ಅಪ್ಪುಗೆಯ ಮನಸ್ಸು..!!
ಆಗಸದಿ ತುಂತುರು ಹನಿಯೂ ಜಿನುಗುತ್ತಿರಲು
ಚಳಿಯಲ್ಲಿ ಮೈ ಕೊರೆಯುತ್ತಿರಲು
ತಂಪಾದ ಗಾಳಿ ಬೀಸುತ್ತಿರಲು
ಒಮ್ಮೆ ನೆನೆದೆ ಆ ನಿನ್ನ ನಗುವ
ಜೊತೆಯಲ್ಲಿ ಕಳೆದ ಮಧುರ ಕ್ಷಣವ
ಜಿನುಗುವ ಹನಿಯೂ ನೀನ್ನ ಹೆಸರಂತೆ
ಬೀಸುವ ಗಾಳಿಯು ನಿನ್ನ ಉಸಿರಂತೆ
ಅಪ್ಪುಗೆಯ ನೀಡಿದೆ ನಿನ್ನ ಮನದಂತೆ
ನೆನೆದು ನೆನೆದು ಮರುಗಿದೆ ನಾ ನಿನ್ನ
ಓಡಿ ಬಂದು ಅಪ್ಪಿಕೋ ನನ್ನಯ ಮನಸನ್ನ
-ಮನು