ನಿನ್ನೊಡನೆ
ಒಂದು ಭವ್ಯ ಸಂಜೆಯ

ರವಿಯು ಬೆಳಕ ಸೆರೆಯ ತೊರೆದು 
ಇರುಳನು ಸನಿಹಕೆ ಕರೆವ
ಆ ದಿವ್ಯ ಸಂಜೆಯ

 ನೀಲಿ ಭಾನು ಮುಸುಕನು ತೆರೆದು ಕೆಂಪು ರಂಗೇರಿ
ಹಕ್ಕಿಗಳ ಗುಂಪು ಮರಳಿ ಗೂಡ ಸೇರುವ
ಆ ಸದ್ದಿಲ್ಲದ ಸಾಗುವ ನವ್ಯ ಸಂಜೆಯ

 ನನ್ನೆದೆಯ ಮಿಡಿತಗಳಿಗೆ ನೀ ಬಡಿತವಾಗಿ
ನನ್ನೆದೆಯ ನೋವಿಗೆ ಬೆಚ್ಚನೆಯ ಮುತ್ತ ನೀಡುವ
ಆ ಮುತ್ತಿನ ಸಂಜೆಯ 

 ನನ್ನಯ ಮೌನಕ್ಕೆ  ನೀ ಹಾಡಾಗಿ, ಕನಸಿನ 
ಭಾವಕ್ಕೆ ರೂಪ ಕೊಟ್ಟು ,ಮನಸಿನ ಕದವ ತೆರೆವ
ಆ ಮೌನವಾದ ಸಂಜೆಯ

ಕಳೆಯ ಬಯಸಿದೆ ಮನಸ್ಸು ನಿನ್ನೊಡನೆ
ಒಂದು ಪ್ರೀತಿಯ ಸಂಜೆಯ
        -ಮನು




Thursday, 1 October 2015

ಕವನ-49



ಮೌನ..!!


ಬಯಕೆಯ ಬನದಲ್ಲಿ ಬದುಕಿನ ಬಯಲಲ್ಲಿ ,
ಕಣ್ಣಿನ ಕರೆಯಲ್ಲಿ ಕನಸಿನ ಮರೆಯಲ್ಲಿ,
ಬೆಳಕು ಚೆಲ್ಲಿದ್ದು ನಿನ್ನ ಮಾತು,
ಜೀವಕೆ ಬೇಕಿದೆ ನಿನ್ನ ಮಾತು ,


ಬಲಿಯಾದ ಆ ಮನಸು ನಿನ್ನದೇ ಕಣೇ ,
ನೀ ನನ್ನ ಬಾಳಿಗೆ ದೀಪ ಕಣೇ ,
ಕೊರಗಿ ಕರಗಿ ಕೊನೆಯಾಗು ಮುನ್ನ 
ಕಳುಹಿಸುವೆಯ ನಿನ್ನ ಮಾತಿನ ಸಂದೇಶವನ್ನ

ನೆನಪುಗಳಲ್ಲೆ ನೆನೆದು ನೆನೆದು
ಹೃದಯ ಹಸಿರಾಗಿದೆ
ನಿನ್ನ ನೆನಪುಗಳ ಮಂಜು ಮುಸುಕಿ
ನನ್ನ ಹೃದಯದ ಕಾದು ಮಂಕಾಯಿತು

ಅಪರಿಚಿತರಂತೆ ಬಂದು
ಪರಿಚಿತವಾದ ಹಾದಿಯಲ್ಲಿ 
ನೆಡೆದು ಹೋಗುವ ನಡುವೆ
ಉಳಿದದ್ದು ಕರಿನೆರಳಿನ ನೆನಪುಗಳು
                                   -ಮನು