Friday, 29 May 2015

ಕವನ-37


ಕಲ್ಪನೆ..!!


ನನ್ನೊಲವೇ ನಿನ್ನ ಕಾಣದಿದ್ದರೂ 
ಕನಸಲ್ಲಿ ನಿನ್ನ ಕಂಡಂತಿತ್ತು .

ನಿನ್ನ ಧ್ವನಿಯ ಕೇಳದಿದ್ದರೂ
ಮುಗುಳು ನಗುವೇ ಮಾತಾಡಿದಂತಿತ್ತು .

ನೀ ಕೈ ಬೀಸಿ ಕರೆಯದಿದ್ದರೂ
ಕಣ್ಣಂಚಲೆ ಸನ್ನೆ ಮಾಡಿ ಕರೆದಂತಿತ್ತು .

ನಿನ್ನ ಹೃದಯ ನನಗಾಗಿ ಮೀಡಿಯದಿದ್ದರು
ನಿನ್ನ ಉಸಿರಲ್ಲಿ ನಾ ಬೇರೆದಂತಿತ್ತು.

ನೀ ಬರಿಯ ಕನಸು-ಕಲ್ಪನೆಯಾಗದಿದ್ದರೆ
ನೀ ನನ್ನ ಜೀವವಾಗಿರಬೇಕಿತ್ತು .

                                           -ಮನು


Tuesday, 26 May 2015

ಪ್ರೇಮದ ಓಲೆ..!!



ಪ್ರೇಮದ ಓಲೆ..!!



ಪ್ರೀತಿಯ ಹುಡುಗಿಗೆ,

ಎಲ್ಲಿಂದ ಶುರು ಮಾಡಲಿ ನನ್ನ ಪ್ರೀತಿಯ ಓಲೆಯನ್ನ ಗೆಳತಿ,

ಪ್ರೀತಿ ಪ್ರೇಮ , ಒಲವು ಮೊದಲಾದ ಶಬ್ದಕ್ಕೆ ಕೊಣೆಯೆಂಬುದೇ ಇಲ್ಲ , ಅದು ನಿತ್ಯ ನೂತನ ,ಚಿರಾಯು.

ರಜೆ ಮುಗಿದು ಕಾಲೇಜ್ ಪ್ರಾರಂಭವಾಗಲು ಇನ್ನೂ ಕೇವಲ 10 ದಿನ ಬಾಕಿ ಇದೆ,   ನಿನ್ನ ಯಾವಾಗ ನೋಡಿತ್ತೀನೋ ಎಂದು ಮನವು ಹಂಬಲಿಸುತ್ತಿದೆ . ನಿನ್ನ ನೆನಪಿಗೆ ಮಿತಿಯೇ ಇಲ್ಲ , ನಿನ್ನ ನೆನಪಲ್ಲೇ ನಿನಗೊಂದು ಪತ್ರ ಬರೆಯಲು ಶುರು ಮಾಡಿದೆ , ಆದರೆ ಖಾಲಿಯ ಹಾಳೆಯ ಮೇಲೆ ಗೀಚಲು ಮನಸ್ಸಿನ ಮಾತೇಕೊ ಮೌನವಾಗಿ ಬಿಟ್ಟಿದೆ . 

ನಿನಗೇ ಗೊತ್ತ  ಜೂನ್ 1ಕ್ಕೆ ನಮ್ಮ ಪ್ರೀತಿಗೆ ಭರ್ತಿ 2 ವರ್ಷ , ನಿನ್ನ ಮೊದಲ ಭಾರೀ ಕಂಡಾಗ ಯಾಕೆ ನಿನ್ನ ಪ್ರೀತಿಸಲು ಆರಂಭಿಸಿದೆ ಎನ್ನುವುದೇ ಇಂದಿಗೂ ನಿಗೂಢ ಹಾಗೂ ಅಷ್ಟೇ ವಾಸ್ತವ . ಮೊದಲು ಕೇವಲ ಗೆಳತಿಯಾಗಿದ್ದ ನೀನು ಈಗ ನನ್ನ ಪಾಲಿಗೆ ಸರ್ವಸ್ವ .
ಈ 2 ವರ್ಷದ ಸವಿ ದಿನಗಳಿಗೆ ಹೆಸರಿಡೋ ಆಸೆ ಆಗ್ತಿದೆ .ಈ ಓಲೆಯೂ ನಿನಗೇ ತಲುಪುತ್ತೋ ಇಲ್ಲವೋ ತಿಳಿದಿಲ್ಲ , ಆದರೆ ಈ 2 ವರ್ಷದ ಸವಿ ನೆನಪಿಗೆ ಒಂದು ಹೆಸರನ್ನು ಹಿಡಲು ಬರ್ತೀಯಾ ಅಲ್ವಾ?.
"ನಾ ನಿನ್ನ ಕನಸಿನ ಚಂದಾದಾರನು  
ಚಂದಾ ಬಾಕಿ ನೀಡಲು ಬಂದೆ ಬರುವೆನು  
ನಾ ನೇರ ಹೃದಯದ ವರದಿಗಾರನೂ 

ನಿನ್ನ ಕಂಡ ಕ್ಷಣದಲ್ಲೇ ಮಾತೆ ಮರೆವೆನು"

ಈ ಓಲೆಯ ಕೊನೆಯ ಅಕ್ಷರದ ತನಕವೂ ಮತ್ತೆ ಮತ್ತೆ ನೀ ಓದುತ್ತೀಯ ಅಲ್ವಾ ? , ಮನದಲ್ಲಿ ಸಾವಿರ ಕನಸು ಕಟ್ಟಿಕೊಂಡಿರುವವನ ಬಗ್ಗೆ ಪ್ರೀತಿ ತುಂಬಿದ ತಿರಸ್ಕಾರ ಇದೆ ಅಲ್ವಾ?
ಪ್ರತಿ ಹೃದಯ ಬಡಿತದಲ್ಲೂ , ಉಸಿರಲೂ ಆವರಿಸಿತೊಡಗಿ ಇಂದು ನಾನು ನಿನ್ನ ಪ್ರೀತಿಯಲ್ಲಿ ಮಾನಸಿಕ ರೋಗಿಯಾಗಿದ್ದೇನೆ .
ಏಕೋ ನಿನ್ನಲ್ಲೇ ಐಕ್ಯವಾಗಬೇಕೆಂಬ ಅತೀವ ಹಂಬಲ , ಅಂದು ನಿನ್ನ ಧ್ವನಿಯಿಂದ ಬಂದ ಮಮತೆಯ ನಾದ ಇಂದಿಗೂ ನನ್ನೆದೆಯಲ್ಲೇ ಝೇಂಕರಿಸುತ್ತಿವೆ  ಇದೆ . ಅದಕ್ಕೆ ಈ 2 ವರ್ಷದ ಸವಿನೆನಪೆ ಸಾಕ್ಷಿ .

ನೂರು ವರುಷವಾದರೂ , ಯುಗ ಯುಗ ಕಳೆದರೂ ನಾ ನಿನ್ನ ಮರೆಯಲಾರೆ .ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ , ಪ್ರೇಮ ರಾಗ ಹಾಡು ಬಾ ಗೆಳತಿ ? ಬರ್ತೀಯಾ ಅಲ್ವಾ?



                                                           ಇಂತಿ ನಿನ್ನ ಗೆಳೆಯ -
                                                           ಮನು

Monday, 11 May 2015

ಕವನ-36

ಚಿರಾಯು ನಿನ್ನ ಪ್ರೀತಿ

ಮುಂದೊಂದು ಜನುಮವಿರುವುದಾದರೆ ನಾನು
ನಿನ್ನ ಹೃದಯವಾಗಿ ಜನಿಸುವೆ .
ಅದರ ಬಡಿತವು ಮಿಡಿತವೂ ಕೇವಲ 
ನನಗಾಗೇ ಮೀಸಲಿಡುವೆಯ..?

ಸಲುಗೆಯಿಂದ ಕಳೆದ ಕ್ಷಣಗಳು ನನ್ನಲ್ಲಿವೆ
ಆದರೆ ಪ್ರೀತಿಯೊಂದಿಲ್ಲ.
ನಿನ್ನ ನೆನೆದ ಸವಿನೆನಪುಗಳು ನನ್ನಲ್ಲಿವೆ
ಆದರೆ ನೀ ಜೊತೆಯಿಲ್ಲ .
ಕ್ಷಮಿಸು ಬಿಡು ಗೆಳತಿ ನಾ ಕೊಟ್ಟ 
ಕರಾಳ ನೆನಪುಗಳ..

ಉಸಿರು ಬಿಗಿ ಹಿಡಿದು ನಿನ್ನ ನೆನಪ 
ನೆನಪಾಗಿಸುವ ನೆಪನೀಡಿರುವೆ .
ಮೊದಲಾಗಿ ಬಂದ ನೀ ನನ್ನಲ್ಲಿ 
ಮೊದಲನೆಯವಳಾಗಿ ಉಳಿಯುವೆ ಬಾಳಲಿ.
ಕನಸಾಗಿ ಕಂಡೆ ನೀನ್ನ ಈ ಇರುಳಲಿ
ನೆರಳಾಗಿಯೇ ಉಳಿಯುವೆ ಜೊತೆಯಲಿ..
                             -ಮನು

Saturday, 9 May 2015

ಕವನ-35

ಅಮ್ಮ



ನಿನ್ನೊಡಲಲಿ ನವಮಾಸ ಹೊತ್ತು ಜನ್ಮ
ನೀಡಿದೆ ನಿನ್ನಾಸೆಯ ರೂಪಕೆ ,ನಿನ್ನ
ಮಮತೆಯ ಮಡಿಲಿನ ಆಶ್ರಯದಲ್ಲಿ 
ನಲಿದ ನನಗದೆ ಸ್ವರ್ಗ ಸೋಪಾನ ಅಮ್ಮ.

ಗುಮ್ಮಾ ಬಂದಾ ಎನ್ನುತ ತುತ್ತು ತುತ್ತು 
ಅಮೃತವನ್ನ ಮೋಸದಿಂದ ಬಾಯಿಗಿಟ್ಟು 
ಮೊದಲ ಗುರುವಾಗಿ ನಾಲಕ್ಕೂ ಅಕ್ಷರವನ್ನ ಕಲಿಸಿ 
ಪ್ರೀತಿ ಉಣಿಸುತ್ತಲೆ ಎದೆಯೆತ್ತರಕ್ಕೆ ನಲುಗಿದೆ ಅಮ್ಮ.

ನನ್ನ ನಲಿವಿನಲ್ಲಿ ನೀನಕ್ಕೆ ,
ಸೋಲಲ್ಲೂ ಜೊತೆಯಾಗಿ ನಿಂತೆ
 ಕೈಹಿಡಿದು ಬದುಕ ದಾರಿಯ ತೋರಿದೆ,
ನೀ ಎಷ್ಟು ದಣಿವೇ ಅಮ್ಮ 

ಸಾಲು ಸಾಲುಗಳು ಗೀಚಿದರು 
ಮುಗಿಯಲಿಲ್ಲ ಸಾಲುಗಳು
ನನಗಾಗಿ ನೀ ಎಲ್ಲಾ ಮಾಡಿದೆ, 
ನೀನಿಲ್ಲದೆ ನಾನೇನು ಇಲ್ಲ

ನಿನ್ನ ಪ್ರೀತಿಯನ್ನ 
ಯಾರಿಂದಲೂ ಕದಿಯಾಲಾಗುತ್ತಿಲ್ಲ 
ಅಮ್ಮ ನನ್ನೊಲವು ನೀ, 
ನನ್ನ ಬದುಕು ನೀನೇ ಅಮ್ಮ
                                            -manu