Thursday, 6 October 2016

ಮುದ್ದು ಪೆದ್ದು..!!

ಮುದ್ದು ಪೆದ್ದು..!!

ಪದೇ ಪದೇ ಗಾಳಿಗೆ ಕೆದರಿದ ನಿನ್ನ ಮುಂಗುರುಳ ಸರಿಸಿ
ಮೆಲ್ಲಗೆ ಕಾಡಿಗೆಯನ್ನೂ ಬಳಿದು ಬಿಡುತ್ತೇನೆ ಆ ಕಣ್ಣ
ರೆಪ್ಪೆಗಳಿಗೆ  ಅಲಂಕಾರವಾಗಿಬಿಡಲಿ .... ನಿನಗೆ 
ನನ್ನ ಕನಸಿನೂರಿಗೆ ಕರೆದೊಯ್ಯುವ ಮೊದಲು ..

ಕಣ್ಣರೆಪ್ಪೆಯಂತೆ ಸದಾ ನಿನ್ನ ಚುಂಬಿಸುವ ಆಸೆ 
ಸದಾ ಬೆಚ್ಚಗೆ ನಿನ್ನ ಅಪ್ಪಿಕೊಳ್ಳುವ ಆಸೆ ..
ನವಿರಾದ ನಿನಗೆ ನೋವಾಗದಂತೆ ಕಾಪಾಡುವ ಆಸೆ 
ರಾತ್ರಿ ಕನಸುಗಳಿಗೆ ಕಾವಲುಗಾರನಾಗುವ ಆಸೆ..

ನೀ ತುಸು ನಕ್ಕು...! ನಸು ನಾಚಿ ...!
ನನ್ನೆಡೆಗೆ ನೋಡಿದಾಗ
ಕಣ್ಣ ರೆಪ್ಪೆಯಂಚಲಿನ  ಕಾಡಿಗೆಯ ತೆಗೆದು 
ದೃಷ್ಟಿ ಬೊಟ್ಟು ಹಿಡಲೆ ಆ ನಿನ್ನ ಹೂ ಗಲ್ಲಕೆ

ಸದಾ ನಿನ್ನ ಹೊಳೆಯುವ ಕಣ್ಣುಗಳನ್ನೇ ನೋಡುವ ಆಸೆ 
ಜಗವನೆಲ್ಲ ಮರೆತು ನಿನ್ನ ಸೇರುವ ಆಸೆ ..
ನಯನ ನೀನಾದರೆ , ಕಣ್ಣ ರೆಪ್ಪೆ ನಾನಾಗುವ ಆಸೆ 
ಕೊನೆವರೆಗೂ ನಿನ್ನ ಜೊತೆಯಾಗಿರುವ ಆಸೆ..

ನಿನ್ನ ಕಾಯುತ್ತ ...! ಮನವೆಲ್ಲ ರಂಗೊಲಿಯಾಗಿವೆ ..
ನಿನ್ನ ಪಾದ ಸೋಕಲು ...
ಪ್ರವೇಶ ವಾಗಿಬಿಡಲಿ ನನ್ನ ಕನಸಿನ ಲೋಕಕ್ಕೆ ...
ನೀ  ಕಾಲಿಟ್ಟ ಗಳಿಗೆಯಿಂದ ...!!

ತುಸು ದೂರ ಸುಮ್ಮನೆ ಸಾಗುವಾಗ 
ಬೇಕೆಂತಲೇ ನಾ ಕೈ ತಾಗಿಸಿದಾಗ ನೀ 
ನನ್ನಡೆ ನೋಡಿದಾಗ ವಶವಾಗದೇ ಇರಲಾರೆನೇ 
ನಾನು ಹೇಳಿಬಿಡಲೇ ಇಲ್ಲಿಯೇ ಎಲ್ಲವನು..
- ಮನು



Thursday, 11 August 2016

ನನ್ನ ಹುಡುಗಿ ..!!

ನನ್ನ ಹುಡುಗಿ ..!!

ಮುಗಿಲ ನಡುವಿನ
ಬೆಳ್ಳಿ ಮಿಂಚು ,
ನಕ್ಕರೆ ಮಲ್ಲಿಗೆಯ
ಹೂವಂತೆ ನನ್ನ ಹುಡುಗಿ 

ಚಿಗುರೆಲೆಯ ಮೇಲಿನ
ಇಬ್ಬನಿ ,
ಮುಂಜಾನೆ ಮಂಜಿನ
ಹಿಮಾಬಿಂದು ನನ್ನ ಹುಡುಗಿ

ಮೈ ಮನವ 
ಮುತ್ತುವ ತಂಗಾಳಿ ,
ಮಳೆಯಲಿ ನೆಂದಾಗ 
ಸಿಕ್ಕ ಸಿಹಿಮುತ್ತಂತೆ ನನ್ನ ಹುಡುಗಿ

ಎಳೆಗರುವಿನ ತುಟಿಯ
ನೊರೆಹಾಲು ,
ನಿದ್ದೆಯ ಮಗುವಿನ
ನಗು ನನ್ನ ಹುಡುಗಿ 
      -ಮನು



Saturday, 30 April 2016

ನಲ್ಲೆ..!!

 ನಲ್ಲೆ..!!

ರಂಗೇರಿದ ಮೊಗದೊಲ್ಲೊಂದು ಬಿರುಸಾದ ಹುಸಿಮುನಿಸು,
 ನಲ್ಲೆ, ನೀನೀಗ ನೋಡಲೆಂತು ಸೊಗಸು 

ನಿನ್ನ ರೂಪ ಬಹಳ  ಅಪರೂಪ 
ಶಶಿಯಲ್ಲೂ ಲೋಪ , ಯಾರದೋ ಶಾಪ

ನಿನ್ನ ಮೋಹಕ ಮುಂಗುರುಳು ನಿನ್ನಂದವ ಹೆಚ್ಚಿಸಿದೆ 
ನಾನಿಲ್ಲಿ ಒದ್ದಾಡುತಿರುವೆ ನಿನ್ನ ಹೊಗಳಲು ಪದಗಳು ಸಿಗದೇ.

ಕಂಗಳಲ್ಲೇ ಕವನ ಬರೆದು ಕಳಿಸಿದೆ ನಿನ್ನಲ್ಲಿಗೆ,
 ಅಂಗಳದಲ್ಲಿ ಅರಳಿದಾಗ ನಗುವ ಮಲ್ಲಿಗೆ

ಕಾಲವೆಂಬ ಪರಿಧಿಯಲ್ಲಿ,ಕವನವಾದ ವಾಹಿನಿ 
ಕವಿಯ ಮನದ ಕಣ್ಣ ಮುಂದೆ ಮೂಡಿ ಬಂದ ಕಾವ್ಯ ನೀ
                                             
                                                    -ಮನು


Tuesday, 12 April 2016

ಮರೆಯದೆ ಕ್ಷಮಿಸು ನೆನಪಾದರೆ..!!

ಮರೆಯದೆ ಕ್ಷಮಿಸು ನೆನಪಾದರೆ..!!

ಮರೆತು ಬಿಡು  ನಿನ್ನೆಗಳ ನೆನಪುಗಳನ್ನು
ಕಣ್ಣಲ್ಲಿ ಬಚ್ಚಿಟ್ಟ ಕನಸುಗಳನ್ನು  
ಜೊತೆಯಲಿ ನಕ್ಕು ನಲಿದ ಕ್ಷಣಗಳನ್ನು

ಮತ್ತೆ ಎಣಿಸದಿರು ಅತ್ತು ಹಗುರಾದ ಕಣ್ಣಹನಿಗಳನು
ಜೊತೆಯಲಿ ಕೈ ಹಿಡಿದು ನೆಡೆದ ಕ್ಷಣಗಳನು

ಸದಾ ನಿನ್ನ ಕಣ್ಣಂಚಿನ ಖುಷಿಯಲಿ
ನನಗೊಂದು ಸಣ್ಣ ಪಾಲಿರಲಿ
ನಿನಗೆ ನಿನ್ನದೇ ನಾಳೆಗಳಿವೆ
ನೆನ್ನೆಯ ಕಹಿ ನೆನಪನು ಮರೆಯಲು 

ನಿನ್ನ ಹೊಳೆವ ಬದುಕಲಿ ಮತ್ತೆ ನೆನೆಯದಿರು 
ನನ್ನನ್ನು , ನೋವ ನೀಡುವ ನೆನ್ನಗಳನು 
 ಮರೆತುಬಿಡು ನೀ ನನ್ನ ನ್ನು
ಅಳಿಸಿಬಿಡು ನನ್ನ ಹೆಸರನ್ನು..!!
-ಮನು



Sunday, 3 January 2016

ಕವನ-60

ಕನಸುಗಳು ..ಕವನಗಳು..!!


ನನ್ನ ಒ೦ದೊ೦ದು ಕನಸುಗಳು.
ಅರಳುತ್ತವೆ... ಕಮರುತ್ತವೆ....
ನನ್ನ ಕನಸಲಿ ಒಲವಾದ  ಹುಡುಗಿ
ನನ್ನ ಬಾಳಿಗೆ ವರವಾಗಲಿಲ್ಲ

ಕಣ್ಣ ಸನ್ನೆಯಲಿ ಬರೆಸಿದಳು ನೂರಾರು ಕವಿತೆ
ಆ ಕಣ್ಣ ನೋಟಕೆ ಇದೆಯಾ ಸರಿಯಾದ ಅಳತೆ
ನೂರಾರು ಕನಸುಗಳು
ನೂರಾರು ಕವನಗಳು

ಸ್ತಭ್ಧವಾಗಿವೆ ಕನಸುಗಳು
ಬರಿದಾಗಿವೆ ಕಲ್ಪನೆಗಳು
ನಡುಗುತಿವೆ ಬೆರಳುಗಳು
ಅಳುಕುತಿವೆ ಭಾವನೆಗಳು

ಒಲವಿಲ್ಲದ ದಾರಿಯಲ್ಲಿ ಕಡು 
 ಕಪ್ಪು ನೆರಳಿನ ಛಾಯೆ
ಪುನಃ ಕರೆದಿವೆ  ಕವನಗಳು
ಇಣುಕಿ ನೋಡಿವೆ ಕನಸುಗಳು
ನಗುವ ಭಯಸಿ ಮನವು ಹೊರಟಿದೆ
ತನ್ನಯ ಕಲ್ಪನೆಯ ಲೋಕಕ್ಕೆ
                       -ಮನು








Thursday, 17 December 2015

ಕವನ-59

ನೀನಿರದೇ..!!

ನೀ  ತೊರೆದ ಆ ಗಳಿಗೆ 
ರಂಗೇರಿದ ನೀಲಿ ಬಾನಲ್ಲಿ ಕಾರ್ಮೋಡ ಕರಿನೆರಳು
ಅಲಲ್ಲಿ ಕ್ಕಿಗಳ ಚಿಲಿಪಿಲಿ ನಾದಾ
ಬೂರ್ಗೊರೆವ ಸಾಗರದ ಅಲೆಗಳು.

ನೀನಿರದ ಈ  ಸಂಜೆಯಲಿ ಆತಂಕ ಮನೆಮಾಡಿದೆ
ಕೂಗಿಲೆಯ ದನಿಯಲ್ಲಿ ಮೊದಲ ಇಂಪಿಲ್ಲ
ಅರಳಿದೆ ಹೂವಲ್ಲಿ  ಇನಿತು ಕಂಪಿಲ್ಲ
ಬೀಸುವ ಗಾಳಿಯಲ್ಲಿ ಒಂದಿನಿತೂ ತಂಪಿಲ್ಲ.

ನೀನಿರದ ಆ ಸಮಯ ನೆನಪುಗಳು ಕಾಡಿವೆ
ಮನದಲಿ ಕಾಣದ ನೋವೊಂದು ಆವರಿಸಿದೆ
ಮಾತು ಮೌನವಾಗಿ ಮನಸು 
ಬಾರವಾಗಿ  ನಿನ್ನ  ಮಾತು ಕೇಳದಾಗಿದೆ.


ನೀನಿರದೇ  ಬಾಳಿಗಿಲ್ಲ ಅರ್ಥ
ಬಾಳೆನಿಸುವುದು ವ್ಯರ್ಥ
ನೀನಿರದ ಬದುಕು ಬದುಕಲ್ಲ ಗೆಳತಿ ಬಂದುಬಿಡು 
ಬೆಳಕಂತೆ ಮುಸುಕಿರುವ ಮಬ್ಬನ್ನು ಸರಿಸು
                                   -ಮನು


Thursday, 10 December 2015

ಕವನ-58


ಸಾವು..!!

ಸತ್ತಾಗ ಗುಂಡಿಯ ಮುಂದೆ ನಿಂತು ಅಳುವರು 
ಅಂತೂ ಹೋದನೆಂಬ ಹರುಷಕ್ಕೋ ?
ಇಲ್ಲ ಕಳೆದುಕೊಂಡೆನೆಂಬ ದುಃಖಕ್ಕೊ ?

ಬದುಕ್ಕೀದಾಗ  ನೀ ಯಾರೆಂದು ಕೇಳದವರು
ಇಂದು ನೀ ಇಲ್ಲವೆಂದು ಮರುಗುತಿಹರು
ಇದ್ದಾಗ ನಿನ್ನ ಕಂಡು ಕನಿಕರಿಸದವರು

ಸತ್ತಾಗ ಎಲ್ಲರೂ ದೇವರಂತೆ 
ಬಗೆ ಬಗೆ ಹೂವಿನ ಅಲಂಕಾರವಂತೆ 
ಪೂಜೆ ಪುನಸ್ಕಾರವಂತೆ 

ಮೂರಿಡೀ ಮಣ್ಣಾಕಿ ಮರೆತೋಗುವರು
ಇಂತಿರುಗಿಯೂ ನೋಡದೆ ನೆಡೆಯುವರು
ನೀ ಯಾರೆಂದು ತಿಳಿಯದವರು

ಸಾವಿನ ಸೂತಕದ ಛಾಯೆ
ಮನದೊಳಗೊ, ಮನೆಯೊಳಗೊ.... 
ಮಸಣದೊಳಗೊ ??
                   -ಮನು