Thursday, 17 September 2015

ಕವನ-48


ಮೌನ..!!



ನಿನ್ನ ಮೊದಲು ಕಂಡಾಗ ಮುಂಜಾನೆಯೋ,
ಮುಸ್ಸಂಜೆಯೋ ತಿಳಿದಿಲ್ಲ,
ನಿನ್ನ ಕಂಡಾಗಲೇ ಹೃದಯ ಜಾರಿದ್ದು
ಮನಸು ಮಗುವಾಗಿ ನಿನ್ನನೇ ಬೇಡಿದ್ದು.

ನಿನ್ನ ನೆನಪು ಕಾಡೊದು ಸ್ನೇಹದಿಂದಲೋ,
ಪ್ರೀತಿಯಿಂದಲೋ ನೆನಪಿಲ್ಲ,
ನಿನ್ನ ನೆನಪೇ ಕನಸ ಕದಿದ್ದು 
ಒಲವಿನ ಹನಿಗವನವ ಗೀಚಿದ್ದು.

ನಿನ್ನ ಒಲವು ಬರಿ ಕನಸೋ,
ಕಲ್ಪನೆಯೋ ಸುಳಿವಿಲ್ಲ,
ನಿನ್ನ ಒಲವಿಂದ ಮಾತು ಮೂಡಿದ್ದು
ಕವನಕ್ಕೆ ಶೀರ್ಷಿಕೆಯಾಗಿ  ಉಳಿದದ್ದು.

                                 -ಮನು



Wednesday, 9 September 2015

ಕೆಂಡ ಸಂಪಿಗೆ ಹಾಡು..


Kendasampige kannada movie song | kannada movie song | ilijaru kendasampige kannada song lyrics | kendasampige kannada song lyrics



ಕೆಂಡಸಂಪಿಗೆ - ಇಳಿಜಾರು ಹಾದಿ 
---------- 

ಇಳಿಜಾರು ಹಾದಿಯಿದು ಮುಗಿದಂತೆ ಕಾಣುವುದು  ಹಿಂತಿರುಗಿ ನೋಡಿದರೆ ಅಲ್ಲೊಂದು ತುದಿ, ಮುಂತಿರುಗಿ ಓಡಿದರೆ ಮುಂದೊಂದು ತುದಿ..! ಅಂಗಾಲಿಗೆ ಭೂಮಿಯನ್ನೆ ಕಟ್ಟಿಕೊಂಡ ಕಾಲು, ಎಲ್ಲಿ ಹೋದರೇನು? ಎಲ್ಲಿ ಬಂದರೇನು? ಎಲ್ಲಿ ನಿಂತರೇನು? ಎಲ್ಲಿ ಕುಂತರೇನು? 
ಎರಡು ತುದಿಗಳ ನಡುವೆ ಗೆರೆಯನೆಳೆದರೆ ದಾರಿ ನೂರು ಗುರಿಗಳ ನಡುವೆ ಅಡಗಿ ಕೂತಿದೆ ಗೋರಿ., ಮುಗಿಯೆತೆನ್ನುವ ಪಯಣ ಇಲ್ಲ ಎಲ್ಲೂ, ಆದಿ ಅಂತ್ಯಗಳೆರಡು ಸುಳ್ಳೆ ಸುಳ್ಳು.. ಅಂಗಾಲಿಗೆ ಕೆಂಡವನ್ನೆ ಕಟ್ಟಿಕೊಂಡ ಕಾಲು, ಎಲ್ಲಿ ನಿಂತರೇನು? ಎಲ್ಲಿ ಕುಂತರೇನು? ಎಲ್ಲಿ ಹೋದರೇನು? ಎಲ್ಲಿ ಬಂದರೇನು? 
ಊರು ಊರಿನ ನಡುವೆ ಟಾರು ಹುಯ್ದವರಾರು? ಮೈಲಿಗಲ್ಲನು ಊರಿ ಊರು ಅಂದವರಾರು? ಯಾರ ತೋರ ಬೆರಳ ನಂಬಿ ಬಂದೆವು? ನಾವೇ ನಮ್ಮ ನೆರಳ ಎಂದೋ ಕೊಂದೆವು! ಎಲ್ಲಾ ಪಯಣದ ದಿಕ್ಕು ಮಣ್ಣು ಎಂದಮೇಲೆ, ಜೀವವಿದ್ದರೇನು? ಇಲ್ಲದಿದ್ದರೇನು? ದಾರಿ ಎಂದರೇನು? ದಿಕ್ಕು ಎಂದರೇನು?

-ಯೋಗರಾಜ್ ಭಟ್ 


ಕವನ-47


ನೀನಿಲ್ಲದೆ..!!

ಕಲ್ಪನೆಯ ಕಡಲು ಬತ್ತಿದೆ .
ಭಾವನೆಗಳ ಬರೆಯಲು ಸ್ಥಳವಿಲ್ಲ
ವಾಸ್ತವತೆಯ ಒಡಲು ತುಂಬಿದೆ.
ಕಾರಣಗಳ ತಿಳಿಯಲು ಮನಸಿಲ್ಲ.
ಕತ್ತಲೆಯಲ್ಲಿ ಕನಸ್ಸುಗಳು ಹುಟ್ಟಿದೆ
ಹಿಂಬಾಲಿಸುವ ಮಾರ್ಗವ ಕಂಡಿಲ್ಲ
ನಗು ಮೊಗದ ಹೊಳಪು ಮಾಸಿದೆ
ಬಣ್ಣಗಳನ್ನು ಹಚ್ಚಲು ತಿಳಿದಿಲ್ಲ
ಕರೆದಂಥ ನಿನ್ನ ಹೆಸರ ಸುಳಿವಿದೆ
ಮತ್ತೊಮ್ಮೆ ಕರೆಯಲು ನೆನಪಿಲ್ಲ.    

                        -ನಿನ್ನವ ಮನು