Thursday, 17 December 2015

ಕವನ-59

ನೀನಿರದೇ..!!

ನೀ  ತೊರೆದ ಆ ಗಳಿಗೆ 
ರಂಗೇರಿದ ನೀಲಿ ಬಾನಲ್ಲಿ ಕಾರ್ಮೋಡ ಕರಿನೆರಳು
ಅಲಲ್ಲಿ ಕ್ಕಿಗಳ ಚಿಲಿಪಿಲಿ ನಾದಾ
ಬೂರ್ಗೊರೆವ ಸಾಗರದ ಅಲೆಗಳು.

ನೀನಿರದ ಈ  ಸಂಜೆಯಲಿ ಆತಂಕ ಮನೆಮಾಡಿದೆ
ಕೂಗಿಲೆಯ ದನಿಯಲ್ಲಿ ಮೊದಲ ಇಂಪಿಲ್ಲ
ಅರಳಿದೆ ಹೂವಲ್ಲಿ  ಇನಿತು ಕಂಪಿಲ್ಲ
ಬೀಸುವ ಗಾಳಿಯಲ್ಲಿ ಒಂದಿನಿತೂ ತಂಪಿಲ್ಲ.

ನೀನಿರದ ಆ ಸಮಯ ನೆನಪುಗಳು ಕಾಡಿವೆ
ಮನದಲಿ ಕಾಣದ ನೋವೊಂದು ಆವರಿಸಿದೆ
ಮಾತು ಮೌನವಾಗಿ ಮನಸು 
ಬಾರವಾಗಿ  ನಿನ್ನ  ಮಾತು ಕೇಳದಾಗಿದೆ.


ನೀನಿರದೇ  ಬಾಳಿಗಿಲ್ಲ ಅರ್ಥ
ಬಾಳೆನಿಸುವುದು ವ್ಯರ್ಥ
ನೀನಿರದ ಬದುಕು ಬದುಕಲ್ಲ ಗೆಳತಿ ಬಂದುಬಿಡು 
ಬೆಳಕಂತೆ ಮುಸುಕಿರುವ ಮಬ್ಬನ್ನು ಸರಿಸು
                                   -ಮನು


Thursday, 10 December 2015

ಕವನ-58


ಸಾವು..!!

ಸತ್ತಾಗ ಗುಂಡಿಯ ಮುಂದೆ ನಿಂತು ಅಳುವರು 
ಅಂತೂ ಹೋದನೆಂಬ ಹರುಷಕ್ಕೋ ?
ಇಲ್ಲ ಕಳೆದುಕೊಂಡೆನೆಂಬ ದುಃಖಕ್ಕೊ ?

ಬದುಕ್ಕೀದಾಗ  ನೀ ಯಾರೆಂದು ಕೇಳದವರು
ಇಂದು ನೀ ಇಲ್ಲವೆಂದು ಮರುಗುತಿಹರು
ಇದ್ದಾಗ ನಿನ್ನ ಕಂಡು ಕನಿಕರಿಸದವರು

ಸತ್ತಾಗ ಎಲ್ಲರೂ ದೇವರಂತೆ 
ಬಗೆ ಬಗೆ ಹೂವಿನ ಅಲಂಕಾರವಂತೆ 
ಪೂಜೆ ಪುನಸ್ಕಾರವಂತೆ 

ಮೂರಿಡೀ ಮಣ್ಣಾಕಿ ಮರೆತೋಗುವರು
ಇಂತಿರುಗಿಯೂ ನೋಡದೆ ನೆಡೆಯುವರು
ನೀ ಯಾರೆಂದು ತಿಳಿಯದವರು

ಸಾವಿನ ಸೂತಕದ ಛಾಯೆ
ಮನದೊಳಗೊ, ಮನೆಯೊಳಗೊ.... 
ಮಸಣದೊಳಗೊ ??
                   -ಮನು

Saturday, 5 December 2015

ಕವನ-57

ಕನಸು..!!

ನಿನ್ನ ಕಂಗಳ ಸಾಗರದಿ
ಬೆಳದಿಂಗಳು ಸುರಿದಂತೆ,
ಒ೦ದೊ೦ದು ಕನಸುಗಳು
ಅರಳುತ್ತವೆ... ಕಮರುತ್ತವೆ....
ಒ೦ದೊ೦ದು ಕನಸಿನಲ್ಲೂ
ಭಾವನೆಗಳು ಹರಿಯುತ್ತವೆ

ಕನಸಲ್ಲೊಂದು  ಹೊಸ ಕನಸು
ಮನಸಲ್ಲೇಕೋ ಹುಸಿ ಮುನಿಸು
ಒಂದೊಂದು ಕವನಗಳ ಸಾಲಾಗಿ
ಕಲ್ಪನೆಯಾಗಸದಿ ಹಕ್ಕಿಯಾಗಿ
ಕಾಡುವ ಕೋಮಲ ಕನಸದು
ಗರಿಗೆದರುವ ನೆನಪಿನ ಸೆಳೆತವದು
               -ಮನು

Wednesday, 2 December 2015

ಕವನ-56

ನಿನ್ನ ಹೆಜ್ಜೆಗೆ ನಾನೇ ಗೆಜ್ಜೆ ...!!


ನಿನ್ನೊಳಗೆ ನೀನಿರದೆ ನನ್ನೊಳಗೆ ಸೇರು..
ನಿನ್ನೊಳಮನದ ನೋವು ನನ್ನೆದೆಗೆ ತೋರು
ಕಂಗಳಲ್ಲೇ  ಕವನ ಬರೆದೆ ನನ್ನಲ್ಲಿಗೆ
 ಅಂಗಳದಿ ಅರಳಿದೆ ಒಲವ ಮಲ್ಲಿಗೆ


ಕಣ್ಣಿನ ಕನಸಿಗೆ ಬಣ್ಣವ ತುಂಬಿ 
ರಂಗಿನ ಕನಸನು ಕಾಣೋಣ 
ಜಗವಿದು ಶೂನ್ಯ, ಜೀವನ ಶೂನ್ಯ,
ನಿನ್ನಯ ನೆನಪೆ ನನಗೆಂದೂ ಅನನ್ಯ

ನಿನ್ನ ನಗುವಿಂದ ಬರೆಸಿದೆ ನೂರಾರು ಕವಿತೆ
ನಿನ್ನ ಕಣ್ಣ ನೋಟಕೆ ಇದೆಯಾ ಹೋಲುವ ಅಳತೆ?
ಮೋಹದ ಪರದೆಯ ಮುಸುಕ ಸರಿಸಿ 
ಗೆಜ್ಜೆ ಕಟ್ಟಿ  ಕುಣಿಯುತ್ತಿವೆ ನೆನಪಿನ ಹೂರಾಶಿ 

ನೂರಾರು ಕವನಗಳು ,ನೂರಾರು ಆಸೆಗಳು
ನೂರಾರು ಬಯಕೆಗಳು,  ನೂರಾರು ಕನಸುಗಳು
ನನ್ನ  ಮನದ ಮೌನಕ್ಕೆ ಮಾತಾಗು
ನನ್ನ ಕನಸಿನ ಕವನಕ್ಕೆ  ಶೀರ್ಷಿಕೆಯಾಗು
                                                  -ಮನು